ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ‘ಡಿಯರ್ ಕಾಮ್ರೆಡ್’ ಸಿನಿಮಾ ನೀಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಲಿಲ್ಲಿ- ಬಾಬಿ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ರಶ್ಮಿಕಾ ತಾಯಿ ಸಿನಿಮಾ ನೋಡಿ ಮಗಳ ನಟನೆಯನ್ನು ಮೆಚ್ಚಿಕೊಂಡು ಭೇಷ್ ಎಂದಿದ್ದಾರೆ. 

ಡಿಯರ್ ಲಿಲ್ಲಿ, ನೀನು ನಿನ್ನ ಹೆತ್ತವರು ಹೆಮ್ಮೆಪಡುವಂತೆ ಮಾಡಿದ್ದೀಯಾ. ನೀನು ಆಯ್ಕೆ ಮಾಡಿಕೊಂಡಿರುವ ಕ್ಷೇತ್ರದಲ್ಲಿ ಶೈನ್ ಆಗುತ್ತಿರುವುದಕ್ಕೆ ನಮಗೆಲ್ಲಾ ಖುಷಿಯಾಗುತ್ತಿದೆ. ವಿಜಯ್ ದೇವರಕೊಂಡ ನೀವೂ ಕೂಡಾ ಅದ್ಭುತವಾಗಿ ನಟಿಸಿದ್ದೀರಿ. ನಿಮ್ಮ ಮುಂದಿನ ಪ್ರಾಜೆಕ್ಟ್ ಗಳಿಗೆ ಒಳ್ಳೆಯದಾಗಲಿ ಎಂದು ರಶ್ಮಿಕಾ ತಾಯಿ ಸುಮನ್ ಮಂದಣ್ಣ ವಿಶ್ ಮಾಡಿದ್ದಾರೆ. 

 

ತಾಯಿಯ ಟ್ವೀಟ್ ಗೆ ರಶ್ಮಿಕಾ ಪ್ರತಿಕ್ರಿಯಿಸಿದ್ದಾರೆ. ಅಮ್ಮಾ, ನಿನ್ನ ಹತ್ರವೂ ಫೋನ್ ಇದೆ. ನನ್ನ ಹತ್ರವೂ ಫೋನ್ ಇದೆ. ಯಾವಾಗಲೂ ಕಾಲ್ ಮಾಡಬಹುದು. ಟ್ವೀಟ್ ಗಳನ್ನು ಜನ ಓದುತ್ತಾರೆ. ಮುಜುಗರವಾಗುತ್ತದೆ ಎಂದಿದ್ದಾರೆ. 

ಡಿಯರ್ ಕಾಮ್ರೆಡ್ ಜುಲೈ 26 ರಂದು ರಿಲೀಸ್ ಆಗಿದೆ. ಭರತ್ ಕಮ್ಮ ನಿರ್ದೇಶನ ಮಾಡಿದ್ದಾರೆ.