ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ನಟಿ ಸಮಂತಾ ರುತ್ ಪ್ರಭು ಅವರ ಸಿನಿ ಕೆರಿಯರ್‌ನಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಅತಿ ಹೆಚ್ಚು ಹಣ ಗಳಿಸಿದ ಟಾಪ್ 5 ಚಿತ್ರಗಳು ಯಾವುವು.

ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ನಟಿ ಸಮಂತಾ ರುತ್ ಪ್ರಭು. ತಮ್ಮ ವಿಭಿನ್ನ ನಟನೆ ಮತ್ತು ಪ್ರತಿಭೆಯಿಂದಲೇ ಮುಂಚೂಣಿಗೆ ಬಂದರು. ಕೆರಿಯರ್‌ನ ಉತ್ತುಂಗದಲ್ಲಿದ್ದಾಗಲೇ ಮದುವೆಯಾದರು. ನಂತರ ವಿಚ್ಛೇದನ, ಮಯೋಸಿಟಿಸ್‌ನಂತಹ ಆರೋಗ್ಯ ಸಮಸ್ಯೆಗಳನ್ನೂ ಎದುರಿಸಿ, ಇಂದಿಗೂ ನಟನೆಯಲ್ಲಿ ಸಕ್ರಿಯರಾಗಿದ್ದಾರೆ. ಅವರ ನಟನೆಯಲ್ಲಿ ಅತಿ ಹೆಚ್ಚು ಗಳಿಕೆ ಕಂಡ 5 ಚಿತ್ರಗಳ ಪಟ್ಟಿ ಇಲ್ಲಿದೆ.

Add Asianetnews Kannada as a Preferred SourcegooglePreferred

ಪುಷ್ಪ: ದಿ ರೈಸ್

2021ರಲ್ಲಿ ಅಲ್ಲು ಅರ್ಜುನ್ ನಟನೆಯಲ್ಲಿ ತೆರೆಕಂಡ ಈ ಚಿತ್ರವನ್ನು ನಿರ್ದೇಶಕ ಸುಕುಮಾರ್ ನಿರ್ದೇಶಿಸಿದ್ದರು. ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದರೂ, 'ಊ ಅಂತೀಯಾ ಮಾಮ' ಎಂಬ ಒಂದೇ ಒಂದು ಹಾಡಿಗೆ ಹೆಜ್ಜೆ ಹಾಕುವ ಮೂಲಕ ಸಮಂತಾ ಇಡೀ ದೇಶದ ಗಮನ ಸೆಳೆದರು. ಅಭಿಮಾನಿಗಳು ಅಲ್ಲು ಅರ್ಜುನ್‌ಗೆ ಸರಿಸಮನಾಗಿ ಸಮಂತಾಗೂ ಕಟೌಟ್ ಹಾಕಿ ಸಂಭ್ರಮಿಸಿದ್ದರು. ಈ ಚಿತ್ರವು 365 ಕೋಟಿ ರೂಪಾಯಿಗೂ ಹೆಚ್ಚು ಹಣ ಗಳಿಸಿ ದಾಖಲೆ ಬರೆಯಿತು.

ರಂಗಸ್ಥಳಂ

2018ರಲ್ಲಿ ತೆಲುಗಿನಲ್ಲಿ ತೆರೆಕಂಡ ಹಳ್ಳಿ ಸೊಗಡಿನ ಸಿನಿಮಾ 'ರಂಗಸ್ಥಳಂ'. ರಾಮ್ ಚರಣ್ ನಾಯಕನಾಗಿ ನಟಿಸಿದ್ದರೆ, ಸಮಂತಾ 'ರಾಮಲಕ್ಷ್ಮಿ' ಎಂಬ ಪಾತ್ರದಲ್ಲಿ ಮಿಂಚಿದ್ದರು. ಕುಟುಂಬ, ಪ್ರೀತಿ ಮತ್ತು ಹಾಸ್ಯದ ವಿಶಿಷ್ಟ ಕಥಾಹಂದರವನ್ನು ಈ ಚಿತ್ರ ಹೊಂದಿತ್ತು. ಸಮಂತಾ ಅವರ ವೃತ್ತಿಜೀವನದಲ್ಲಿ ಇದೊಂದು ಪ್ರಮುಖ ಚಿತ್ರವಾಯಿತು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 214 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.

ತೆರಿ

2016ರಲ್ಲಿ ತಮಿಳಿನಲ್ಲಿ ತೆರೆಕಂಡ 'ತೆರಿ' ಚಿತ್ರವನ್ನು ಅಟ್ಲೀ ನಿರ್ದೇಶಿಸಿದ್ದರು. ವಿಜಯ್ ನಾಯಕನಾಗಿದ್ದ ಈ ಚಿತ್ರದಲ್ಲಿ, ಸಮಂತಾ 'ಮಿತ್ರಾ' ಎಂಬ ವೈದ್ಯೆಯ ಪಾತ್ರದಲ್ಲಿ ವಿಜಯ್‌ಗೆ ಜೋಡಿಯಾಗಿ ನಟಿಸಿದ್ದರು. ಈ ಆ್ಯಕ್ಷನ್ ಎಂಟರ್‌ಟೈನರ್ ಸಿನಿಮಾ ಸುಮಾರು 150 ರಿಂದ 160 ಕೋಟಿ ರೂಪಾಯಿಗಳವರೆಗೆ ಗಳಿಕೆ ಮಾಡಿತ್ತು.

ಮಹಾನಟಿ

2018ರಲ್ಲಿ ನಿರ್ದೇಶಕ ನಾಗ್ ಅಶ್ವಿನ್ ನಿರ್ದೇಶನದಲ್ಲಿ ಬಂದ 'ಮಹಾನಟಿ' ಚಿತ್ರವು ದಿವಂಗತ ನಟಿ ಸಾವಿತ್ರಿ ಅವರ ಜೀವನಚರಿತ್ರೆಯಾಗಿದೆ. ಈ ಚಿತ್ರದಲ್ಲಿ ಕೀರ್ತಿ ಸುರೇಶ್ ನಾಯಕಿಯಾಗಿದ್ದರೂ, ಸಮಂತಾ ಕೂಡ ಅತ್ಯಂತ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅವರ ನಟನೆಗೆ ಉತ್ತಮ ಪ್ರಶಂಸೆ ವ್ಯಕ್ತವಾಗಿತ್ತು. ಈ ಚಿತ್ರವು 85 ರಿಂದ 90 ಕೋಟಿ ರೂಪಾಯಿಗಳವರೆಗೆ ಕಲೆಕ್ಷನ್ ಮಾಡಿತ್ತು.

ಯೇ ಮಾಯಾ ಚೇಸಾವೆ

ಸಮಂತಾ ಅವರ ಸಿನಿ ಬದುಕಿಗೆ ತಿರುವು ನೀಡಿದ ಚಿತ್ರವಿದು. ತೆಲುಗಿನಲ್ಲಿ ನಾಯಕಿಯಾಗಿ ಪಾದಾರ್ಪಣೆ ಮಾಡಿದ ಮೊದಲ ಸಿನಿಮಾ 'ಯೇ ಮಾಯಾ ಚೇಸಾವೆ'. ಇದು ತಮಿಳಿನ 'ವಿಣ್ಣೈತಾಂಡಿ ವರುವಾ ಯಾ' ಚಿತ್ರದ ತೆಲುಗು ರಿಮೇಕ್. ಸಿಂಬು ಪಾತ್ರದಲ್ಲಿ ನಾಗ ಚೈತನ್ಯ ಮತ್ತು ತ್ರಿಶಾ ಪಾತ್ರದಲ್ಲಿ ಸಮಂತಾ ನಟಿಸಿದ್ದರು. ಗೌತಮ್ ಮೆನನ್ ನಿರ್ದೇಶನದ ಈ ಚಿತ್ರ 30 ರಿಂದ 35 ಕೋಟಿ ರೂಪಾಯಿ ಗಳಿಸಿತ್ತು.