'ನಂಜುಂಡಿ ಕಲ್ಯಾಣ'ದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮಾಲಾಶ್ರೀ ಅವರು ಆ ಬಳಿಕ ತಿರುಗಿ ನೋಡಿದ್ದೇ ಇಲ್ಲ. ವರ್ಷಕ್ಕೆ ಎರಡು-ಮೂರು ಚಿತ್ರಗಳಲ್ಲಿ ನಟಿಸುತ್ತ ನಟಿ ಮಾಲಾಶ್ರೀ ಅವರು ಹಿಂದೆ ಯಾರೂ ಏರದಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದರು.  

ನಟಿ ಮಾಲಾಶ್ರೀ (Malashri) ಹಾಗೂ ಮಗಳು ಆರಾಧನಾ (Aradhana) ಅವರು ರಾಜಸ್ಥಾನದ 'ಜೈಸಲ್ಮೇರ್'ನಲ್ಲಿ ಓಡಾಡುತ್ತಿದ್ದಾರೆ. ಟೂರ್‌ಗೋ, ಶೂಟಿಂಗ್‌ಗೋ ಗೊತ್ತಿಲ್ಲ, ಆದರೆ ಅಲ್ಲಿ ನಟಿ ಮಾಲಾಶ್ರೀ ಹಾಗೂ ಮಗಳು ಆರಾಧನಾ ಅವರಿಬ್ಬರೂ ಇರುವ ಫೋಟೋ ಶೇರ್ ಆಗಿದೆ. ನಟ ದರ್ಶನ್ ಜೊತೆಯಲ್ಲಿ ಕಾಟೇರ ಸಿನಿಮಾದಲ್ಲಿ ನಟಿಸಿರುವ ಆರಾಧನಾ ಅವರು ಆ ಬಳಿಕ ಯಾವುದೇ ಚಿತ್ರವನ್ನೂ ಕೂಡ ಆಯ್ಕೆ ಮಾಡಿಕೊಂಡಿಲ್ಲ. ಆರಾಧನಾ ನಟನೆಯಲ್ಲಿ ಮುಂದೆ ಯಾವ ಸಿನಿಮಾ ಬರಬಹುದು ಎಂಬುದನ್ನು ಕನ್ನಡ ಪ್ರೇಕ್ಷಕರು ಸೇರಿದಂತೆ ಎಲ್ಲರೂ ಕಾಯುತ್ತಿದ್ದಾರೆ ಎನ್ನಬಹುದು.

'ನಂಜುಂಡಿ ಕಲ್ಯಾಣ'ದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮಾಲಾಶ್ರೀ ಅವರು ಆ ಬಳಿಕ ತಿರುಗಿ ನೋಡಿದ್ದೇ ಇಲ್ಲ. ವರ್ಷಕ್ಕೆ ಎರಡು-ಮೂರು ಚಿತ್ರಗಳಲ್ಲಿ ನಟಿಸುತ್ತ ನಟಿ ಮಾಲಾಶ್ರೀ ಅವರು ಹಿಂದೆ ಯಾರೂ ಏರದಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದರು. ಆ ಕಾಲದಲ್ಲಿ ಇದ್ದ ಮಡಿವಂತಿಕೆ, ಮೈಚಳಿ ಎಲ್ಲವನ್ನೂ ಬದಿಗೊತ್ತಿ, ನಟಿಯೆಂದರೆ ಹೀಗಿರಬೇಕು, ಪಾತ್ರ ಮಾಡುವುದು ಎಂದರೆ ಇದು ಎಂಬಂತೆ, ನಟಿ ಮಾಲಾಶ್ರೀ ಅವರು ಕನ್ನಡ ಚಿತ್ರರಂಗದ ಆಲ್‌ಟೈಮ್ 'ನಂಬರ್ ಒನ್' ಎಂಬಂತೆ ಬೆಳೆದವರು. 'ಕನಸಿನ ರಾಣಿ' ಪಟ್ಟವನ್ನೂ ಗಿಟ್ಟಿಸಿಕೊಂಡಿದ್ದ ನಟಿ ಮಾಲಾಶ್ರೀ ಅವರಿಗೆ ದೊಡ್ಡ ಅಭಿಮಾನ ವರ್ಗ ಕೂಡ ಸೃಷ್ಟಿಯಾಗಿತ್ತು.

ನಟಿ ಮಾಲಾಶ್ರೀ ಅವರು ಒಂದು ಹಂತದಲ್ಲಿ ಕನ್ನಡದ ಸ್ಟಾರ್ ನಟರ ಸರಿಸಮಾನ ಎಂಬಂತೆ ಬೆಳೆದು ನಿಂತಿದ್ದರು. ಬಳಿಕ, ಮೇಲೇರಿದವರು ಕೆಳಗಿಳಿಯಲೇಬೇಕು ಎಂಬಂತೆ, ಮಾಲಾಶ್ರೀ ಅವರು ಕೂಡ ಚಿತ್ರರಂಗದಲ್ಲಿ ನಿಧಾನವಾಗಿ ಕೆಳಗೆ ಇಳಿಯುತ್ತ ಬಂದರು. ಹೊಸ ನೀರು ಬಂದು ಹಳೆ ನೀರು ಕೊಚ್ಚಿ ಹೋಗುವಂತೆ, ನಟಿ ಮಾಲಾಶ್ರೀ ನಟನೆಯ ಸಿನಿಮಾಗಳ ಸಂಖ್ಯೆ ನಿಧಾನವಾಗಿ ಕಡಿಮೆ ಆಗತೊಡಗಿತು. ಮದುವೆ, ಮಕ್ಕಳು ಅಂತೆಲ್ಲಾ ಆಗಿ ನಟಿ ಮಾಲಾಶ್ರೀ ಅವರು ನಟನೆಯಿಂದ ಸಹಜವಾಗಿಯೇ ಹಿಂದೆ ಸರಿಯುತ್ತ ಬಂದರು. ಆದರೆ, ಅಲ್ಲೊಂದು ಇಲ್ಲೊಂದು ಗೆಸ್ಟ್‌ ರೋಲ್ ಮಾಡೋದನ್ನು ಇಂದಿಗೂ ಕೂಡ ಮಾಲಾಶ್ರೀ ನಿಲ್ಲಿಸಿಲ್ಲ.

ಸದ್ಯ ನಟಿ ಮಾಲಾಶ್ರೀ ಮಗಳು ಆರಾಧನಾ ಅವರು ಈಗಾಗಲೇ ಒಂದು ಸಿನಿಮಾದಲ್ಲಿ ನಟಿಸುವ ಮೂಲಕ ನಟಿ ಎನ್ನಿಸಿಕೊಂಡಿದ್ದಾರೆ. ದರ್ಶನ್ ನಟನೆಯ ಕಾಟೇರ' ಸಿನಿಮಾದಲ್ಲಿ ಮಾಲಾಶ್ರೀ ಮಗಳು ಆರಾಧನಾ ನಟಿಸಿದ್ದಾರೆ. ಈ ಸಿನಿಮಾದ ನಟನೆಗಾಗಿ ಅವರಿಗೆ ಫಿಲಂ ಫೇರ್ ಪ್ರಶಸ್ತಿ ಕೂಡ ಲಭಿಸಿದೆ. ಆದರೆ, ಆ ಬಳಿಕ ಏಕೋ ಏನೋ ಎಂಬಂತೆ, ಆರಾಧನಾ ನಟನೆಯ ಯಾವುದೇ ಸಿನಿಮಾ ಸೆಟ್ಟೇರಿಲ್ಲ. ಬಹುಶಃ ಕಥೆ ಇಷ್ಟವಾಗದಿರಬಹುದು. ಸಿಕ್ಕ ಮಾಹಿತಿ ಪ್ರಕಾರ, ನಟಿ ಮಾಲಾಶ್ರೀ ಅವರು ಮಗಳು ಆರಾಧನಾಗಾಗಿ ಕೆಲವು ಕಥೆಗಳನ್ನು ಕೇಳಿದ್ದಾರೆ. ಆದರೆ, ಅದ್ಯಾವುದೂ ಅವರಿಗೆ ಇಷ್ಟವಾಗಿಲ್ಲ.

View post on Instagram

ಒಟ್ಟಿನಲ್ಲಿ, ಇದೀಗ ನಟಿ ಮಾಲಾಶ್ರೀ ಅವರು ತಮ್ಮ ಮಗಳೊಂದಿಗೆ ರಾಜಸ್ಥಾನದ 'ಜೈಸಲ್ಮೇರ್'ನಲ್ಲಿ ಓಡಾಟ ನಡೆಸಿದ್ದಾರೆ. ಅವರಿಬ್ಬರು ಅಲ್ಯಾಕೆ ಇದ್ದಾರೆ ಎಂಬ ಮಾಹಿತಿ ಸದ್ಯಕ್ಕೆ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಮಾಲಾಶ್ರೀ-ಆರಾಧನಾ ರಾಜಸ್ಥಾನದ ಭೇಟಿ ಬಗ್ಗೆ ಮಾಹಿತಿ ಸಿಕ್ಕರೂ ಸಿಗಬಹುದು.

View post on Instagram