ತಮಿಳು, ತೆಲುಗು ಹಾಗೂ ಮಲಯಾಳಂ ಇಂಡಸ್ಟ್ರಿಯಲ್ಲಿ ಸಾಯಿ ಪಲ್ಲವಿ ಮೋಸ್ಟ್ ವಾಂಟೆಡ್ ನಟಿ. ಕೊನೆ ಸಿನಿಮಾ ‘ಪಡಿ ಪಡಿ ಲೀಚೆ ಮನಸು’ ಹೇಳಿಕೊಳ್ಳುವಂತ ಹೆಸರು ಮಾಡದೇ ಫ್ಲಾಪ್ ಆದರೂ ಕೂಡಾ ಡಿಮ್ಯಾಂಡ್ ಮಾತ್ರ ಸ್ವಲ್ಪವೂ ಕುಗ್ಗಿಲ್ಲ.  ವಿಜಯ ದೇವರಕೊಂಡ- ರಶ್ಮಿಕಾ ಮಂದಣ್ಣ ಬಹುನಿರೀಕ್ಷಿತ ಸಿನಿಮಾ ಡಿಯರ್ ಕಾಮ್ರೆಡ್ ಗೆ ಮೊದಲು ಸಾಯಿ ಪಲ್ಲವಿಯನ್ನೇ ಅಪ್ರೋಚ್ ಮಾಡಲಾಗಿತ್ತು.

ಲಿಪ್‌ಲಾಕ್‌ ಸೀನ್ ಬಗ್ಗೆ ಕೇಳಿದ್ರೆ '****' ಹಾಗೂ 'IDC' ಅಂದ ವಿಜಯ್ ದೇವರಕೊಂಡ!

ನಿರ್ದೇಶಕ ಭರತ್ ಕಮ್ಮ ಸಾಯಿ ಪಲ್ಲವಿಗೆ ಸ್ಕ್ರಿಪ್ಟ್ ವಿವರಿಸಿದ್ದಾರೆ. ಅದರಲ್ಲಿ ಕಿಸ್ಸಿಂಗ್ ಸೀನ್ ಇರುವುದರಿಂದ ಡಿಯರ್ ಕಾಮ್ರೆಡ್ ನಿರಾಕರಿಸಿದರು ಎನ್ನಲಾಗಿದೆ. 

ರಶ್ಮಿಕಾಗೆ ರಕ್ಷಿತ್ ಬಗ್ಗೆ ಪ್ರಶ್ನೆ ಕೇಳಿದ್ರೆ ಉತ್ತರ ಕೊಟ್ಟಿದ್ದು ವಿಜಯ್ ದೇವರಕೊಂಡ!

ವಿಜಯ್ ದೇವರಕೊಂಡ ಜೊತೆ ಕಿಸ್ಸಿಂಗ್ ಸೀನ್ ಮಾಡುವುದು ನನಗಿಷ್ಟವಿಲ್ಲವೆಂದು ಕಡ್ಡು ಮುರಿದಂತೆ ಹೇಳಿದ್ದಾರೆ. ಕೊನೆಗೆ ರಶ್ಮಿಕಾ ಮಂದಣ್ಣ ಈ ಪಾತ್ರವನ್ನು ಒಪ್ಪಿಕೊಂಡಿದ್ದಾರೆ.  ಇದೇ ಜುಲೈ 26 ರಂದು ಡಿಯರ್ ಕಾಮ್ರೆಡ್ ರಿಲೀಸ್ ಆಗಲಿದೆ.