ಬಾಕ್ಸ್ ಆಫೀಸ್ ಗೆದ್ದ 'ಸುಲ್ತಾನ' ಕುದುರೆಯೊಂದಿಗಿನ ರೇಸೂ ಗೆದ್ದ

Salman Khan race with Horse
Highlights

 

ಬಾಲಿವುಡ್ ಬ್ಯಾಡ್ ಬಾಯ್ ಸದಾ ಒಂದಲ್ಲ ವಿಷಯಕ್ಕೆ ಸುದ್ದಿಯಲ್ಲಿರುತ್ತಾರೆ. ವಯಸ್ಸು 50 ಆದರೂ ಫಿಟ್‌ ಆಗಿರೋ ಈ ಬಾಲಿವುಡ್ ಹೀರೋ, ಕುದುರೆಯೊಂದಿಗೂ ರೇಸ್ ಮಾಡಿ, ತಾವು 'ಪರ್ಫೆಕ್ಟ್ ಫಿಟ್' ಎಂದು ಸಾಬೀತುಪಡಿಸಿದ್ದಾರೆ.

ಸಾಮಾನ್ಯವಾಗಿ ಬಹುತೇಕ ಚಿತ್ರಗಳಲ್ಲಿ ಕುದುರೆ ಕಾಣಿಸಿಕೊಳ್ಳುವಂತೆ ಮಾಡುವ ಸಲ್ಮಾನ್ ನಟನೆಯ 'ರೇಸ್ 3' ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದು ಎಲ್ಲರಿಗೂ ಗೊತ್ತು. ತಮ್ಮ ದೇಹ ದಂಡಿಸಿ, 'ಟೈಗರ್ ಝಿಂದಾ ಹೈ'ನಲ್ಲಿ ಕುದುರೆ ಬಳಸಿದ್ದರು. ಈ ಫಿಲ್ಮ್ ಯಶಸ್ವಿಯಾದ ಬೆನ್ನಲ್ಲೇ ಸಲ್ಮಾನ್, ಬಹುತೇಕ ತಮ್ಮೆಲ್ಲ ಚಿತ್ರಗಳಲ್ಲೂ ಕುದುರೆ ಬಳಸುತ್ತಿದ್ದಾರೆ. 1989ರಲ್ಲಿ 'ಬಿವಿ ತೊ ಹೊ ಐಸಿ' ಚಿತ್ರದ ಮೂಲಕ ತಮ್ಮ ಸಿಕ್ಸ್ ಪ್ಯಾಕ್ ದೇಹವನ್ನು ತೋರಿಸಿದ ಸಲ್ಮಾನ್, ಇವತ್ತಿಗೂ ಇದೇ ದೇಹದಾರ್ಢ್ಯವನ್ನು ಮೆಂಟೇನ್ ಮಾಡಿರುವುದು ಗ್ರೇಟ್.

'ರೇಸ್ 3' ಗೆಲುವಿನ ಖುಷಿಯಲ್ಲಿರುವ ಸಲ್ಮಾನ್ ಕುದುರೆಯೊಂದಿಗೆ ರೇಸ್‌ಗೆ ಇಳಿದಿದ್ದಾರೆ. ಆದರೆ, ತುಸು ದೂರ ಓಡಿದ ನಂತರ ತಮ್ಮ ಮಾರ್ಗವನ್ನು ಬದಲಾಯಿಸಿದರೂ, ಗೆದ್ದ ಖುಷಿ ವ್ಯಕ್ತಪಡಿಸುತ್ತಿರುವುದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. 

'ದಬಾಂಗ್ ರೀಲೋಡೆಡ್ ಟೂರ್' ಪ್ರಚಾರ ಕಾರ್ಯಕದಲ್ಲಿ ಸಲ್ಲು ಇದೀಗ ಬ್ಯುಸಿಯಾಗಿದ್ದಾರೆ. ತಮ್ಮ ಹೊಸ ಚಿತ್ರ 'ಆಲಿ ಅಬ್ಬಾಸ್ ಜಾಫರ್'  ಪ್ರಿಯಾಂಕ ಮತ್ತು ದಿಶಾ ಪಟಾನಿಯೊಂದಿಗೆ ತರೆ ಹಂಚಿಕೊಳ್ಳಲ್ಲಿದ್ದಾರೆ. ಅಲ್ಲದೇ 'ದಸ ಕಾ ದಮ್' ಎಂಬ ಕಾರ್ಯಕ್ರಮದ ಮೂಲಕ ಕಿರುತೆರೆಯಲ್ಲಿಯೂ ಮಿಂಚುತ್ತಿದ್ದಾರೆ.

loader