ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು 'ಕಿರಿಕ್ ಹುಡುಗಿ' ಎಂದೇ ಖ್ಯಾತಿ ಗಳಿಸಿರುವ ನಟಿ ಸಂಯುಕ್ತಾ ಹೆಗ್ಡೆ ಸದ್ಯ ಹಿಂದಿ ರಿಯಾಲಿಟಿ ಶೋನಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಯಾದ ಈ ಕನ್ನಡತಿ ಉಳಿದೆಲ್ಲಾ ಸ್ಪರ್ಧಿಗಳನ್ನು ಹಿಂದಿಕ್ಕಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಹೌದು ಹಿಂದಿಯ ರಿಯಾಲಿಟಿ ಶೋ ಸ್ಪ್ಲಿಟ್ಸ್ ವಿಲಾದಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಯಾದ ಸಂಯುಕ್ತಾ, ಮೊದಲ ದಿನವೇ ಅಲ್ಲಿದ್ದ ಜೋಡಿಗಳಿಗೆ ಕಠಿಣ ಸ್ಪರ್ಧೆ ನೀಡಿದ್ದರು. ಅಲ್ಲದೇ ಸಂಯುಕ್ತಾ ಬಿಂದಾಸ್ ಆಗಿದ್ದ 'ಸ್ಯಾಮ್' ನೋಡಿದ ಹುಡುಗರೆಲ್ಲಾ ಈಕೆ ತನಗೇ ಜೋಡಿಯದರೆ ಚೆನ್ನಾಗಿತ್ತು ಎಂದು ಯೋಚಿಸುವಂತಯೆ ಮಾಡಿದ್ದರು. ಇದರಿಂದಾಗಿ ಶೋನಲ್ಲಿ ಆರಂಭದಿಂದಲೇ ಇದ್ದ ಹುಡುಗಿಯರು ತಮ್ಮ ಪಾರ್ಟ್ನರ್ ಮಿಸ್ ಆಗಬಹುದೇನೋ ಎಂಬ ಚಿಂತೆಗೊಳಗಾಗಿದ್ದರು. ಆದರೆ ಅಷ್ಟರಲ್ಲಾಗಲೇ ಬಿಂದಾಸ್ ಹುಡುಗಿ 'ಸ್ಯಾಮ್' ಮೋಡಿಗೊಳಗಾಗಿದ್ದ ಶಗುನ್ ಪಾಂಡೆ ಮಾತ್ರ ತಾನು ಔಟಾದರೂ ಚಿಂತೆಯಿಲ್ಲ ಎಂಬ ರಿಸ್ಕ್ ತೆಗೆದುಕೊಂಡು, ತನ್ನ ಜೋಡಿಯನ್ನು ಬಿಟ್ಟು ಕಿರಿಕ್ ಹುಡುಗಿಗೆ ಸಾಥ್ ನೀಡಿದ್ದರು.

ಕಿರಿಕ್ ಹುಡುಗಿಗಾಗಿ ತನ್ನ ಪ್ರೀತಿಯನ್ನೇ ತ್ಯಾಗ ಮಾಡಿದ ಈ ಚೆಲುವ!

ಅಲ್ಲಿಂದ ಒಂದಾಗಿ ಆಟವಾರಂಭಿಸಿದ ಸಂಯುಕ್ತಾ, ಶಗುನ್ ಜೋಡಿ ಆರಂಭದಲ್ಲಿ ಕೊಂಚ ಕಳಪೆ ಪ್ರದರ್ಶನ ನೀಡಿದರೂ, ಸೆಮಿ ಫೈನಲ್ ಹತ್ತಿರವಾಗುತ್ತಿದ್ದಂತೆಯೇ ಉಳಿದೆಲ್ಲಾ ಸ್ಪರ್ಧಿಗಳಿಗೆ ಭಾರೀ ಸ್ಪರ್ಧೆ ನೀಡಲಾರಂಭಿಸಿದ್ದರು. ಈ ಜೋಡಿ ಅದೆಷ್ಟು ಸಮರ್ಥವಾಗಿ ಆಡಿತೆಂದರೆ ಬಲಶಾಲಿ ಜೋಡಿಗಳನ್ನೂ ಹಿಂದಿಕ್ಕಿ ಸೆಮೀಸ್‌ಗೆ ಲಗ್ಗೆ ಇಟ್ಟಿತ್ತು. 

ಇದಾದ ಬಳಿಕ ಫೈನಲ್ ಪ್ರವೇಶಿಸಲು ನೀಡಿದ್ದ ಸ್ಪರ್ಧೆಯಲ್ಲಂತೂ ಸಂಯುಕ್ತಾ ಆಡಿದ ಪರಿ ನಿಜ್ಕಕೂ ಪ್ರಶಂಸನೀಯ. ಈ ಟಾಸ್ಕ್ ನಲ್ಲಿ ಜೋಡಿಗಳ ಎತ್ತರ ಅತ್ಯಂತ ಪ್ರಮುಖವಾಗಿತ್ತು. ಇಬ್ಬರೂ ಒಂದೇ ಎತ್ತರ ಹೊಂದಿದ್ದರೆ ತುಂಬಾ ಸುಲಭವಾಗಿ ಈ ಆಟ ಮುಗಿಸಬಹುದಿತ್ತು. ಆದರೆ ಸಂಯುಕ್ತಾ ಕೊಂಚ ಕುಳ್ಳಿಯಾಗಿದ್ದರೆ, ಆಕೆಯ ಜೋಡಿಯಾಗಿದ್ದ ಶಗುನ್ ಎತ್ತರದ ವ್ಯಕ್ತಿ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಕಿರಿಕ್ ಹುಡುಗಿ ಬಿಂದಾಸ್ ಆಗಿ ಆಡಿದ್ದಲ್ಲದೇ, ಎಲ್ಲಾ ಜೋಡಿಗಳನ್ನು ಹಿಂದಿಕ್ಕಿ ಫೈನಲ್ ಪ್ರವೇಶಿಸಿದ ಮೊದಲ ಜೋಡಿಯಾಗಿದೆ. ಈ ಮೂಲಕ ತಾನು ಟಾಸ್ಕ್ ನಲ್ಲಿ ಸೋಲಬಹುದೆಂದು ಲೆಕ್ಕಾಚಾರ ಹಾಕಿದವರಿಗೆ ಉಲ್ಟಾ ಹೊಡೆದಿದ್ದಾರೆ. 

ಹಿಂದಿ ರಿಯಾಲಿಟಿ ಶೋನಲ್ಲಿ ಕನ್ನಡತಿಯ ಕಮಾಲ್: ಸೆಮಿಫೈನಲ್‌ಗೆ ಲಗ್ಗೆ!

ಕಿರಿಕ್ ಹುಡುಗಿ ಸದ್ಯ ಛಲವಿದ್ದರೆ ಯಾವುದೂ ತೊಡಕಾಗುವುದಿಲ್ಲ ಎಂಬುವುದನ್ನು ಸಾಬೀತುಪಡಿಸಿದ್ದಾರೆ. ಸದ್ಯ ಫೈನಲ್ ತಲುಪಿರುವ ಈ ಕನ್ನಡತಿ ಫೈನಲ್ ನಲ್ಲೂ ಗೆದ್ದು ಮಿಂಚಲಿ ಎಂಬುವುದೇ ನಮ್ಮ ಆಶಯ.