ಕುರುಕ್ಷೇತ್ರ ಒಪ್ಪದಿದ್ದರೆ ನನ್ನಂಥ ಮುಠ್ಠಾಳ ಮತ್ತೊಬ್ಬ ಇರುತ್ತಿರಲಿಲ್ಲ!
ದರ್ಶನ್ ಅಭಿನಯಿಸಿದ ‘ಮುನಿರತ್ನಂ ಕುರುಕ್ಷೇತ್ರ’ಏಕಕಾಲದಲ್ಲೇ ಬಹು ಭಾಷೆಯಲ್ಲಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ದರ್ಶನ್ ಜತೆ ಮಾತುಕತೆ.
‘ಮುನಿರತ್ನ ಕುರುಕ್ಷೇತ್ರ’ದ ಮೇಲಿನ ನಿಮ್ಮ ನಿರೀಕ್ಷೆ ಏನು?
ಪ್ರೇಕ್ಷಕರು, ಅಭಿಮಾನಿಗಳು ನನ್ನ ಸಿನಿಮಾದ ಮೇಲೆ ಏನೆಲ್ಲ ನಿರೀಕ್ಷೆ ಇಟ್ಟುಕೊಳ್ಳುತ್ತಾರೋ ಅದೇ ನನ್ನ ನಿರೀಕ್ಷೆ. ಅವರಿಗೆ ಈ ಸಿನಿಮಾ ಖುಷಿಕೊಟ್ಟರೆ ಅದೇ ನಮಗೂ ಸಂತೋಷ. ನಿರ್ಮಾಪಕರಿಗೆ ಹಣ ಸಿಕ್ಕರೆ, ಮತ್ತೊಂದು ಇಂತಹ ಸಿನಿಮಾ ಮಾಡಲು ಸಾಧ್ಯವಾಗುತ್ತೆ.
ಕುರುಕ್ಷೇತ್ರದಂತಹ ಒಂದು ಪೌರಾಣಿಕ ಸಿನಿಮಾ ಈ ಕಾಲಕ್ಕೆ ಎಷ್ಟುಪ್ರಸ್ತುತ?
ಡಿಜಿಟಲ್ ಯುಗದಲ್ಲಿ ನಾವು ಇತಿಹಾಸ ಮರೆಯುತ್ತಿದ್ದೇವೆ. ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳ ಬಗ್ಗೆ ಮಕ್ಕಳಿಗೆ ಅರಿವಿಲ್ಲ. ಹಾಗಾಗಿ ಕುರುಕ್ಷೇತ್ರದಂತಹ ಸಿನಿಮಾಗಳು ಇನ್ನು ಹೆಚ್ಚಾಗಿ ಬರಬೇಕು.
ಕುರುಕ್ಷೇತ್ರ ಸಪ್ತ ಸುಂದರಿಯರ ಸೌಂದರ್ಯ; ನೋಡೋದೇ ಚಂದ!
ಕುರುಕ್ಷೇತ್ರ ಹಲವು ಭಾಷೆಗಳಲ್ಲೂ ಬರುತ್ತಿರುವುದರ ಬಗ್ಗೆ ಏನ್ ಹೇಳ್ತೀರಾ?
ಖುಷಿ ಆಗುತ್ತೆ. ನಮಗೂ ದೊಡ್ಡ ಮಾರುಕಟ್ಟೆಇದೆ. ಅದು ಇನ್ನಷ್ಟುವಿಸ್ತರಣೆ ಆಗಬೇಕು. ಇದಕ್ಕೆ ಕನ್ನಡದವರು ಬೆಂಬಲ ನೀಡಬೇಕು.
‘ಕುರುಕ್ಷೇತ್ರ’ದ ಆಫರ್ ಬಂದಾಗ ನಿಮ್ಗೆ ಹೇಗನಿಸಿತು ?
ಇಂತಹ ಸಿನಿಮಾ ಮಾಡುತ್ತೇನೆಂದು ಮುಂದೆ ಬರುವವರೇ ಕಮ್ಮಿ. ಅಂತಹದರಲ್ಲಿ ನಾನು ಆ್ಯಕ್ಟ್ ಮಾಡಲ್ಲ ಅಂತ ಹೇಳಿದ್ದರೆ ನನ್ನಂತಹ ಮುಠ್ಠಾಳ ಇನ್ನೊಬ್ಬ ಇರುತ್ತಿರಲಿಲ್ಲ.
ದುರ್ಯೋಧನ ಪಾತ್ರಕ್ಕೆ ನೆಗೆಟಿವ್ ಶೇಡ್ ಕೂಡಾ ಇದೆಯಲ್ಲ?
ಇಲ್ಲ ಅದು ತಪ್ಪು ಗ್ರಹಿಕೆ. ಮಹಾಭಾರತದಲ್ಲಿ ನಿಜವಾದ ಹೀರೋ ದುರ್ಯೋಧನ. ಆತನ ಯಾರಿಗೂ ದ್ರೋಹ ಮಾಡಿಲ್ಲ. ಮೋಸ ಮಾಡಿಲ್ಲ. ಆತ ಹುಟ್ಟಿದ್ದು ಅಹಂ ನಲ್ಲಿ , ಸತ್ತಿದ್ದು ಕೂಡ ಅಹಂ ನಲ್ಲಿಯೇ. ಪಾಂಡವರೆಲ್ಲ ಮೊದಲು ನರಕಕ್ಕೆ ಹೋದರೆ, ದುರ್ಯೋಧನ ನೇರ ಸ್ವರ್ಗ ಸೇರಿದ.
ದರ್ಶನ್ ಅವರು ನಟನಾಗುವ ಮುಂಚೆ ಪೌರಾಣಿಕ ಸಿನಿಮಾ ನೋಡಿದ್ದು ಇತ್ತಾ?
ನೋಡಿದ್ದೇನೆ, ನಟನಾದ ನಂತರವೂ ಪೌರಾಣಿಕ ಸಿನಿಮಾ ನೋಡಿದ್ದೇನೆ. ‘ಭಕ್ತಪ್ರಹ್ಲಾದ’ ಸಿನಿಮಾವನ್ನು ತುಂಬಾ ಸಾರಿ ನೋಡಿದ್ದೇನೆ. ಎನ್‌ಟಿಆರ್ ಅವರ ಸಿನಿಮಾಗಳನ್ನೂ ನೋಡಿದ್ದೇನೆ. ಅಲ್ಲಿಂದೆಲ್ಲ ಕಲಿತು, ನನ್ನ ಶೈಲಿಯಲ್ಲಿ ಹೇಗೆ ಮಾಡಬಹುದೋ ಹಾಗೆ ಮಾಡಿದ್ದೇನೆ.
ಐತಿಹಾಸಿಕ, ಪೌರಾಣಿಕ ಪಾತ್ರಗಳನ್ನು ಒಪ್ಪಿಕೊಳ್ಳುವಾಗ ನಿಮ್ಮ ಮಾನದಂಡಗಳೇನು?
ಈ ತರಹದ ಸಿನಿಮಾಗಳ ಮಾಡ್ಯುಲೇಶನ್ ಬೇರೆಯೇ ಇರುತ್ತದೆ. ಹೀಗಾಗಿ, ಮೊದಲು ಸ್ಕಿ್ರಪ್ಟ್ ಕೊಡಿ ಎಂದು ಕೇಳುತ್ತೇನೆ. ಅದನ್ನು ಓದಿ, ನನಗೆ ಆ ಪಾತ್ರ ಮಾಡಲು ಸಾಧ್ಯ, ನ್ಯಾಯ ಕೊಡಬಹುದೆಂಬ ನಂಬಿಕೆ ಬಂದರಷ್ಟೇ ಒಪ್ಪಿಕೊಳ್ಳುತ್ತೇನೆ.
ಕಿಚ್ಚನ ಬಗ್ಗೆ ಕೇಳಿದ್ದಕ್ಕೆ ಮಾಧ್ಯಮದವರ ಮೇಲೆ ದರ್ಶನ್ ಗರಂ!
ಚಿತ್ರೀಕರಣದ ಅನುಭವ ಬಗ್ಗೆ ಹೇಳೋದಾದ್ರೆ...
ಇಲ್ಲಿ ನಾರ್ಮಲ್ ಅಂತ ಇರಲೇ ಇಲ್ಲ. ಬೆಳಗ್ಗೆ 5 ಗಂಟೆಗೆ ಎದ್ದು ಜಿಮ್ ಮಾಡ್ತಾ ಇದ್ದೆ. ಅಲ್ಲಿಂದ ರೆಡಿಯಾಗಿ 9 ಗಂಟೆಗೆ ಸೆಟ್‌ಗೆ ಹೋಗಬೇಕಿತ್ತು. 9 ರಿಂದ ಸಂಜೆ 6ರವರೆಗೆ ಶೂಟಿಂಗ್ ನಡೆಯುತ್ತಿತ್ತು. ಮತ್ತೆ 6 ಗಂಟೆಯಿಂದ ಜಿಮ್. ಆ ನಂತರ ಕಲಾವಿದರೆಲ್ಲ ಒಂದು ರೂಮ್‌ನಲ್ಲಿ ರಾತ್ರಿ ಸೇರುತ್ತಿದ್ದೆವು. ಅವರೆಲ್ಲಾ ಹೋದ ಮೇಲೆ ನಾನು ಸ್ಕಿ್ರಪ್ಟ್ ಓದುತ್ತಿದ್ದೆ. ಅಲ್ಲಿಂದ ಎರಡೂವರೆ ಗಂಟೆವರೆಗೆ ಓದಿ ಮಲಗುತ್ತಿದ್ದೆ. ಬೆಳಗ್ಗೆ ಎದ್ದು ರಾತ್ರಿ ಓದಿದ್ದನ್ನು ರೀಕಾಲ್ ಮಾಡಿಕೊಂಡು ಮತ್ತೆ ಸೆಟ್‌ಗೆ ಹೋಗುತ್ತಿದೆ.
ಅಂಬರೀಷ್ ಅವರ ಜತೆಗಿನ ಚಿತ್ರೀಕÃಣದ ಅನುಭವ ಹೇಗಿತ್ತು?
ಸೆಟ್‌ನಲ್ಲಿ ಅವರಿದ್ದರೆ, ಆನೆ ಬಲ ಇದ್ದಂತೆ. ಕೆಲವೊಮ್ಮೆ ಶೂಟಿಂಗ್ ಮುಗಿದ ಬಳಿಕವೂ ಸೆಟ್‌ನಲ್ಲಿ ಇದ್ದು ಗೈಡ್ ಮಾಡುತ್ತಿದ್ದರು.
ಕರುಕ್ಷೇತ್ರ ಮಲ್ಟಿಸ್ಟಾರ್ ಸಿನಿಮಾ ಆಗಿದ್ದರಿಂದ ನಿಮ್ಗೇನು ಲಾಭ ಎನಿಸಿತು?
ನಮ್ಮ ಜತೆಗೆ ಹಿರಿಯರು, ಅನುಭವಿಗಳು ಇದ್ದಾರೆಂದರೆ, ಅವರಿಂದ ಸಾಕಷ್ಟುಕಲಿಯುವುದು ಇರುತ್ತೆ. ಆ ವಿಚಾರದಲ್ಲಿ ಕುರುಕ್ಷೇತ್ರದಿಂದ ನನಗೆ ದೊಡ್ಡ ಲಾಭ ಆಗಿದೆ. ಒಂದೆಡೆ ಅಪ್ಪಾಜಿ ಅಂಬರೀಷ್, ಮತ್ತೊಂದೆಡೆ ಶ್ರೀನಿವಾಸಮೂರ್ತಿ, ರವಿಚಂದ್ರನ್, ಅರ್ಜುನ್ ಸರ್ಜಾ, ರವಿಶಂಕರ್ ಸೇರಿದಂತೆ ದೊಡ್ಡ ಅನುಭವಿಗಳೇ ಇಲ್ಲಿದ್ದಾರೆ.
ಐತಿಹಾಸಿಕ-ಪೌರಾಣಿಕ ಸಿನಿಮಾ ಅಂತ ಬಂದಾಗ ನಿಮ್ಮ ಮುಂದಿನ ಕನಸು?
ನಾನು ಕನಸು ಕಾಣುವುದಿಲ್ಲ. ಈ ರೀತಿಯ ಸಿನಿಮಾ ಮಾಡುವ ಕನಸು ನಿರ್ಮಾಪಕನಿಗೆ ಇರಬೇಕು. ಹಣ ಹಾಕುವವನಿಗೆ ಎರಡು ಗುಂಡಿಗೆ ಬೇಕು.