ಮದುವೆ ಸಂಭ್ರಮದಲ್ಲಿರುವ ಸ್ಯಾಂಡಲ್‌ವುಡ್‌ ನಟ ನಿಖಿಲ್ ಕುಮಾರಸ್ವಾಮಿ ತಮ್ಮ ಬಾಳ ಸಂಗಾತಿ ರೇವತಿ ಜೊತೆಗಿನ ಮೊದಲ ಫೋಟೋ ಹಂಚಿಕೊಂಡಿದ್ದಾರೆ. ಈಗಾಗಲೇ ನಿಖಿಲ್ ಕುಮಾರಸ್ವಾಮಿ ವಿವಾಹದ ತಯಾರಿ, ಸ್ಥಳ ನಿಗದಿಯಂತಹ ಪ್ರಮುಖ ಕೆಲಸಗಳು ಭರದಿಂದ ಸಾಗಿದ್ದು, ಫೋಟೋ ಶೇರ್ ಮಾಡಿಕೊಂಡ ನಟ ತಮ್ಮನ್ನು ಆಶಿರ್ವದಿಸುವಂತೆ ಕೇಳಿಕೊಂಡಿದ್ದಾರೆ.

'ನನ್ನ ಸಂಗಾತಿಯಾಗುವವರ ಜೊತೆಗಿನ ಮೊದಲ ಫೋಟೊವನ್ನು ಶೇರ್ ಮಾಡ್ಕೊಳೋಕೆ ಖುಷಿ ಆಗ್ತಿದೆ. ಎಂದಿನಂತೆ ನನ್ನ ಮೇಲಿನ ನಿಮ್ಮ ಪ್ರೀತಿ ಹಾಗೂ ಹಾರೈಕೆಗಳು ಇನ್ನು ಮುಂದೆ ನಮ್ಮಿಬ್ಬರ ಮೇಲೂ ಇರಲಿ ಎಂದು ಕೇಳಿಕೊಳ್ಳುತ್ತೇನೆ' ಎಂದು ನಿಖಿಲ್ ಬರೆದುಕೊಂಡಿದ್ದಾರೆ.

ನಿಖಿಲ್ ಕುಮಾರಸ್ವಾಮಿ ವಿವಾಹ ಸಮಾರಂಭಕ್ಕೆ ರಾಮನಗರ ಬಳಿ 54 ಎಕರೆ ಸ್ಥಳವನ್ನು ಈಗಾಗಲೇ ಗುರುತಿಸಲಾಗಿದ್ದು, ಜಾಗವನ್ನು ಪರಿಶೀಲನೆ ನಡೆಸಲಾಗಿದೆ. ಇದರಲ್ಲಿ ವಾಹನ ನಿಲುಗಡೆ, ಭೋಜನ ವ್ಯವಸ್ಥೆಗಾಗಿಯೂ ಪ್ರತ್ಯೇಕ ಜಾಗ ಗುರುತಿಸಲಾಗಿದೆ. ಜಾಗದ ಒಡೆತನಕ್ಕೆ ಸಂಬಂಧಪಟ್ಟವರ ಜೊತೆ ಮಾತುಕತೆಯೂ ನಡೆದಿದೆ.

ನನ್ನ ಸಂಗಾತಿಯಾಗಲಿರುವ ನನ್ನ ಲೈಫ್‌ಲೈನ್‌ ಜೊತೆಗಿನ ಮೊದಲ ಫೋಟೋ ಶೇರ್ ಮಾಡುತ್ತಿದ್ದೇನೆ. ನನ್ನ ಉಳಿದ ಜೀವನವನ್ನು ಈಕೆಯೊಂದಿಗೆ ಕಳೆಯಲು ಕಾತುರನಾಗಿದ್ದೇನೆ. ನಿನ್ನನ್ನು ಪಡೆದ ನಾನು ಅದೃಷ್ಟವಂತ. ನೀನು ನನ್ನ ಬಾಳಿನ ರತ್ನ. ನಿಮ್ಮೆಲ್ಲರ ಬೆಂಬಲ, ಆಶಿರ್ವಾದ ನಮ್ಮಿಬ್ಬರ ಮೇಲಿರಲಿ ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಕೊನೆಗೂ ರೇವತಿ ಬಗ್ಗೆ ಸೀಕ್ರೆಟ್‌ ಬಿಚ್ಚಿಟ್ಟ ನಿಖಿಲ್ ಕುಮಾರಸ್ವಾಮಿ!

ಬೆಂಗಳೂರಿನಲ್ಲಿ ವಿವಾಹ ನಡೆಯುವುದರಿಂದ ಜನರಿಗೆ ಸಮಸ್ಯೆಯಾಗುವುದನ್ನು ತಪ್ಪಿಸಲು ರಾಮನಗರ, ಚನ್ನಪಟ್ಟಣ ನಡುವೆ ವಿವಾಹ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ ಎಂದು ಮಾಜಿ ಸಿಎಂ ಎಚ್‌. ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ರಾಮನಗರ ಬಳಿ 54 ಎಕರೆ ಪ್ರದೇಶದಲ್ಲಿ ನಿಖಿಲ್ ಮದುವೆ, ಎಚ್‌ಡಿಕೆ ಸ್ಥಳ ಪರಿಶೀಲನೆ!

"