ಮೊದಲ 25 ದಿನಗಳ ಶೆಡ್ಯೂಲ್‌ ಸರ್ಬಿಯಾ ದೇಶದಲ್ಲಿ ಶೂಟ್‌ ಮಾಡಿದ ನಂತರ ಬ್ರೇಕ್‌ ತೆಗೆದುಕೊಳ್ಳಲಾಗಿತ್ತು. ಈಗ ಪೋಲೆಂಡ್‌ನ ವಾರ್ಸಾ ನಗರದಲ್ಲಿ ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ಪ್ಲಾನ್‌ ಮಾಡಲಾಗಿದ್ದು, ಒಟ್ಟು 60 ಮಂದಿಯ ತಂಡದೊಂದಿಗೆ ಸುದೀಪ್‌ ವಿದೇಶಕ್ಕೆ ಹಾರಿದ್ದಾರೆ.

ಅಲ್ಲದೆ ಇತ್ತೀಚಿನ ವರ್ಷಗಳಲ್ಲಿ ಅಂದರೆ ‘ರಾಜಾ ಕುಳ್ಳ’ ಚಿತ್ರದ ನಂತರ ಎರಡು ಬಾರಿ ವಿದೇಶಕ್ಕೆ ತೆರಳಿ ಅತಿ ಹೆಚ್ಚು ಅಲ್ಲೇ ಚಿತ್ರೀಕರಣ ಮಾಡಿಕೊಂಡ ಹೆಗ್ಗಳಿಗೆ ‘ಕೋಟಿಗೊಬ್ಬ 3’ ಚಿತ್ರಕ್ಕೆ ಸೇರುತ್ತದೆ ಎಂಬುದು ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಅವರು ಕೊಡುವ ದಾಖಲೆಗಳು.

ಇಷ್ಟೊಂದು ಕೋಟಿ ಬೇಕಾಯ್ತಾ ಕೋಟಿಗೊಬ್ಬ 3 ಸೆಟ್‌ಗೆ ?

ಸಾಹಸ ನಿರ್ದೇಶಕ ಕಣಲ್‌ ಕಣ್ಣನ್‌ ಅವರ ಸಾರಥ್ಯದಲ್ಲಿ 15 ದಿನಗಳ ಕಾಲ ಪೋಲೆಂಡ್‌ನ ವಾರ್ಸಾ ನಗರದಲ್ಲಿ ಚೇಸಿಂಗ್‌ ದೃಶ್ಯಗಳ ಚಿತ್ರೀಕರಣಕ್ಕೆ ಚಿತ್ರದ ನಿರ್ದೇಶಕ ಶಿವಕಾರ್ತಿಕ್‌ ಪ್ಲಾನ್‌ ಮಾಡಿಕೊಂಡಿದ್ದಾರೆ. ‘ಈಗಾಗಲೇ 85 ಭಾಗ ಚಿತ್ರೀಕರಣ ಮುಗಿಸಿದ್ದೇವೆ. ನಮ್ಮ ನಿರೀಕ್ಷೆಯಂತೆ ತುಂಬಾ ಸ್ಟೈಲೀಶ್‌ ಆಗಿ ಸಿನಿಮಾ ಮೂಡಿ ಬರುತ್ತಿದೆ. ಮೇಕಿಂಗ್‌ ಅದ್ದೂರಿಯಾಗಿದೆ. ವಿದೇಶದಲ್ಲಿ ಎರಡು ಹಂತದ ಶೆಡ್ಯೂಲ್‌ ಹಾಕಿಕೊಂಡು 40 ದಿನ ಶೂಟಿಂಗ್‌ ಮಾಡಿದ ಸಿನಿಮಾ ನಮ್ಮದೇ.

ಇಡೀ ಸಿನಿಮಾದಲ್ಲಿ ಬೇರೆಯದ್ದೇ ಆದ ಲಕ್ಕು ಈ ಚಿತ್ರದಲ್ಲಿ ಸುದೀಪ್‌ ಅವರಿಗೆ ಇದೆ. ಕನ್ನಡ ಚಿತ್ರವಾದರೂ ಎಲ್ಲ ಭಾಷಿಗರಿಗೂ ಕುತೂಹಲ ಮೂಡಿಸುವ ಸಿನಿಮಾ ಇದು. ನಿರ್ದೇಶಕ ಶಿವಕಾರ್ತಿಕ್‌ ಮಾಡಿಕೊಂಡಿದ್ದ ಕತೆ ಮೇಲೆ ನಂಬಿಕೆ ಇಟ್ಟು ಈ ಚಿತ್ರವನ್ನು ಇಷ್ಟುಅದ್ದೂರಿಯಾಗಿ ನಿರ್ಮಿಸುತ್ತಿದ್ದೇವೆ. ಸುದೀಪ್‌ ಅವರಿಂದ ಈ ಸಿನಿಮಾ ಬೇರೆಯದ್ದೇ ಆದ ಹಂತಕ್ಕೆ ಹೋಗಿದೆ. ಈ ಕಾರಣಕ್ಕೆ ನಿರ್ಮಾಪಕನಾಗಿ ಕೋಟಿಗೊಬ್ಬ 3 ಸಿನಿಮಾ ನಿರ್ಮಿಸುತ್ತಿರುವುದಕ್ಕೆ ನನಗೆ ಹೆಮ್ಮೆ ಇದೆ.

‘ಕೋಟಿಗೊಬ್ಬ 3’ ಯಾವಾಗ ರಿಲೀಸ್? ಏನಂತಾರೆ ಕಿಚ್ಚ ಸುದೀಪ್?

ಸದ್ಯ ಪೋಲೆಂಡ್‌ನಲ್ಲಿ ಚೇಸಿಂಗ್‌ ದೃಶ್ಯಗಳು ಮುಗಿದ ಮೇಲೆ ಹಾಡು ಹಾಗೂ ಒಂದಿಷ್ಟುಮಾತಿನ ಭಾಗದ ಚಿತ್ರೀಕರಣ ಮುಗಿದರೆ ಚಿತ್ರೀಕರಣ ಮುಕ್ತಾಯವಾಗಲಿದೆ’ ಎನ್ನುತ್ತಾರೆ ನಿರ್ಮಾಪಕ ಸೂರಪ್ಪ ಬಾಬು.

ಮಲಯಾಳಂ ‘ಪ್ರೇಮಂ’ ಚಿತ್ರದ ನಾಯಕಿ ಮಂಡೋನ ಸೆಬಾಸ್ಟಿನ್‌ ‘ಕೋಟಿಗೊಬ್ಬ 3’ ಚಿತ್ರದ ನಾಯಕಿ. ತೆಲುಗಿನ ಶ್ರದ್ಧಾದಾಸ್‌, ಬಾಲಿವುಡ್‌ನ ನವಾಬ್‌ ಶಾ, ಆಫ್ತಾಬ್‌ಶಿವದಾಸಿನಿ, ಕನ್ನಡದ ರವಿಶಂಕರ್‌ ಹೀಗೆ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ. ಅರ್ಜುನ್‌ ಜನ್ಯಾ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

ಯುಟ್ಯೂಬ್‌ನಲ್ಲಿ ದಾಖಲೆ ಬರೆದ ಕೋಟಿಗೊಬ್ಬ-3