ಮುಂಬೈ[ಜ,.25]: ತನ್ನ ಚೊಚ್ಚಲ ಸಿನಿಮಾದಲ್ಲಿ ಅದ್ಭುತ ನಟನೆ ಮೂಲಕ ಎಲ್ಲರ ಮನ ಗೆದ್ದಿದ್ದ, ಕಿರಿಕ್ ಹುಡುಗಿ ಎಂದೇ ಕರೆಯಲಾಗುವ ಸಂಯುಕ್ತಾ ಹೆಗ್ಡೆ ಸದ್ಯ ಹಿಂದಿಯ ರಿಯಾಲಿಟಿ ಶೋ ಒಂದರಲ್ಲಿ ಸದ್ದು ಮಾಡುತ್ತಿದ್ದಾರೆ. ಹಿಂದಿಯ ಪ್ರಖ್ಯಾತ ರಿಯಾಲಿಟಿ ಶೋ MTV ನಡೆಸಿಕೊಡುವ 'ಸ್ಪ್ಲಿಟ್ಸ್‌ವಿಲಾ'ಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಕಿರಿಕ್ ಹುಡುಗಿ ಎಲ್ಲರಿಗೂ ಟಕ್ಕರ್ ಕೊಟ್ಟು, ತಮ್ಮ ಪಾರ್ಟ್ನರ್ ಶಗುನ್ ಪಾಂಡೆಯೊಂದಿಗೆ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಹೌದು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಕಿರಿಕ್ ಹುಡುಗಿಗೆ ಶಗುನ್ ಪಾಂಡೆ ಮೊದಲ ನೋಟದಲ್ಲೇ ಬೋಲ್ಡ್ ಆಗಿದ್ದರು. ಹೀಗಾಗಿ ಸಂಯುಕ್ತಾಗೆ ಸ್ಪ್ಲಿಟ್ಸ್‌ವಿಲ್ಲಾದಲ್ಲಿ ಜೋಡಿ ಸಿಗಲು ಕಷ್ಟವಾಗಲಿಲ್ಲ. ಆರಂಭದಲ್ಲಿ ಈ ಜೋಡಿ ಕಳಪೆ ಪ್ರದರ್ಶನ ನೀಡಿದ್ದರೂ ದಿನಗಳೆದಂತೆ ಬಲಶಾಲಿಯಾಗತೊಡಗಿತ್ತು. ಇನ್ನು ಸೆಮಿಫೈನಲ್‌ಗೆ ಎಂಟ್ರಿ ನೀಡಲು ಕೊಟ್ಟ ಟಾಸ್ಕ್‌ನಲ್ಲಿ ಕಿರಿಕ್ ಹುಡುಗಿ ಆಡಿದ ಆಟ ಪ್ರಶಂಸನೀಯ.

ಕಿರಿಕ್ ಹುಡುಗಿಗಾಗಿ ತನ್ನ ಪ್ರೀತಿಯನ್ನೇ ತ್ಯಾಗ ಮಾಡಿದ ಈ ಚೆಲುವ!

ಸದ್ಯ ಸೆಮೀಸ್‌ಗೆ ಎಂಟ್ರಿ ನೀಡಿರುವ ಈ ಜೋಡಿ ಫೈನಲ್‌ಗೂ ಲಗ್ಗೆಯಿಡಲಿ ಎಂಬುವುದೇ ಹಾರೈಕೆ. ಈ ಹಿಂದೆ ಸಂಯುಕ್ತಾ MTV ರೋಡೀಸ್‌ ಎಂಬ ರಿಯಾಲಿಟಿ ಶೋನಲ್ಲೂ ಭಾಗವಹಿಸಿ ಟಾಸ್ಕ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಈ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು ಆದರೆ ದುರಾದೃಷ್ಟವಶಾತ್ ಸೋಲುಂಡಿದ್ದರು.