ಯುಟ್ಯೂಬ್‌ನಲ್ಲಿ ದಾಖಲೆ ಬರೆದ ಕೋಟಿಗೊಬ್ಬ-3

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 5, Sep 2018, 11:20 AM IST
Kiccha Sudeeps's Kotigobba 3 records in YouTube
Highlights

ಸುದೀಪ್ ನಟನೆಯ ಕನ್ನಡದ ಎರಡು ಬಹು ನಿರೀಕ್ಷಿತ ಚಿತ್ರಗಳ ಟೀಸರ್ ಬಿಡುಗಡೆಯಾಗಿದೆ. ಶಿವಕಾರ್ತಿಕ್ ಚೊಚ್ಛಲ ನಿರ್ದೇಶನದ ‘ಕೋಟಿಗೊಬ್ಬ ೩’ ಹಾಗೂ ಹಿರಿಯ ನಿರ್ದೇಶಕ ಕೃಷ್ಣ ನಿರ್ದೇಶನದ ‘ಪೈಲ್ವಾನ್’. ಅದರಲ್ಲಿ ಕೋಟಿಗೊಬ್ಬ 3 ಟೀಸರ್ ಯೂಟ್ಯೂಬಲ್ಲಿ ದಾಖಲೆ ಬರೆದಿದೆ. ಎರಡೇ ದಿನದಲ್ಲಿ 1.2 ಮಿಲಿಯನ್‌ಗೂ ಜಾಸ್ತಿ ಲೈಕುಗಳನ್ನು ಪಡೆದು ‘ಪೈಲ್ವಾನ್’ ಚಿತ್ರವನ್ನು ಹಿಂದಿಕ್ಕಿದೆ. 

ಬೆಂಗಳೂರು (ಸೆ. 05): ಸುದೀಪ್ ಹುಟ್ಟುಹಬ್ಬಕ್ಕೆ ಮೂರು ಚಿತ್ರಗಳು ಮೂರು ರೀತಿಯಲ್ಲಿ ಉಡುಗೊರೆ ನೀಡಿದವು. ತೆಲುಗಿನ ‘ಸೈರಾ’ ಚಿತ್ರ ಕಿಚ್ಚನ ಫಸ್ಟ್ ಲುಕ್ ರಿಲೀಸ್ ಮಾಡಿದರೆ, ಕನ್ನಡದ ‘ಕೋಟಿಗೊಬ್ಬ 3’ ಹಾಗೂ ‘ಪೈಲ್ವಾನ್’ ಚಿತ್ರಗಳು ಟೀಸರ್ ಬಿಡುಗಡೆ ಮಾಡಿದವು.

ಈ ಮೂರರ ಪೈಕಿ ಹೆಚ್ಚು ಸದ್ದು ಮಾಡಿದ್ದು ‘ಕೋಟಿಗೊಬ್ಬ 3’ ಚಿತ್ರದ ಟೀಸರ್. ಆ ಮೂಲಕ ಹೊಸ ನಿರ್ದೇಶಕ ಶಿವಕಾರ್ತಿಕ್ ಮೊದಲ ಪ್ರಯತ್ನದ ಮೇಲೆ ಎಲ್ಲರ ನಿರೀಕ್ಷೆಗಳು ಹೆಚ್ಚಾಗಿವೆ. ಟೀಸರ್ ಬಿಡುಗಡೆಯಾದ ಒಂದೂವರೆ ದಿನಕ್ಕೆ 1.2 ಮಿಲಿಯನ್ ವೀಕ್ಷಣೆಯಾಗಿರುವ ಹೆಗ್ಗಳಿಕೆ ‘ಕೋಟಿಗೊಬ್ಬ 3’ ಚಿತ್ರದ್ದು. ಯೂಟ್ಯೂಬ್‌ನಲ್ಲಿ ಒಂದೇ ದಿನದಲ್ಲಿ ಹತ್ತು ಲಕ್ಷ ಗಡಿ ದಾಟಿರುವುದು ಮಾತ್ರವಲ್ಲ, ಕಿಚ್ಚನ ಅಭಿಮಾನಿಗಳಲ್ಲಿ, ಸೋಷಲ್ ಮೀಡಿಯಾಗಳಲ್ಲಿ ಸೂರಪ್ಪ ಬಾಬು ನಿರ್ಮಾಣದ ‘ಕೋಟಿಗೊಬ್ಬ 3’ ಚಿತ್ರ ಹವಾ ಸೃಷ್ಟಿಸಿದೆ.

ಅಂದಹಾಗೆ ಈ ಶಿವಕಾರ್ತಿಕ್ ಕೇವಲ ಒಂದು ಸಾಲಿನ ಕತೆ ಹೇಳಿ ಸುದೀಪ್ ಮೆಚ್ಚುಗೆಗೆ ಪಾತ್ರರಾದ ಪ್ರತಿಭಾವಂತ ನಿರ್ದೇಶಕ. ಹೆಬ್ಬುಲಿ ನಂತರ ಸುದೀಪ್ ಜತೆಗೆ ಮತ್ತೊಂದು ಸಿನಿಮಾ ‘ಪೈಲ್ವಾನ್’ ಮಾಡುತ್ತಿರುವವರು ಕೃಷ್ಣ. ಸ್ಟಾರ್ ನಿರ್ದೇಶಕ. ಅದ್ದೂರಿ ನಿರ್ಮಾಣ. ಆದರೂ ‘ಪೈಲ್ವಾನ್’ ಟೀಸರ್ ನಿರೀಕ್ಷೆಯ ಮಟ್ಟ ತಲುಪಿಲ್ಲ. ಪೈಲ್ವಾನ್ ಎನ್ನುವ ಹೆಸರಿಗೆ ತಕ್ಕಂತೆ ಟೀಸರ್ ಮೂಡಿಬಂದಿಲ್ಲ ಎಂಬುದು ಹಲವರ ಅಭಿಪ್ರಾಯ. ಹೀಗಾಗಿ ಅವಸರಕ್ಕೆ ಮಾಡಿದ ಅಡುಗೆಯಂತಿದೆ.

ಯೂಟ್ಯೂಬ್‌ನಲ್ಲೇ ಇದರ ವೀಕ್ಷಕರ ಸಂಖ್ಯೆ ಲಕ್ಷಗಳ ಗಡಿ ದಾಟಿಲ್ಲ. ಆದರೆ, ಎರಡೂ ಚಿತ್ರಗಳ ಟೀಸರ್ಗಳಲ್ಲಿ ಸುದೀಪ್ ಮಾತ್ರ ಸೂಪರ್ ಆಗಿ ಕಂಡರೂ ‘ಕೋಟಿಗೊಬ್ಬ 3’ ಟೀಸರ್ ಹೆಚ್ಚು ಗಮನ ಸೆಳೆಯುವುದಕ್ಕೆ ಕಾರಣಗಳು ಬಹಳಷ್ಟಿವೆ.

ಕೋಟಿಗೊಬ್ಬ 3 ಟೀಸರ್ ಹೈಲೈಟ್ಸ್ ಏನು?

  • ಹಾಲಿವುಡ್ ಚಿತ್ರದಂತೆ ಕಾಣುತ್ತದೆ. ತಾಂತ್ರಿಕತೆಯ ಕ್ವಾಲಿಟಿಯಲ್ಲಿ ಕೋಟಿಗಳ ಲೆಕ್ಕದಲ್ಲಿ ನಿರ್ಮಾಣಗೊಳ್ಳುವ ಪರಭಾಷೆಯ ಚಿತ್ರಗಳಿಗೇ ಸಡ್ಡು ಹೊಡೆಯುವಂತಿದೆ.
  • ಮೇಕಿಂಗ್ ಅದ್ಭುತವಾಗಿದೆ. ಪ್ರಸಿದ್ಧ ನಿರ್ದೇಶಕರನ್ನೇ ಮೀರಿಸುವಂತಹ ಶಾಟ್ಸ್ ಕಟ್ ಮಾಡಿದ್ದಾರೆ.
  •  ಟೀಸರ್‌ನಲ್ಲಿ ಯಾವುದೇ ಅನಗತ್ಯ ಮಾತುಗಳು, ಓವರ್ ಬಿಲ್ಡಪ್‌ಗಳು ಇಲ್ಲ. ತುಂಬಾ ಕ್ಲಾಸಿಕ್ ಆಗಿ ಎಂಟ್ರಿ ಕೊಡುವ ಸುದೀಪ್ ಮಾಸ್ ಲುಕ್ನಲ್ಲಿ ಗಮನ ಸೆಳೆಯುತ್ತಾರೆ.   

 

 

loader