ಸ್ಯಾಂಡಲ್‌ವುಡ್ ಸ್ಟಾರ್ ಗಳಾದ ಸುದೀಪ್- ದರ್ಶನ್ ಒಂದು ಕಾಲದ ಆತ್ಮೀಯ ಸ್ನೇಹಿತರು. ಸ್ನೇಹಿತರೆಂದರೆ ಇವರ ರೀತಿ ಇರಬೇಕು ಎನ್ನುವ ಮಾತಿತ್ತು. ಆದರೆ ಅದೇನಾಯ್ತೋ ಏನೋ ಇವರಿಬ್ಬರ ನಡುವೆ ಅಷ್ಟಕ್ಕಷ್ಟೇ ಎನ್ನುವಂತಾಯಿತು. ಒಬ್ಬರ ಬಗ್ಗೆ ಒಬ್ಬರು ಮಾತನಾಡುವುದು, ಒಂದೇ ವೇದಿಕೆ ಹಂಚಿಕೊಳ್ಳುವುದನ್ನು ಅವಾಯ್ಡ್ ಮಾಡತೊಡಗಿದರು. ಆಗಲೇ ಅವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂದು ಗೊತ್ತಾಗತೊಡಗಿತ್ತು.

ರಿಲೀಸ್‌ಗೂ ಮುನ್ನವೇ ಬಾಲಿವುಡ್‌ಗೆ ಕೋಟಿಗೆ ಮಾರಾಟವಾಯ್ತಾ ಕುರುಕ್ಷೇತ್ರ ?

'ಪೈಲ್ವಾನ್' ಪ್ರಚಾರದ ವೇಳೆ ದರ್ಶನ್ ಜೊತೆಗಿನ ಸ್ನೇಹದ ಬಗ್ಗೆ ಕೇಳಿದಾಗ, ಸುದೀಪ್ 'ಅವನಲ್ಲಿ ಒಂದೊಳ್ಳೆ ಗುಣವಿದೆ. ಅದಕ್ಕೆ ನಾನು ತುಂಬಾ ಕನೆಕ್ಟ್ ಆಗ್ತೀನಿ. ಅವನಲ್ಲಿರುವ ಟ್ಯಾಲೆಂಟ್ ಸರಿಯಾಗಿ ಬಳಸಿಕೊಂಡರೆ ಇನ್ನು ದೊಡ್ಡ ಮಟ್ಟಕ್ಕೆ ಬೆಳೆಯುತ್ತಾನೆ' ಎಂದು ಹೇಳಿ ಅಭಿಮಾನಿಗಳ ಮನ ಗೆದ್ದರು. ಆಗ ಅಭಿಮಾನಿಗಳು ಅವರಿಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ನೋಡುವ ಆಸೆಯನ್ನೂ ವ್ಯಕ್ತಪಡಿಸಿದ್ದರು.

ದರ್ಶನ್ 50 ನೇ ಸಿನಿಮಾ ಕುರುಕ್ಷೇತ್ರ ಆಗಸ್ಟ್ 09 ರಂದು ತೆರೆಗೆ ಬರಲಿದೆ. ಈ ಚಿತ್ರದ ಪ್ರೆಸ್‌ಮೀಟ್‌ನಲ್ಲಿ ಮಾಧ್ಯಮದವರು 'ಸುದೀಪ್‌ ಅವರು ನಿಮ್ಮ ಬಗ್ಗೆ ಕೇಳಿದ್ದಕ್ಕೆ ನಿಮ್ಮಲ್ಲಿರುವ ಒಳ್ಳೆಯ ಗುಣ ಅವರಿಗಿಷ್ಟವೆಂದು ಹೇಳಿದರು. ಅಭಿಮಾನಿಗಳು ನಿಮ್ಮಿಬ್ಬರನ್ನು ತೆರೆ ಮೇಲೆ ಕಾಣಬೇಕೆಂದು ಇಷ್ಟಪಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮೆಸೇಜ್ ಮಾಡುತ್ತಾರೆ. ಯಾಕೆ ದರ್ಶನ್ ಏನು ಹೇಳುತ್ತಿಲ್ಲ' ಎಂದಾಗ ದರ್ಶನ್ ಕೊಟ್ಟ ಉತ್ತರ ಅಭಿಮಾನಿಗಳಿಗೆ ಶಾಕ್‌ ಕೊಟ್ಟಿದೆ.

ಕುರುಕ್ಷೇತ್ರ 2 ನೇ ಟ್ರೇಲರ್ ರಿಲೀಸ್; ದರ್ಶನ್ ಅಬ್ಬರಕ್ಕೆ ಅಭಿಮಾನಿಗಳು ಫುಲ್ ಖುಷ್!

'ಇನ್ಮೇಲೆ ದರ್ಶನ್ ಎಷ್ಟೊತ್ತಿಗೆ ಏಳಬೇಕು, ಏನ್ ತಿನ್ನಬೇಕು, ಯಾರ್ ಫೋನ್ ಎತ್ತಬೇಕು, ಯಾರ್ ಫೋನ್ ಎತ್ತಬಾರ್ದು, ಯಾರ್ ಜೊತೆ ಫ್ರೆಂಡ್‌ಶಿಪ್ ಮಾಡ್ಬೇಕು ಯಾರ್ ಜೊತೆ ಮಾಡ್ಬಾರ್ದು, ರಾತ್ರಿ ನನ್ನ ಹೆಂಡ್ತಿ ಪಕ್ಕ ಮಲಗ್ಬೇಕಾ, ಮಲಗ್ಬಾರ್ದಾ ಅಂತ ಚಾನೆಲ್‌ನವರು ನೀವು ಡಿಸೈಡ್‌ ಮಾಡ್ತೀರಾ ಮಾ? ಇದು ನನ್ನ ಪರ್ಸನಲ್ ಲೈಫ್‌, ನಾನೇ ನೋಡಿಕೊಳ್ಳುತ್ತೇನೆ' ಎಂದು ಉತ್ತರಿಸಿ ಪ್ರೆಸ್‌ಮೀಟ್‌ ನಿಂದ ಎದ್ದು ಹೊರಹೋದರು.

"