ವಿನೋದ್‌ ಪ್ರಭಾಕರ್‌ ಇತ್ತೀಚೆಗೆ ಸಿಕ್ಕಾಪಟ್ಟೆಬ್ಯುಸಿ ಆಗಿದ್ದಾರೆ. ಒಂದು ವರ್ಷದ ಹಿಂದೆ ಕಠಿಣವಾದ ವರ್ಕೌಟ್‌ ಮೂಲಕ ಸಿಕ್ಸ್‌ ಪ್ಯಾಕ್‌ ದೇಹವನ್ನು ಎಂಟು ಪ್ಯಾಕ್‌ಗೆ ಹುರಿಗಟ್ಟಿಸಿದ ನಂತರ ಅವರಿಗೆ ನಿಜಕ್ಕೂ ಅದೃಷ್ಟಖುಲಾಯಿಸಿದೆ. ಏಯ್‌್ಟಪ್ಯಾಕ್‌ ಬಾಡಿ ಬಿಲ್ಡ್‌ ಮಾಡಿಕೊಂಡ ಕಾರಣಕ್ಕಾಗಿಯೇ ಅವರಿಗೀಗ ಸಾಕಷ್ಟುಅವಕಾಶಗಳು ಬರುತ್ತಿವೆ. 

ಅವೆಲ್ಲವೂ ಪಕ್ಕಾ ಆ್ಯಕ್ಷನ್‌ ಸಿನಿಮಾಗಳೇ. ಆದರೆ ಆ್ಯಕ್ಷನ್‌ ಜತೆಗೆ ಕತೆಯೇ ಪ್ರಧಾನ ಎನ್ನುವ ಕಾರಣಕ್ಕಾಗಿ ಐದಕ್ಕೂ ಹೆಚ್ಚು ಸಿನಿಮಾಗಳನ್ನು ಕತೆ ಕೇಳಿ ತಿರಸ್ಕರಿಸಿದ್ದಾರೆ. ಈಗ ನಿರ್ದೇಶಕ ಕಾಡು ಶಿವು ಸೇರಿ ಮತ್ತೊಬ್ಬರ ಹೊಸಬರ ಜತೆಗಿನ ಎರಡು ಸಿನಿಮಾಗಳಿಗೆ ಓಕೆ ಹೇಳಿದ್ದು, ಆ ಸಿನಿಮಾಗಳು ಮೇ ತಿಂಗಳಿನಿಂದ ಶುರುವಾಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಂಗಳವಾರ ‘ರಗಡ್‌’ ಚಿತ್ರದ ಸಕ್ಸಸ್‌ ಮೀಟ್‌ನಲ್ಲಿ ನಟ ವಿನೋದ್‌ ಪ್ರಭಾಕರ್‌ ಈ ವಿಚಾರ ಹಂಚಿಕೊಂಡರು. ‘ರಗಡ್‌ ಚಿತ್ರದಲ್ಲಿ ಆ್ಯಕ್ಷನ್‌ ಮತ್ತು ಲವ್‌ ಸೀನ್‌ಗಳ ಬಗ್ಗೆ ಜನ ಮೆಚ್ಚುಗೆ ಹೇಳುತ್ತಿದ್ದಾರೆ. ಅದರಲ್ಲೂ ಎಂಟು ಫ್ಯಾಕ್‌ ಮೂಲಕ ಫೈಟ್ಸ್‌ ಮಾಡಿದ್ದು ಸಿನಿಮಾ ಮಂದಿಗೂ ಇಷ್ಟವಾಗಿದೆ. ಕೆಲವು ನಿರ್ದೇಶಕರು ಮತ್ತು ನಿರ್ಮಾಪಕರು ಪಕ್ಕಾ ಆ್ಯಕ್ಷನ್‌ ಸಿನಿಮಾಕ್ಕೆ ನೀವೇ ಬೇಕು ಎಂದಿದ್ದಾರೆ. ಆದರೆ ನನಗೆ ಆ್ಯಕ್ಷನ್‌ ಜತೆಗೆ ಕತೆಯೂ ಮುಖ್ಯ ಎಂದು ಅವರಿಗೆ ಹೇಳಿದ್ದೇನೆ’ಎಂದರು ವಿನೋದ್‌ ಪ್ರಭಾಕರ್‌.

ಸದ್ಯ ಅವರು ಉದಯ್‌ ಪ್ರಕಾಶ್‌ ನಿರ್ದೇಶನದ ‘ವರದ’ಹೆಸರಿನ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಈಗಾಗಲೇ ಅದಕ್ಕೆ ಒಂದು ಹಂತದ ಚಿತ್ರೀಕರಣ ಮೈಸೂರು, ಮೇಲುಕೋಟೆಯಲ್ಲಿ ನಡೆದಿದೆ. ಇದಾದ ನಂತರ ಮೇ ತಿಂಗಳಲ್ಲಿ ಹೊಸ ಸಿನಿಮಾಗಳು ಶುರುವಾಗುತ್ತಿವೆ.