ಸ್ಯಾಂಡಲ್‌ವುಡ್ ಮೋಸ್ಟ್‌ ಎಕ್ಸ್ ಪೆಕ್ಟೇಶನಲ್ ನಟರೆಂದೇ ಖ್ಯಾತರಾದ ಅಭಿಷೇಕ್ ಅಂಬರೀಶ್ ಹಾಗೂ ರಚಿತಾ ರಾಮ್ ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಷೇಕ್ 25 ರ ಸಂಭ್ರಮದಲ್ಲಿದ್ದು ರಚಿತಾ 27 ರ ಸಂಭ್ರಮದಲ್ಲಿದ್ದಾರೆ. ಇವರಿಬ್ಬರಿಗೂ ಮ್ಯೂಚುಯಲ್ ಫ್ರೆಂಡ್‌ ಆಗಿರುವ ನಿಖಿಲ್ ಕುಮಾರಸ್ವಾಮಿ ಹುಟ್ಟುಹಬ್ಬದ ಶುಭ ಕೋರಿದ್ದಾರೆ.

ಅಬ್ಬಾ...! 25 ದಿನದಲ್ಲಿ 7ಕೆಜಿ ಇಳಿಸಿಕೊಂಡ ರಚ್ಚು ಸೀರೆಲೂ ಹಾಟ್‌

ನಿಖಿಲ್ ಕುಮಾರಸ್ವಾಮಿ, ಅಭಿಷೇಕ್ ಅಂಬರೀಶ್ ಕುಚಿಕೋ ಗೆಳೆಯರು. ಮಂಡ್ಯ ಚುನಾವಣೆ ಸಂದರ್ಭದಲ್ಲಿ ಇಬ್ಬರ ನಡುವೆ ಸ್ವಲ್ಪ ಬಿರುಕು ಮೂಡಿತ್ತು. ಆದರೆ ಅವೆಲ್ಲಾ ಬರೀ ರಾಜಕೀಯಕ್ಕೆ ಮಾತ್ರ ಸೀಮಿತವಾಗಿದ್ದು ವೈಯಕ್ತಿಕವಾಗಿ ಇಬ್ಬರೂ ಒಳ್ಳೆಯ ಸ್ನೇಹಿತರಾಗಿಯೇ ಇದ್ದಾರೆ. ಕುಚಿಕೋ ಗೆಳೆಯನ ಹುಟ್ಟುಹಬ್ಬಕ್ಕೆ ನಿಖಿಲ್ ವಿಶ್ ಮಾಡಿದ್ದಾರೆ. ಅಭಿಷೇಕ್ ‘ಅಮರ್’ ಸಿನಿಮಾ ರಿಲೀಸ್ ಆದಾಗಲೂ ವಿಶ್ ಮಾಡಿದ್ದನ್ನು ನೆನೆಸಿಕೊಳ್ಳಬಹುದು.

ಇನ್ನು ರಚಿತಾ ರಾಮ್ ಜೊತೆ ‘ಸೀತಾ ಕಲ್ಯಾಣ’ ಎನ್ನುವ ಸಿನಿಮಾ ಮಾಡಿದ್ದಾರೆ. ಅದೇ ಸಿನಿಮಾದ ಪೋಸ್ಟರ್ ಅಪ್ಲೋಡ್ ಮಾಡಿದ್ದು 'ಹ್ಯಾಪಿ ಬರ್ತಡೇ ಮೈ ಡಿಯರ್ ಫ್ರೆಂಡ್, ಗಾಡ್‌ ಬ್ಲಸ್ ಯು' ಎಂದು ವಿಶ್ ಮಾಡಿದ್ದಾರೆ.

 

 
 
 
 
 
 
 
 
 
 
 
 
 

Happy birthday my dear friend,god bless u!!🤗

A post shared by Nikhil Kumar (@nikhilgowda_jaguar) on Oct 2, 2019 at 9:02pm PDT

 

ಅಭಿಷೇಕ್ ಒಟ್ಟಿಗೆ ನಗುತ್ತಿರುವ ಫೋಟೋ ಅಪ್ಲೋಡ್ ಮಾಡಿ 'ಹ್ಯಾಪಿ ಬರ್ತಡೇ ಬ್ರದರ್, ಗಾಡ್ ಬ್ಲಸ್ ಯೂ' ಎಂದು ಬರೆದುಕೊಂಡಿದ್ದಾರೆ.

 

 
 
 
 
 
 
 
 
 
 
 
 
 

Happy birthday brother,god bless u!!🤗

A post shared by Nikhil Kumar (@nikhilgowda_jaguar) on Oct 2, 2019 at 11:48pm PDT

ಈ ಹಿಂದೆ ರೆಬೆಲ್ ಸ್ಟಾರ್ ಅಂಬರೀಶ್ ಅಭಿಮಾನಿಗಳಿಗೆ ಮತ್ತು ಸ್ವಾಭಿಮಾನಿ ಮಂಡ್ಯ ಮಹಾಜನತೆಗೆ ಹುಟ್ಟು ಹಬ್ಬದ ಪ್ರಯುಕ್ತ ನಿಮ್ಮ ಮನೆಯ ಆಸುಪಾಸಿನಲ್ಲಿ ಗಿಡ ನೆಡೋಣ ಎಂದು ಮನವಿ ಮಾಡಿಕೊಂಡಿದ್ದರು. ಅದರಂತೆ ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘದ ಅಧ್ಯಕ್ಷರು 15,000 ಸಸಿಗಳನ್ನು ವಿತ್ತರಿಸಿದ್ದಾರೆ.

ಬರ್ತಡೇಗೆ ಬರಬೇಡಿ ಮನೆ ಪಕ್ಕ ಗಿಡ ನೆಡಿ: ಅಂಬಿ ಪುತ್ರನ ಮನವಿ!