ಚೆನ್ನೈ (ಸೆ. 01): ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಹಾಗೂ ರಾಸಾಯನಿಕಗಳನ್ನು ಬಳಸಿದ ಗಣಪತಿ ವಿಸರ್ಜನೆಯಿಂದ ಪರಿಸರಕ್ಕೆ ಹಾನಿ ಆಗುತ್ತಿರುವುದರಿಂದ ಜನರು ಇತ್ತೀಚಿನ ದಿನಗಳಲ್ಲಿ ಪರಿಸರ ಸ್ನೇಹಿ ಗಣಪತಿ ಬಳಸುತ್ತಿರುವುದು ಹೆಚ್ಚಾಗುತ್ತಿದೆ.

ಪಿಒಪಿ ಗಣೇಶ ವಿಸರ್ಜನೆಗೆ 10 ಸಾವಿರ ರು. ದಂಡ!

ಈ ನಿಟ್ಟಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿರುವ ತಮಿಳುನಾಡಿನ ತೋಟಗಾರಿಕೆ ಇಲಾಖೆ ಸಸ್ಯಗಳ ಬೀಜಗಳನ್ನು ಇಟ್ಟಿರುವ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಮಾರಾಟವನ್ನು ಪರಿಚಯಿಸಿದೆ. ಈ ಗಣೇಶ ಮೂರ್ತಿಯ ವಿಶೇಷತೆಯೆಂದರೆ ಇದನ್ನು ನೀರಿನಲ್ಲಿ ವಿಸರ್ಜಿಸುವ ಬದಲು ಮನೆಯ ಅಂಗಳದಲ್ಲೋ ಅಥವಾ ತೋಟದಲ್ಲೋ ಇಟ್ಟು ನೀರೆರೆದರೆ ಸುಂದರವಾದ ಸಸಿ ಬೆಳೆಯಲಿದೆ.

ತೋಟಗಾರಿಕೆ ಇಲಾಖೆ ಈ ವರ್ಷ 3,000 ಗಣೇಶ ಮೂರ್ತಿಗಳನ್ನು ತಯಾರಿಸಿದೆ. ಅವು ಟೇನಾಂಪೇಟ್‌ನಲ್ಲಿರುವ ಸೆಮ್ಮೋಜಿ ಪಾರ್ಕ್ನಲ್ಲಿ ಮಾರಾಟಕ್ಕೆ ಲಭ್ಯವಿದೆ ಎಂದು ತೋಟಗಾರಿಕೆ ಇಲಾಖೆಯ ಮುಖ್ಯಸ್ಥ ಎನ್‌. ಸುಬ್ಬಯ್ಯನ್‌ ತಿಳಿಸಿದ್ದಾರೆ.

ಕಡುಬು, ಲಾಡು, ಮೋದಕ... ಮಾಡಿ ತಂದೆ ವಿನಾಯಕ!

ವಿಶೇಷತೆ ಏನು?

ಪ್ರತಿಯೊಂದು ಗಣೇಶ ಮೂರ್ತಿಯನ್ನು ಮಣ್ಣಿನ ಮಡಿಕೆಯಲ್ಲಿ ಇಡಲಾಗಿದ್ದು, ಅದಕ್ಕೆ 200 ರು.ನಿಗದಿಪಡಿಸಲಾಗಿದೆ. ಗಣೇಶ ಮೂರ್ತಿಯ ಒಳಗಡೆ ಬದನೆಕಾಯಿ, ಟೊಮೆಟೊ, ಹಸಿ ಮೆಣಸು, ಹಸಿರು ತರಕಾರಿಗಳ ಬೀಜವನ್ನು ಇರಿಸಲಾಗಿದೆ. ಮೂರ್ತಿಯನ್ನು ವಿಸರ್ಜಿಸುವ ಬದಲು ನೀರೆರೆದು ಪೋಷಿಸಿದರೆ ಅದರಲ್ಲಿ ಸಸಿ ಬೆಳೆಯಲಿದೆ.