ಒಂದಾದ ಮೇಲೊಂದು ಯಶಸ್ಸು ಕಾಣುತ್ತಿರುವ ಮೋಸ್ಟ್‌ ವಾಂಟೆಡ್‌ ಆ್ಯಂಡ್ ಟ್ಯಾಲೆಂಟೆಡ್‌ ನಟಿ ರಶ್ಮಿಕಾ ಮಂದಣ್ಣ ಏನೇ ಮಾಡಿದ್ರೂ ಏನೇ ಹೇಳಿದ್ರೂ ಸದ್ದು ಮಾಡುತ್ತಾ ಅಲ್ಲೊಂದು ವಿವಾದ ಸೃಷ್ಟಿಯಾಗುತ್ತದೆ.

ಮಾಧ್ಯಮವೊಂದರಲ್ಲಿ ‘ಡಿಯರ್ ಕಾಮ್ರೆಡ್’ ಚಿತ್ರ ಸಂದರ್ಶನ ವೇಳೆ ಜೋಷ್‌ನಲ್ಲಿ ಮಾತನಾಡುತ್ತಿದ್ದ ರಶ್ಮಿಕಾ ತನ್ನ ತಂದೆಯ ಮಾತುಗಳುನ್ನು ಹೇಳುವ ಮೂಲಕ ತನ್ನ ಆಸೆಯನ್ನು ಹೊರ ಹಾಕಿದರು.

’ಡಿಯರ್ ಕಾಮ್ರೆಡ್’ ನೋಡಿ ಮಗಳಿಗೆ ಭೇಷ್ ಎಂದ ರಶ್ಮಿಕಾ ತಾಯಿ

 

'90 ದಶಕದ ನಟಿಯರು ಸೂಪರ್. ನನ್ನ ತಂದೆ ಖುಷ್ಬುಗಾಗಿ ಅಭಿಮಾನಿಗಳು ದೇವಸ್ಥಾನ ಕಟ್ಟಿಸಿರುವುದರ ಬಗ್ಗೆ ನನಗೆ ಹೇಳುತ್ತಿದ್ದರು. ಹಾಗೆಯೇ ನನಗೂ ಸ್ಮರಣೀಯ ಪ್ರಾಜೆಕ್ಟ್‌ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿರಬೇಕೆಂಬ ಆಸೆಯಿದೆ'ಎಂದು ಹೇಳಿದ್ದಾರೆ.

ಟಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿರುವ ರಶ್ಮಿಕಾಗೆ ಈಗಾಗಲೇ ಪ್ರೇಕ್ಷಕರು ಫಿದಾ ಆಗಿದ್ದಾರೆ. ದೇವಾಲಯ ನಿರ್ಮಾಣ ಮಾಡಿದ್ರೂ ಮಾಡಬಹುದು ಆಶ್ಚರ್ಯವೇನಿಲ್ಲ ಬಿಡಿ!

ಅನುಷ್ಕಾ ಮಾದರಿ ಕೆಲಸ ರಶ್ಮಿಕಾಗೆ ಬಂತು ಗ್ರಹಚಾರ!