ಆರ್‌ಜೆ ಶ್ರೀನಿ ನಿರ್ದೇಶನದ ‘ಬೀರ್‌ಬಲ್’ ಟ್ರಯಾಲಜಿಯ ‘ಫೈಂಡಿಂಗ್ ವಜ್ರಮುನಿ’ ಸಿನಿಮಾ ಜನವರಿ ತಿಂಗಳಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದೆ.

ಹತ್ತಿರವಾಗುತ್ತಿರುವಂತೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ತಮ್ಮ ನೆಚ್ಚಿನ ಗುರು ಅನಿಸಿಕೊಂಡಿರುವ ಉಪೇಂದ್ರ ಅವರಿಂದಲೇ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿಸಿದ್ದಾರೆ.

Add Asianetnews Kannada as a Preferred SourcegooglePreferred

‘ಟೋಪಿವಾಲ’ ಚಿತ್ರವನ್ನು ತಮ್ಮ ಗುರುಗಳಿಗಾಗಿ ನಿರ್ದೇಶನ ಮಾಡುವ ಮೂಲಕ ಚಿತ್ರರಂಗಕ್ಕೆ ಬಂದವರು ಶ್ರೀನಿ. ಆ ನಂತರ ‘ಶ್ರೀನಿವಾಸ ಕಲ್ಯಾಣ’ ಚಿತ್ರದ ಮೂಲಕ ಹೀರೋ ಆದರು. ಈಗ ‘ಬೀರ್‌ಬಲ್’ ಟ್ರಯಾಲಜಿಗೂ ಶ್ರೀನಿ ನಾಯಕ. ರುಕ್ಮಿಣಿ ವಸಂತ್ ಚಿತ್ರದ ನಾಯಕಿ. ಸದ್ಯ ಬಿಗ್‌ಬಾಸ್ ಮನೆಯಲ್ಲಿರುವ ಕವಿತಾ ಗೌಡ ಕೂಡ ಚಿತ್ರದಲ್ಲೊಂದು ಮುಖ್ಯ ಪಾತ್ರ ಮಾಡಿದ್ದಾರೆ.

‘ಬೀರ್‌ಬಲ್ ಟ್ರಯಾ ಲಜಿಯ ಮೊದಲ ಹಂತವಾಗಿ ‘ಫೈಂಡಿಂಗ್ ವಜ್ರಮುನಿ’ ಬಿಡುಗಡೆಗೆ ಸಜ್ಜಾಗಿದೆ. ಹೀಗಾಗಿ ಚಿತ್ರದ ಮೊದಲ ಭಾಗದ ಟ್ರೇಲರ್ ಬಿಡುಗಡೆ ಮಾಡಿದ್ದೇವೆ. ಟಿ.ಆರ್. ಚಂದ್ರಶೇಖರ್ ಈ ಚಿತ್ರದ ನಿರ್ಮಾಪಕರು. ಸೆನ್ಸಾರ್ ಅಂಗಳದಲ್ಲಿರುವ ಈ ಚಿತ್ರವನ್ನು ಜನವರಿಯಲ್ಲಿ ಬಿಡುಗಡೆ ಮಾಡುವ ಯೋಚನೆಯಲ್ಲಿದ್ದೀವಿ. ಟ್ರೇಲರ್‌ಗೆ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ.’ ಎನ್ನುತ್ತಾರೆ ಶ್ರೀನಿ.