ನನ್ ಮಗ್ನಿಂದ ನಂಗೆ ಒಳ್ಳೇ ಅಭಿಪ್ರಾಯ ಸಿಕ್ಕಿದ್ರೂ ಇಲ್ಲಾ ಅಂದ್ರೂ ನಾನು ಮಾಡಿಯೇ ಮಾಡ್ತೀನಿ.. ನಾನು ಬಂದ ದಾರಿಯಿಂದ ವಾಪಸ್ ಹೋಗೋ ಜಾಯಮಾನನೇ ಅಲ್ಲ.. ಅವ್ನು ನನ್ ಸಿನಿಮಾನ ಎಲ್ಲಿದ್ರೂ ನೋಡ್ತಾನೆ.. ಸಿನಿಮಾ ಮಾಡೋಕೆ ನಂಗೆ ಅವ್ನು..

ಕನ್ನಡದ ಪ್ಯಾನ್ ಇಂಡಿಯಾ ನಟ, ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರ ಅಮ್ಮ ಪುಷ್ಪಾ ಅರುಣ್ ಕುಮಾರ್ (Pushpa Arun Kumar) ಅವರು ‘ಕೊತ್ತಲವಾಡಿ’ ಸಿನಿಮಾ ನಿರ್ಮಿಸಿ, ತೆರೆಗೆ ತಂದಿದ್ದು ಗೊತ್ತೇ ಇದೆ. ಚಿತ್ರವು ಈಗಲೂ ಹಲವಾರು ಕಡೆ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಅಮ್ಮನ ಈ ಸಿನಿಮಾವನ್ನು ಮಗ ಯಶ್ ನೋಡಿದ್ದಾರಾ? ಸೊಸೆ ರಾಧಿಕಾ ಪಂಡಿತ್ (Radhika Pandit) ನೋಡಿದ್ದಾರಾ ಅಂತ ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ಕೇಳಿ ಕಾಮೆಂಟ್ ಹಾಕಿದ್ದಾರೆ. ಹಲವು ಮೀಡಿಯಾಗಳಲ್ಲಿ ಹಾಗೂ ಯೂಟ್ಯೂಬ್ ಸಂದರ್ಶನಗಳಲ್ಲಿ ಕೂಡ ಹಲವರು ಈ ಬಗ್ಗೆ ಪುಷ್ಪಾ ಅವರನ್ನು ಕೇಳಿದ್ದಾರೆ.

ಅಮ್ಮನ (Kothalavadi) ಸಿನಿಮಾವನ್ನು ಮಗ ಯಶ್ ಹಾಗೂ ಸೊಸೆ ರಾಧಿಕಾ ನೋಡಿದ್ದಾರೆಯೇ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಆ ಬಗ್ಗೆ ಯಶ್ ಅಮ್ಮ ಪುಷ್ಪಾ ಅರುಣ್‌ ಕುಮಾರ್ ಅವರು ಸ್ವತಃ ಒಂದು ಸಂದರ್ಶನದಲ್ಲಿ ಉತ್ತರ ಕೊಟ್ಟಿದ್ದಾರೆ. ಅವರೇನು ಹೇಳಿದ್ದಾರೆ ನೋಡಿ.. ಯಶ್ ಸಿನಿಮಾ ನೋಡಿದ್ದಾರೆ, ರಾಧಿಕಾ ಪಂಡಿತ್ ಕೂಡ ನೋಡಿದ್ದಾರೆ. ನನ್ನ ಮಗಳು ನಂದಿನಿ ಕೂಡ ನೋಡಿದ್ದಾರೆ. ಅವರೆಲ್ಲಾ ಇಷ್ಟಪಟ್ಟು ಮಾತನಾಡಿದ್ದಾರೆ ಎಂದಿದ್ದಾರೆ ಪುಷ್ಪಾ ಮೇಡಂ. ಅವರು ಹೇಳಿದ್ದು ಮುಂದೆ ಇದೆ, ನೋಡಿ..

'ತುಂಬಾ ಖುಷಿಯಾಗಿ ಇದೀಯಾ.. ಆರಾಂ ಆಗಿ ಇರು.. ಚೆನ್ನಾಗಿ ಇರು.. ಗೊತ್ತಲ್ಲ, ನೀನು ಪ್ರಯಾಣ ಮಾಡ್ಕೊಂಡು ಬಂದಿದೀಯ.. ಇದೀನಿ ಹೊಸತಲ್ಲ, ನಂಗೇ ನೀನು ಹೇಳ್ತಾ ಬಂದಿದೀಯ.. ಮುದ್ಕಿ, ಗೊತ್ತಲ್ಲ ನಿಂದು, ನಾನು ನಿನ್ ನೋಡಿದೀನಿ, ನೀನು ನನ್ ನೋಡಿದೀಯ.. ನೀನು ಗಟ್ಟಿಯಾಗಿರ್ತೀಯಾ ಅಂತ ಗೊತ್ತು. ನಿನ್ ಥಾಟ್‌ ನೀನು ಚೆನ್ನಾಗಿ ಮಾಡಿದೀಯ.. ನಿನ್ ಇಡೀ ಟೀಂಗೆ ನನ್ ಥ್ಯಾಂಕ್ಸ್ ಹೇಳ್ಬಿಡು.. ಮುಂದಿನ ದಿನಗಳಲ್ಲಿ ನೀನು ಮಾಡ್ತೀಯ ಅಂತ ಹೋಪ್ಸ್ ಇದೆ ಅಂತ ಹೇಳಿದ್ರು..

ಅವ್ರಿಂದ ಒಳ್ಳೇ ರೆಸ್ಪಾನ್ಸ್ ಸಿಕ್ತು ನಂಗೆ.. ಸಿಕ್ಕಿಲ್ಲ ಅಂದ್ರೂ ನಾನು ಮಾಡೇ ಮಾಡ್ತೀನಿ.. ನನ್ ಮಗ್ನಿಂದ ನಂಗೆ ಒಳ್ಳೇ ಅಭಿಪ್ರಾಯ ಸಿಕ್ಕಿದ್ದೂ ಇಲ್ಲಾ ಅಂದ್ರೂ ನಾನು ಮಾಡಿಯೇ ಮಾಡ್ತೀನಿ.. ನಾನು ಬಂದ ದಾರಿಯಿಂದ ವಾಪಸ್ ಹೋಗೋ ಜಾಯಮಾನನೇ ಅಲ್ಲ.. ಅವ್ನು ನನ್ ಸಿನಿಮಾನ ಎಲ್ಲಿದ್ರೂ ನೋಡ್ತಾನೆ.. ಸಿನಿಮಾ ಮಾಡೋಕೆ ನಂಗೆ ಅವ್ನು ಕೊಟ್ಟೇ ಕೊಡ್ತಾನೆ.. ಒಂದ್ವೇಳೆ ಹಣ ಕಳ್ಕೊಂಡ್ರೂ ಏನ್ರಿ ಕಳ್ಕೋತೀವಿ? ಬರ್ತಾ ತಂದಿದೀವಾ? ಹೋಗ್ತಾ ತಗೊಂಡು ಹೋಗ್ತೀವಾ? ಇಲ್ಲಿ ದುಡಿತೀವಿ, ಇಲ್ಲಿ ಕಳ್ಕೋತೀವಿ..

ಯಶ್ ರೀವ್ಯೂ ತುಂಬಾ ಚೆನ್ನಾಗಿದೆ, ನಮ್ ರಾಧಿಕಾನೂ ಹೇಳಿದ್ರು.. ಹಾಗೇ ನಮ್ ಮಗಳು ನಂದಿನಿ ಕೂಡ ಸಿನಿಮಾ ನೋಡಿ ಅಭಿಪ್ರಾಯ ಹೇಳಿದಾರೆ. ಅವರೆಲ್ಲರೂ ನಮ್ ಸಿನಿಮಾನ ಇಷ್ಟಪಟ್ಟಿದಾರೆ. ಅವ್ರಿಗೆಲ್ಲಾ ಗೊತ್ತು, ಬಂದ್ಮೇಲೆ ಅಮ್ಮ ವಾಪಸ್ ಹೋಗಲ್ಲ ಅಂತ ಅವ್ರಿಗೆಲ್ಲಾ ಗೊತ್ತು. ನಿಮ್ಗೆ ಹಾಗೂ ಸಿನಿಮಾ ಪ್ರೇಕ್ಷಕರಿಗೆ ಕೂಡ ಆಮೇಲೆ ಗೊತ್ತಾಗುತ್ತೆ' ಎಂದಿದ್ದಾರೆ ಕನ್ನಡದ ರಾಕಿಂಗ್ ಸ್ಟಾರ್, ಪ್ಯಾನ್ ಇಂಡಿಯಾ ನಟ ಯಶ್.