ಕೃಷ್ಣನ ಹೆಸರಲ್ಲಿ ಸಿನಿಮಾ ಮಾಡಿ ಸ್ಯಾಂಡಲ್‌ವುಡ್ ಕೃಷ್ಣನೆಂದೇ ಖ್ಯಾತರಾದ ಅಜಯ್ ರಾವ್ ಹೆಣ್ಣು ಮಗುವಿಗೆ ತಂದೆಯಾಗಿ, ಹ್ಯಾಪಿ ಮೂಡಿನಲ್ಲಿದ್ದಾರೆ.

'ತಾಯಿಗೆ ತಕ್ಕ ಮಗ' ಚಿತ್ರ ಬಿಡುಗಡೆಯಾಗಿದೆಯಷ್ಟೇ. ಈ ಖುಷಿಯ ನಡುವೆ ಅಜಯ್ ರಾವ್ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2014ರ ಡಿಸೆಂಬರ್‌ನಲ್ಲಿ ಬಾಲ್ಯ ಗೆಳತಿಯೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟ ಅಜಯ್, ಇದೀಗ ಪ್ರೌಡ್ ಫಾದರ್ ಸಹ ಆಗಿದ್ದಾರೆ. ಅಜಯ್ ಪತ್ನಿ ಸ್ವಪ್ನಾರೊಂದಿಗೆ ಮನೆಗೆ ಬಂದ ಹೊಸ ಅತಿಥಿಯ ಫೋಟೋವನ್ನು ಅಜಯ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮಗಳು ಹುಟ್ಟಿದ ತಕ್ಷಣವೇ ತೆಗೆದುಕೊಂಡ ಸೆಲ್ಫೀಯನ್ನೂ ಪೋಸ್ಟ್ ಮಾಡಿದ್ದು, ಅಪ್ಪನಾದ ಸುದ್ದಿಯನ್ನು ಶೇರ್ ಮಾಡಿಕೊಂಡಿದ್ದಾರೆ.

ಸ್ವಪ್ನಾಒಬ್ಬ ಒಳ್ಳೆಯ ಚಿತ್ರ ಕಲಾವಿದೆ. ಇವರು ಗಣೇಶ ಹಬ್ಬದಂದು ಬಿಡಿಸಿದ ಚಿತ್ರವೊಂದನ್ನು ಅಜಯ್ ಶೇರ್ ಮಾಡಿದ್ದರು. ಮಗುವಿನ ನಿರೀಕ್ಷೆಯಲ್ಲಿದ್ದ ಸ್ವಪ್ನಾ ಆಗ ಫುಲ್ ಖುಷಿಯಾಗಿದ್ದರು. ಡಿಸೆಂಬರ್‌ನಲ್ಲಿ ನಾಲ್ಕನೇ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳಲ್ಲಿರುವ ಅಜಯ್‌ಗೆ ನವೆಂಬರ್ ಲಕ್ಕಿ ತಿಂಗಳಾಗಿದೆ. 'ತಾಯಿಗೆ ತಕ್ಕ ಮಗ' ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದ್ದು, ಇದೀಗ ಮನೆಗ ಲಕ್ಷ್ಮಿಯನ್ನೂ ಸ್ವಾಗತಿಸಿದ್ದಾರೆ.