ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ ರಶ್ಮಿಕಾ ಮಂದಣ್ಣ | ಟಾಲಿವುಡ್ ಆಯ್ತು ಈಗ ಕಾಲಿವುಡ್ ಕಡೆಗೆ ಮುಖ ಮಾಡ್ತಾರಾ?  | ತಮಿಳು ಸ್ಟಾರ್ ಜೊತೆ ರಶ್ಮಿಕಾ ಮಂದಣ್ಣ? 

ಬೆಂಗಳೂರು (ನ. 19): ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಗೀತಾ ಗೋವಿಂದಂ ನಂತರ ಸಾಕಷ್ಟು ಆಫರ್ ಬರುತ್ತಿದೆ. ಈಗಾಗಲೇ ಎರಡು ಚಿತ್ರಗಳು ಕೈಯಲ್ಲಿವೆ. ಗೀತಾ ಗೋವಿಂದಂ ಯಶಸ್ಸಿನ ನಂತರ ಟಾಲಿವುಡ್ ನಲ್ಲಿ ಟಾಕ್ ಆಫ್ ದ ಟೌನ್ ಆಗಿದ್ದಾರೆ ರಶ್ಮಿಕಾ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಕ್ಷಿತ್ ಶೆಟ್ಟಿ ಜತೆ ಹೆಸರು ಕೇಳಿ ಬರ್ತಿರೋ ಈ ನಟಿ ಬಗ್ಗೆ ನಿಮಗೇನು ಗೊತ್ತು?

ಪ್ರಿನ್ಸ್ ಮಹೇಶ್ ಬಾಬು ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ. ಜೊತೆಗೆ ತಮಿಳಿನಿಂದಲೂ ಆಫರ್ ಬಂದಿದೆ ಎನ್ನಲಾಗಿದೆ. ಕನ್ನಡದ ಹುಡುಗಿಯಾಗಿ ಕನ್ನಡಕ್ಕಿಂತಲೂ ಹೆಚ್ಚು ಬೇರೆ ಭಾಷೆಗಳಲ್ಲಿ ಬ್ಯುಸಿಯಾಗಿದ್ದಾರೆ ರಶ್ಮಿಕಾ. 
ತಮಿಳು ಸ್ಟಾರ್ ನಟ ವಿಜಯ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಚಿತ್ರ ತಂಡವಾಗಲಿ, ರಶ್ಮಿಕಾ ಮಂದಣ್ಣರಾಗಲಿ ಅಧಿಕೃತ ಮಾಹಿತಿ ನೀಡಿಲ್ಲ. 

ಜಗ್ಗೇಶ್ ಪ್ರೀತಿ ಹೆಸರು ಮಂತ್ರಾಲಯದ ಬಂಡೆ ಮೇಲೆ!