ನನ್ ಲೈಫಲ್ಲಿ ಯಾವುದೂ ಕೂಡ ಬೇಗನೇ ಬರ್ಲಿಲ್ಲ. ನಾನು ಚಿತ್ರರಂಗದಲ್ಲಿ ಕೂಡ ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡೇ ಬೆಳೆದವಳು. ನಾನು ಹಿರೋಯಿನ್ ಆಗಿದ್ದು ಕೂಡ ಲೇಟ್, ಹಾಗೇ ನನಗೆ ರಾಷ್ಟ್ರೀಯ ಪ್ರಶಸ್ತಿ ಬಂದಿದ್ದು ಸಹ ಲೇಟ್. ನನ್ನ ಮದುವೆ ಆಗಿದ್ದು, ನನಗೆ ಮಗು ಆಗಿದ್ದು..
ನಟಿ ತಾರಾ (Tara Anuradha) ಯಾರಿಗೆ ಗೊತ್ತಿಲ್ಲ? ಅಪ್ಪಟ ಕನ್ನಡತಿ ನಟಿ ತಾರಾ ಅನುರಾಧಾ ಅವರು ರಾಷ್ಟ್ರೀಯ ಪ್ರಶಸ್ತಿಯನ್ನೂ ಪಡೆದಂತಹ ಪ್ರತಿಭೆ. ಅವರು ನಟಿಸಿದ ಸಿನಿಮಾಗಳ ಪಟ್ಟಿ ಬಹಳ ದೊಡ್ಡದಿದೆ. ಎಲ್ಲಾ ತರಹದ ಪಾತ್ರಗಳನ್ನು ಮಾಡಿರುವ ನಟಿ ತಾರಾ ಅವರು ಯಾವುದೇ ಪಾತ್ರವನ್ನು ಕೊಟ್ಟರೂ ಸಹ ಅದಕ್ಕೆ ನ್ಯಾಯ ಒದಗಿಸುವವರು ಅಂತ ಫೇಮಸ್ ಆಗಿರುವ ಕಲಾವಿದೆ. ಇಂಥ ಅಪರೂಪದ ಕಲಾವಿದೆಯ ಅಪರೂಪದಲ್ಲಿ ಅಪರೂಪ ಎನ್ನುವಂತಹ ಸಂದರ್ಶನವೊಂದು 'ಬಿ ಗಣಪತಿ' ಚಾನೆಲ್‌ನಲ್ಲಿ ಮೂಡಿಬಂದಿದೆ. ಅದರ ಆಯ್ದ ಭಾಗವೊಂದು ಇಲ್ಲಿದೆ ನೋಡಿ..
ನನಗೆ ಲೈಫಲ್ಲಿ ಗಟ್ಟಿಯಾದ ಮುತ್ತೈದೆತನ ಬೇಕು ಅಂತ ಇತ್ತು. ಆ ಟೈಮಲ್ಲಿ ಸಿಕ್ಕವರೇ ವೇಣು. ನಮ್ಮಿಬ್ಬರ ಮದುವೆ ಆಗೋ ಮೊದಲು ನಮ್ಮಿಬ್ಬರ ಮೆಡಿಕಲ್ ಟೆಸ್ಟ್‌ಗಳು ಆಯ್ತು.. ಯಾಕಂದ್ರೆ, ನಾವಿಬ್ರೂ ಮೂವತ್ತು ವರ್ಷ ದಾಟಿದ್ವಿ. ಅಷ್ಟೇ ಅಲ್ಲ, ನೀವಿಬ್ರೂ ಶಾಸ್ತ್ರಕ್ತವಾಗಿ ಮದುವೆ ಆಗೋ ಮೊದಲು ರಿಜಿಸ್ಟರ್ ಮದ್ವೆ ಆಗ್ಬೇಕು ಅಂದ್ರು, ಅದೂ ಆಯ್ತು. ಮಾರ್ಚ್ 90ಕ್ಕೇನೋ ರಿಜಿಸ್ಟರ್ ಆಗಿ, ಮಾರ್ಚ್ 20ಕ್ಕೆ ಮದುವೆ ಆಯ್ತು..
ಅವ್ನು ಚೆನ್ನಾಗಿಲ್ಲ, ಅವ್ನು ಹಂಗಿದಾನೆ ಹಿಂಗಿದಾನೆ ಅಂತ ಹೇಳಿರೋದೇ ನಮ್ ದೊಡ್ಡಪ್ಪ.. ಆದ್ರೆ, ಫಸ್ಟ್ ಫ್ರಂಡ್ ಆಗಿರೋದೇ ನಮ್ ದೊಡ್ದಪ್ಪ.. ಅವ್ರು ಖುಷಿಯಾಗಿ ಜೊತೆಯಾಗಿ ಇದ್ರು.. ನಮ್ಮ ತಂದೆ ಹಿಂದೇಟ್ ಹಾಕಿದ್ರು, ಏನೇನೋ ಮಾಡಿದ್ರು, ಆದ್ರೆ ಅವ್ರೂ ಕೂಡ ವೇಣುಗೆ ಹತ್ರ ಆಗೋಕೆ ನೋಡಿದ್ರು.. ಅವ್ರೆಲ್ರೂ ಹತ್ರ ಆದ್ರು.. ನಮ್ಮ ಎರಡೂ ಫ್ಯಾಮಿಲಿ ಪರಸ್ಪರ ಹತ್ರ ಆದ್ರು.. ವೇಣು ಅವ್ರಲ್ಲಿ ಇದ್ದ ಸ್ವಾಭಿಮಾನ, ವೇಣು ಅವ್ರಲ್ಲಿ ಇರೋ ಸೆಲ್ಪ್ ರೆಸ್ಪೆಕ್ಟ್ ನಂಗೆ ತುಂಬಾ ಮುಖ್ಯ ಆಯ್ತು..
ಅದ್ರಲ್ಲೂ ಮುಖ್ಯವಾಗಿ, ವೇಣು ಅವ್ರಿಗೆ ಮಹಿಳೆ ಬಗ್ಗೆ ಇರೋ ಗೌರವ ನಂಗೆ ತುಂಬಾ ಇಷ್ಟ ಆಯ್ತು... ಅವ್ರಿಗೆ ಅಕ್ಕ-ತಂಗಿಯರ ಜೊತೆ ದೊಡ್ಡ ಕುಟುಂಬದಲ್ಲಿ ಬೆಳೆದು ಗೊತ್ತು. ಹೀಗಾಗಿ ಅವ್ರಿಗೆ ಹೆಣ್ಣುಮಕ್ಕಳ ಬಗ್ಗೆ ತುಂಬಾ ಗೌರವ ಇದೆ. ಅದು ನಂಗೆ ವೇಣು ಅವ್ರಲ್ಲಿ ತುಂಬಾ ಇಂಪ್ರೆಸ್ ಆಯ್ತು. ಅದು ನಂಗೆ ಅವ್ರಲ್ಲಿ ತುಂಬಾ ಖುಷಿ ಕೊಟ್ಟ ಸ್ವಭಾವ. ಒಟ್ನಲ್ಲಿ, 'ನಾವಿಬ್ರೂ ಮೇಡ ಫಾರ್ ಈಚ್ ಅದರ್' ಅನ್ನೋ ರೀತಿಯಲ್ಲಿ ಹೊಂದಾಣಿಕೆ ಆಗೋಕೆ ಶುರುವಾಯ್ತು.
ನನ್ ಲೈಫಲ್ಲಿ ಯಾವುದೂ ಕೂಡ ಬೇಗನೇ ಬರ್ಲಿಲ್ಲ. ನಾನು ಚಿತ್ರರಂಗದಲ್ಲಿ ಕೂಡ ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡೇ ಬೆಳೆದವಳು. ನಾನು ಹಿರೋಯಿನ್ ಆಗಿದ್ದು ಕೂಡ ಲೇಟ್, ಹಾಗೇ ನನಗೆ ರಾಷ್ಟ್ರೀಯ ಪ್ರಶಸ್ತಿ ಬಂದಿದ್ದು ಸಹ ಲೇಟ್. ನನ್ನ ಮದುವೆ ಆಗಿದ್ದು, ನನಗೆ ಮಗು ಆಗಿದ್ದು ಎಲ್ಲವೂ ಲೇಟ್. ನನಗೆ ಜೀವನದಲ್ಲಿ ಏನೇ ಬಂದಿದ್ದರೂ ಅದು ಲೇಟ್ ಆಗಿಯೇ ಬಂದಿದೆ. ಆದರೆ, ನನಗೆ ಬಂದಿದ್ದೆಲ್ಲವೂ ಜೀವನದುದ್ದಕ್ಕೂ ಜೊತೆಗೇ ಇರುವಂತಹುದು. ಆ ವಿಷಯದಲ್ಲಿ ನಾನು ತುಂಬಾ ಅದೃಷ್ಟಶಾಲಿ' ಎಂದಿದ್ದಾರೆ ನಟಿ ತಾರಾ.
