‘ಅಮರ್’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಆರಡಿ ಹುಡುಗ ಜೂನಿಯರ್ ರೆಬೆಲ್ ಸ್ಟಾರ್ ಅಂಬರೀಶ್ ಅಕ್ಟೋಬರ್ 3ಕ್ಕೆ 25 ವಸಂತಗಳನ್ನು ಪೂರೈಸುತ್ತಿದ್ದಾರೆ. ಭಯಂಕರ ಫಿಸಿಕ್ ಇದ್ದರೂ, ಮನಸ್ಸು ಮಾತ್ರ ಹೂವಿನಂತೆ ಕೋಮಲ.  

ಸ್ಯಾಂಡಲ್‌ವುಡ್ ರೆಬೆಲ್ ಸ್ಟಾರ್ ಅಂಬರೀಶ್‌ಗೆ ಮಗನ ಮೊದಲ ಚಿತ್ರ ನೋಡಬೇಕೆಂಬ ಆಸೆ ಇತ್ತು. ಆದರೆ, ಚಿತ್ರ ರಿಲೀಸ್ ಆಗೋ ಮುನ್ನವೇ ಕೊನೆಯುಸಿರೆಳೆದರು. ಅಭಿಮಾನಿಗಳು ಮಾತ್ರ ಮಗನ ಚಿತ್ರವನ್ನು 100 ದಿನ ಪೂರೈಸುವಂತೆ ಮಾಡಿದ್ದು ವಿಶೇಷ. 2018ರಲ್ಲಿ ತಂದೆಯೊಂದಿಗೆ 24ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಅಭಿ ಈ ಬಾರಿ ಅಂಬಿ ಇಲ್ಲದ ಕಾರಣ ಯಶ್, ದರ್ಶನ್ ಹಾಗೂ ಪ್ರಜ್ವಲ್ ದೇವರಾಜ್‌ ನಡೆದ ಹಾದಿಯಲೇ ಸಾಗಬೇಕೆಂದು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ.

ಕುತೂಹಲ ಮೂಡಿಸಿದೆ ಅಭಿಷೇಕ್ ಹೊಸ ಲುಕ್!

ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸದೇ, ಸರಳವಾಗಿ, ಪರಿಸರ ಕಾಳಜಿ ತೋರುವ ಮೂಲಕ ಆಚರಿಸಬೇಕೆಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದು, ಇನ್‌ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರು ಮನವಿ ಮಾಡಿಕೊಂಡಿದ್ದು ಹೀಗೆ....

‘ಸುವರ್ಣ ಕರ್ನಾಟಕದ ಎಲ್ಲ ರೆಬೆಲ್ ಸ್ಟಾರ್ ಅಂಬರೀಶ್ ಅಭಿಮಾನಿಗಳಿಗೆ ಮತ್ತು ಸ್ವಾಭಿಮಾನಿ ಮಂಡ್ಯ ಮಹಾಜನತೆಗೆ ನನ್ನ ಪ್ರೀತಿಯ ಸಮಸ್ಕಾರ,

ಇದು ನನ್ನ ಒಂದು ಸಣ್ಣ ಮನವಿ. ನನ್ನ ತಂದೆಗೆ ಎಷ್ಟು ಪ್ರೀತಿ ಕೊಟ್ಟಿದ್ದೀರೊ ನನಗೂ ಅಷ್ಟೇ ಪ್ರೀತಿ ಕೊಟ್ಟು ಇಲ್ಲೀವರೆಗೂ ಬೆಳೆಸುತ್ತಾ ಬಂದಿದ್ದೀರಿ. ಚಿಕ್ಕಂದಿನಿಂದ ಇಲ್ಲಿಯವರೆಗೆ ಪ್ರತೀ ವರ್ಷವೂ ತಮ್ಮ ತಮ್ಮ ಊರುಗಳಿಂದ ನನ್ನ ಹುಟ್ಟುಹಬ್ಬಕ್ಕೆ ಬಂದು, ಆಶೀರ್ದಿಸಿ ಹಾರೈಸಿದ್ದೀರಿ. ನಿಮ್ಮ ಈ ಪ್ರೀತಿ ಅಭಿಮಾನಕ್ಕೆ ನಮ್ಮ ಕುಟುಂಬ ಸದಾ ಚಿರುಋಣಿ.  ಆದರೆ ಈ ವರ್ಷ ನ ನ್ನತಂದೆ ದಿವಂಗತರಾಗಿರುವುದರಿಂದ ನನ್ನ ಹುಟ್ಟು ಹಬ್ಬವನ್ನುಆಚರಸುವ ಬದಲು, ನಾವೆಲ್ಲರೂ ನಮ್ಮ ನಮ್ಮ ಊರುಗಳಲ್ಲಿ ಅಥವಾ ಮನೆಯ ಸಮೀಪ ರೆಬೆಲ್ ಸ್ಟಾರ್ ಅಂಬರೀಶ್ ಹೆಸರಿನಲ್ಲಿ ಗಿಡ ನೆಟ್ಟು, ಅವರಿಗೆ ಗೌರವ ಸಲ್ಲಿಸೋಣ. ಇದರಿಂದ ಅವರ ನೆನಪು ನಮ್ಮೊಂದಿಗೆ ಸದಾ ಇರಲಿ. ಇದು ನಮ್ಮೆಲ್ಲಿ ನನ್ನ ವಿನಂತಿ. ನಿಮ್ಮ ಪ್ರೀತಿಯ ಅಭಿ... ’ ಎಂದು ಮನವಿ ಮಾಡಿಕೊಂಡಿದ್ದಾರೆ.

 

ದರ್ಶನ್ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಆಹಾರ ಪದಾರ್ಥಗಳನ್ನು ನಿಮ್ಮೂರಲ್ಲಿರುವ ಅನಾಥ ಆಶ್ರಮಕ್ಕೊ ಅಥವಾ ವೃದ್ಧಾಶ್ರಮಕ್ಕೋ ದಾನ ಮಾಡಬೇಕೆಂದು ವಿನಂತಿಸಿಕೊಂಡಿದ್ದರು. ರಾಕಿಂಗ್ ಸ್ಟಾರ್ ಯಶ್ ಸಹ ಅಭಿಮಾನಿಗಳಿಗೆ ಮನೆ ಸಮೀಪ ಬಾರದಂತೆ ಮನವಿ ಮಾಡಿಕೊಂಡಿದ್ದರು. 

ಅಭಿಷೇಕ್ ಲಂಡನ್‌ನಲ್ಲಿದ್ದಾಗ ಪಾಕೆಟ್ ಮನಿಗಾಗಿ ಹೀಗ್ಮಾಡ್ತಿದ್ದರಂತೆ!