ರಾಮ​ನ​ಗರ[ಫೆ.06]: ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಪುತ್ರ ನಿಖಿಲ್‌ ಅವರ ವಿವಾಹ ಕಾರ್ಯ​ಕ್ರಮವನ್ನು ಅದ್ಧೂರಿಯಾಗಿ ನಡೆಸುವ ಸಲುವಾಗಿ ರಾಮ​ನ​ಗರ ಮತ್ತು ಚನ್ನ​ಪ​ಟ್ಟಣ ನಡುವೆ ಇರುವ ಅರ್ಚ​ಕ​ರ​ಹಳ್ಳಿ ಬಳಿಯ 54 ಎಕರೆ ವಿಶಾ​ಲ​ ಜಾಗ​ವನ್ನು ಬುಧವಾರ ಪರಿ​ಶೀ​ಲ​ನೆ ನಡೆ​ಸಿ​ದರು.

ರಾಮ​ನ​ಗರ ತಮಗೆ ರಾಜ​ಕೀ​ಯ​ವಾಗಿ ಜನ್ಮ ನೀಡಿದ ಜಿಲ್ಲೆ. ಹೀಗಾಗಿ ಜಿಲ್ಲೆ ಜನರ ಆಶೀ​ರ್ವಾದ ನನ್ನ ಮಗ​ನಿಗೂ ಸಿಗ​ಲಿ ಎಂಬ ಉದ್ದೇ​ಶ​ದಿಂದ ರಾಮ​ನ​ಗರ ಮತ್ತು ಚನ್ನ​ಪ​ಟ್ಟಣ ಮಧ್ಯ​ದಲ್ಲಿ ಪುತ್ರ ನಿಖಿಲ್‌ ಮದುವೆ ಸಮಾ​ರಂಭ ಆಯೋ​ಜನೆ ಮಾಡು​ವು​ದಾಗಿ ಕುಮಾ​ರ​ಸ್ವಾಮಿ ಹೇಳಿ​ದ್ದರು. ಅದ​ರಂತೆಯೇ ಕುಮಾ​ರ​ಸ್ವಾ​ಮಿ ತಮ್ಮ ಆತ್ಮೀ​ಯ​ರೊಂದಿಗೆ ರಾಮ​ನ​ಗರ ಮತ್ತು ಚನ್ನ​ಪ​ಟ್ಟ​ಣದ ನಡುವೆ ಬರುವ ಅರ್ಚ​ಕ​ರ​ಹ​ಳ್ಳಿ​ ಸಮೀಪ ಜಾನ​ಪದ ಲೋಕದ ಪಕ್ಕ​ದಲ್ಲಿ ವಿಶಾ​ಲ​ವಾದ ಜಮೀ​ನನ್ನು ವೀಕ್ಷಿಸಿದ್ದಾರೆ. ಅಲ್ಲದೆ ಜಮೀ​ನಿನ ಮಾಲೀ​ಕತ್ವ ಹೊಂದಿ​ರು​ವ​ವ​ರೊಂದಿಗೆ ಔಪ​ಚಾ​ರಿ​ಕ​ವಾ​ಗಿ ಮಾತು​ಕತೆ ನಡೆ​ಸಿ​ದ್ದಾರೆ ಎನ್ನ​ಲಾ​ಗಿದೆ.

ಬೆಂಗಳೂರಿಗರಿಗೆ ತೊಂದರೆಯಾಗದಂತೆ ನಿಖಿಲ್ ಮದುವೆ

ನಿಖಿಲ್‌ ಮದುವೆ ಕಾರ್ಯ​ಕ್ಕಾಗಿ ವೀಕ್ಷಿ​ಸಿ​ರುವ ಜಾಗ ಸುಮಾರು 54 ಎಕರೆ ಪ್ರದೇ​ಶ​ವಿದೆ. ಇದ​ರಲ್ಲಿ ಸೆಂಟ್ರೆಲ್‌ ಮುಸ್ಲಿಂ ಅಸೋ​ಸಿ​ಯೇ​ಷನ್‌(ಸಿ​ಎಂಎ) 22 ಎಕರೆ, ಉದ್ಯ​ಮಿ​ಗೆ ಸೇರಿದ 23 ಎಕರೆ ಹಾಗೂ ಉಳಿಕೆ ಭೂಮಿ ಇತ​ರ​ರ ಒಡೆ​ತ​ನದಲ್ಲಿದೆ. ಈ ಸ್ಥಳ ರಾಮ​ನ​ಗ​ರ​ದಿಂದ 5 ಕಿ.ಮೀ ಹಾಗೂ ಚನ್ನ​ಪ​ಟ್ಟಣದಿಂದ 8 ಕಿ.ಮೀ ದೂರ​ದ​ಲ್ಲಿದೆ. ಮೈಸೂರು-ಬೆಂಗ​ಳೂರು ಹೆದ್ದಾ​ರಿ ಪಕ್ಕ​ದ​ಲ್ಲಿಯೇ ಇರು​ವು​ದ​ರಿಂದ ಸೂಕ್ತ​ವಾದ ಸ್ಥಳ​ವೆಂಬ ನಿರ್ಧಾ​ರಕ್ಕೆ ಬಂದಿ​ದ್ದು ಭೋಜನ ವ್ಯವ​ಸ್ಥೆ ಹಾಗೂ ವಾಹ​ನ​ಗಳ ನಿಲು​ಗ​ಡೆ​ಗಾ​ಗಿಯೇ ಪ್ರತ್ಯೇಕ ಸ್ಥಳಗಳ ವ್ಯವಸ್ಥೆ ಮಾಡಲು ಕುಮಾ​ರ​ಸ್ವಾಮಿ ಕುಟುಂಬ​ದ​ವರು ಉದ್ದೇ​ಶಿ​ಸಿ​ದ್ದಾರೆ ಎಂದು ಗೊತ್ತಾ​ಗಿ​ದೆ. ಫೆ.10ರಂದು ಬೆಂಗ​ಳೂ​ರಿ​ನಲ್ಲಿ ನಿಖಿಲ್‌ ನಿಶ್ಚಿ​ತಾರ್ಥ ನೆರ​ವೇ​ರ​ಲಿದ್ದು, ಹಿರಿಯರ ಸಮ್ಮು​ಖ​ದಲ್ಲಿ ಮದುವೆ ದಿನಾಂಕ ನಿಗ​ದಿ​ಯಾ​ಗ​ಲಿದೆ.

ಗೋವಾದಲ್ಲಿ ಫಿಲ್ಮಿ ಸ್ಟೈಲ್‌ ಪ್ರಪೋಸ್‌; ಏಪ್ರಿಲ್‌ನಲ್ಲಿ ನಿಖಿಲ್‌ ಮದುವೆ ಡೇಟ್‌ ಫಿಕ್ಸ್‌!