ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ ಪಂಚ ಭಾಷಾ ಸಿನಿಮಾ 'ಡಿಯರ್ ಕಾಮ್ರೆಡ್' ಒಂದಲ್ಲಾ ಒಂದು ರೀತಿಯಲ್ಲಿ ಸದ್ದು ಮಾಡುತ್ತಿದೆ.

ರೊಮ್ಯಾನ್ಸಾ? ಕ್ರೈಂ? ರಾಜಕೀಯ ಸಿನಿಮಾನ? ಏನಪ್ಪಾ ಇದು ಕಾಮ್ರೇಡ್‌ ಅಂತ ಇದ್ದ ಕುತೂಹಲಕ್ಕೆ ಚಿತ್ರದ ಟ್ರೇಲರ್‌ ಮೂಲಕ ಉತ್ತರ ಕೊಟ್ಟಿದ್ದಾರೆ. ಟ್ರೇಲರ್ ನಲ್ಲಿ ಇನ್ನೂ ಹೈಲೈಟ್ ಆದದ್ದು 'ಗೀತಾ ಗೋವಿಂದಂ' ನಂತೆ ಇಲ್ಲಿಯೂ ಮಾಡಿರುವ ಲಿಪ್‌ಲಾಕ್‌ ಸೀನ್.

‘ಡಿಯರ್ ಕಾಮ್ರೆಡ್’ನಲ್ಲಿ ರಶ್ಮಿಕಾ ಮೇಕಪ್ ಮಾಡಿಲ್ವಂತೆ!

ಬೆಂಗಳೂರಿನಲ್ಲಿ ನಡೆದ ಡಿಯರ್ ಕಾಮ್ರೆಡ್ ಪ್ರೆಸ್ ಮೀಟ್‌ನಲ್ಲಿ ಮಾಧ್ಯಮದವರು ವಿಜಯ್‌ನನ್ನು ಪ್ರಶ್ನೆ ಕೇಳುವಾಗ ಕಿಸ್ಸಿಂಗ್ ದೃಶ್ಯಕ್ಕೆ ಲಿಪ್‌ ಲಾಕ್‌ ಎಂದು ಬಳಸಿದಕ್ಕೆ 'F***, ಯಾಕೆ ತಪ್ಪಾಗಿ ತೆಗೆದುಕೊಳ್ಳುತೀರಾ? ಇದೊಂದು ಸಿನಿಮಾ. ಇಲ್ಲಿ ನಾವು ಕ್ಯಾರೆಕ್ಟರ್ ಗಳು. ಕಿಸ್ಸಿಂಗ್ ಸೀನನ್ನು ಬಾಬಿ ಹಾಗೂ ಲಿಲ್ಲಿ ಪಾತ್ರದಲ್ಲಿ ನೋಡಿ. ನಾಟ್‌ ಆ್ಯಸ್ ವಿಜಯ್ ಆರ್ ರಶ್ಮಿಕಾ' ಎಂದು ಹೇಳಿದ್ದಾರೆ. ಇದರ ಬಗ್ಗೆ ರಶ್ಮಿಕಾಳನ್ನು ಕೇಳಿದ್ದಕ್ಕೆ ತಕ್ಷಣವೇ ವಿಜಯ್ 'I dont care, Just watch the movie' ಎಂದು ಉಡಾಫೆಯಲ್ಲಿ ಮಾತನಾಡಿದ್ದಾರೆ.