ವೈರಲ್ ಫಿವರ್‌ನಿಂದ ಆಸ್ಪತ್ರೆಗೆ ದಾಖಲಾದ ಶಿವಣ್ಣ | ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಆಗಮಿಸಿದ ಪುನೀತ್, ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪ್ರೇಮ್ | ಆರೋಗ್ಯದಲ್ಲಿ ಚೇತರಿಕೆ
ಬೆಂಗಳೂರು ( ಅ. 15): ನಟ ಶಿವರಾಜ್ ಕುಮಾರ್ ಜ್ವರದಿಂದ ಬಳಲುತ್ತಿದ್ದು ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು ಅಭಿಮಾನಿಗಳು ಹೆದರುವ ಅಗತ್ಯವಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಶಿವಣ್ಣಗೆ ವೈರಲ್ ಫಿವರ್ ; ಆಸ್ಪತ್ರೆಗೆ ದಾಖಲು
ಸಹೋದರ ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ ಜೊತೆ ಆಸ್ಪತ್ರೆ ಆಗಮಿಸಿದ ಅಣ್ಣನ ಆರೋಗ್ಯ ವಿಚಾರಿಸಿದ್ದಾರೆ. ಜೊತೆಗೆ ರಾಘವೇಂದ್ರ ರಾಜ್ ಕುಮಾರ್ ಕೂಡಾ ಆಗಮಿಸಿದರು. ಯುವ ರಾಜಕುಮಾರ್ ಹಾಗೂ ಭಾವಿ ಸೊಸೆ ಶ್ರೀದೇವಿ ಆಸ್ಪತ್ರೆಗೆ ಬಂದು ಶಿವಣ್ಣ ಆರೋಗ್ಯ ವಿಚಾರಿಸಿದ್ದಾರೆ. ಇದೇ ವೇಳೆ ದಿ ವಿಲನ್ ಚಿತ್ರದ ನಿರ್ದೇಶಕ ಪ್ರೇಮ್ ಕೂಡಾ ಬಂದಿದ್ದಾರೆ.
ನೀವು ನೋಡಲೇಬೇಕಾದ ’ದಿ ವಿಲನ್’ ಫೋಟೋಗಳಿವು !
ಶಿವಣ್ಣ ಅಭಿಮಾನಿಗಳು ಹೆದರುವ ಅಗತ್ಯವಿಲ್ಲ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ತಿಳಿದು ಬಂದಿದೆ.
