ಮಾಸ್ಕೋ[ಜ.19]: ಜಪಾನ್‌ ಸಮುದ್ರದ ಬಳಿ ಯುದ್ಧ ತರಬೇತಿ ತಾಲೀಮು ವೇಳೆ ರಷ್ಯಾದ ಎರಡು ಸುಖೋಯ್‌ ಎಸ್‌ಯು-34 ಯುದ್ಧ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡಿವೆ. ಆದರೆ ಡಿಕ್ಕಿಯ ಸಾಧ್ಯತೆ ಗಮನಿಸಿ ಈ ಎರಡೂ ಯುದ್ಧ ವಿಮಾನಗಳ ಪೈಲಟ್‌ಗಳು ವಿಮಾನದಿಂದ ಹೊರ ಹಾರುವಲ್ಲಿ ಯಶಸ್ವಿಯಾದ ಕಾರಣ, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಜಪಾನ್‌ ಸಮುದ್ರದ ಮೇಲೆ 35 ಕಿ.ಮೀ ಎತ್ತರದ ಪ್ರದೇಶದಲ್ಲಿ ಯುದ್ಧ ತಾಲೀಮು ವೇಳೆ ಎರಡೂ ಯುದ್ಧ ವಿಮಾನಗಳ ನಡುವೆ ಡಿಕ್ಕಿಯಾಗಿದೆ. ಈ ವೇಳೆ ಎರಡೂ ವಿಮಾನಗಳ ಇಬ್ಬರು ಪೈಲಟ್‌ಗಳೂ ವಿಮಾನದಿಂದ ಹೊರ ಹಾರಿದ್ದು, ಸಮುದ್ರಕ್ಕೆ ಜಿಗಿದಿದ್ದಾರೆ. ರಷ್ಯಾ ಸೇನೆ ಕಾರ್ಯಾಚರಣೆ ಕೈಗೊಂಡು, ಇಬ್ಬರನ್ನೂ ರಕ್ಷಣೆ ಮಾಡಿದೆ.