ರಾಮಾಯಣ ಸಿನಿಮಾ ಭರ್ಜರಿ ಸಕ್ಸಸ್ ಕಾಣ್ತಿದೆ. ಆದರೆ ಅದು ಅದರ ಬಜೆಟ್ಗೆ ತಕ್ಕಂತೆ ಹಣ ಗಳಿಕೆ ಮಾಡ್ತಿಲ್ಲ ಎಂಬ ವಾದಗಳು ಹುಟ್ಟಿಕೊಂಡಿವೆ. ಹಾಗಿದ್ದರೆ, ಅದು ತನ್ನ ಅಸಲಿ ಬಂಡವಾಳ ವಾಪಸ್ ತರಬೇಕಾದರೆ ಇನ್ನೂ ಎಷ್ಟು ಕಲೆಕ್ಷನ್ ಮಾಡಬೇಕು? ಚಿತ್ರಕ್ಕೆ ಇರುವ ಮುಂದಿನ ಸವಾಲುಗಳು ಏನೇನು? ಕಂಪ್ಲೀಟ್ ಮಾಹಿತಿ ಇಲ್ಲಿದೆ.
ರಾಕಿಂಗ್ ಸ್ಟಾರ್ ಯಶ್, ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ನಟನೆಯ 'ರಾಮಾಯಣ' ಸಿನಿಮಾದ ಮೊದಲ ಭಾಗವು ಭರ್ಜರಿಯಾಗಿ ಓಡ್ತಿದೆ. ನವೆಂಬರ್ 5 ರಂದು ವಿಶ್ವದಾದ್ಯಂತ ರಿಲೀಸ್ ಕಂಡ ಸಿನಿಮಾವು, ಬಾಕ್ಸ್ ಆಫೀಸ್ ಕಲೆಕ್ಷನ್ನಲ್ಲೂ ದಾಪುಗಾಲು ಇಟ್ಟಿದೆ.
ರಿಲೀಸ್ ಆದ ದಿನದಿಂದ ಇಲ್ಲಿಯವರೆಗೆ ದೇಶ ಹಾಗೂ ವಿದೇಶ ಸೇರಿ ಒಟ್ಟು 1,033.55 ಕೋಟಿ ಹಣ ಗಳಿಕೆ ಮಾಡಿದೆ. ಭಾರತೀಯ ಸಿನಿಮಾ ರಂಗಕ್ಕೆ ರಾಮಾಯಣ ಸಿನಿಮಾ ದೊಡ್ಡ ಮೈಲಿಗಲ್ಲಾಗಿ ನೆಲೆ ನಿಂತಿದೆ. ಜೊತೆಗೆ ಜಾಗತಿಕ ಮಟ್ಟದಲ್ಲೂ ದೊಡ್ಡ ಮೊಟ್ಟದಲ್ಲೇ ಸುದ್ದಿಯಾಗುತ್ತಿದ್ದು, ಆಸ್ಕರ್ ಎಂಟ್ರಿ ಬೆನ್ನಲ್ಲೇ ಈ ಸಿನಿಮಾಗೆ ವಿಶ್ವದಾದ್ಯಂತ ಬೇರೆ ಆಯಾಮವೇ ಸಿಕ್ಕಿದೆ. ಹೀಗಿರುವಾಗಲೂ ಸಿನಿಮಾ ತಂಡದ ಮುಂದೆ ಬೆಟ್ಟದಂತಹ ಸವಾಲುಗಳೇ ಇವೆ.
₹1,033 ಕೋಟಿ ಕಲೆಕ್ಷನ್, ಸಾಕಾ?
ರಾಮಾಯಣದ ಸಿನಿಮಾದ ಮೊದಲ ಭಾಗವು ಇಲ್ಲಿಯವರೆಗೆ 1,033.55 ಕೋಟಿ ರೂಪಾಯಿ ಗಳಿಸಿದೆ. ಇಷ್ಟು ರೂಪಾಯಿ ಗಳಿಸಿದ ಮೇಲೆ, ಈಗ ಆಗಿರುವ ಚಿತ್ರದ ಕಲೆಕ್ಷನ್ ಸಾಕಾ ಅನ್ನೋದು. ಯಾಕೆಂದರೆ ಸಿನಿಮಾ ನಿರ್ಮಾಣ ಆಗಿರೋದು ಬರೋಬ್ಬರಿ 4 ಸಾವಿರ ಕೋಟಿ ಬಜೆಟ್ನಲ್ಲಿ. ಹೀಗಾಗಿ ತಾವು ಹೂಡಿರುವ ಬಂಡವಾಳದ ಜೊತೆಗೆ ಬಡ್ಡಿ ಸಮೇತ ವಸೂಲಿ ಮಾಡಬೇಕು ಅಂದರೆ.. ಸಿನಿಮಾ ಯಶಸ್ವಿ ಪ್ರದರ್ಶನ ಇನ್ನೂ ಮುಂದುವರಿಯಬೇಕಾಗುತ್ತದೆ.
'ರಾಮಾಯಣ' ಸಿನಿಮಾಗೆ ಇರುವ ಚಾಲೆಂಜಸ್ ಏನು?
ಅಸಲು ವಾಪಸ್ ಪಡೆಯುವ ಸವಾಲು: ರಾಮಾಯಣ ಸಿನಿಮಾದ ಎರಡು ಭಾಗಗಳು 500 ಮಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಅಂದರೆ 4000 (ಇವತ್ತಿನ ಮೌಲ್ಯಕ್ಕೆ 4700 ಕೋಟಿ) ಕೋಟಿ ರೂಪಾಯಿ ವೆಚ್ಚದಲ್ಲಿ! ಎರಡು ಭಾಗ ಆಗಿರೋದ್ರಿಂದ ಮೊದಲ ಭಾಗದ ಅಸಲಿ ಬಂಡವಾಳ ವಾಪಸ್ ಬರಬೇಕು ಅಂದರೆ ಬಾಕ್ಸ್ ಆಫೀಸ್ನಲ್ಲಿ ಸಿನಿಮಾವು 2,350 ಕೋಟಿ ರೂಪಾಯಿ ಗಳಿಸಬೇಕಾಗುತ್ತದೆ. ಆದರೆ ಮೊದಲ ಭಾಗದ ಗಳಿಕೆ ಇಲ್ಲಿಯವರೆಗೆ 1,033 ಕೋಟಿ ರೂಪಾಯಿ ಆಗಿದೆ. ಅಂದರೆ ಇನ್ನೂ 1,317 ಕೋಟಿ ಹಣವನ್ನು ಸಿನಿಮಾ ತಂಡ ಬಾಕ್ಸ್ ಆಫೀಸ್ನಲ್ಲೇ ಗಳಿಸಬೇಕಾಗುತ್ತದೆ. ನಂತರ ಲಾಭದ ಬಗ್ಗೆ ಸಿನಿಮಾ ತಂಡ ಯೋಚನೆ ಮಾಡಬೇಕಾಗುತ್ತದೆ.
ಸವಾಲು ಎರಡು: ಇನ್ನು ಸಿನಿಮಾ ತಂಡಕ್ಕೆ ಇರುವ ಎರಡನೇ ಸವಾಲು ಏನೆಂದರೆ.. ಕೆಲವು ವರದಿಗಳ ಪ್ರಕಾರ, ಸಿತ್ರದ ಸ್ಯಾಟಲೈಟ್ ಮತ್ತು OTT ಹಕ್ಕುಗಳನ್ನ ಚಿತ್ರತಂಡವು ಸ್ಟಾರ್ ನೆಟ್ವರ್ಕ್ಗೆ ನೀಡಿದೆ. 450-550 ಕೋಟಿ ರೂಪಾಯಿಗೆ ಮಾರಾಟವಾಗಿದೆ ಎಂಬ ವರದಿ ಇದೆ. ಇನ್ನು ಚಿತ್ರತಂಡವು ಆಡಿಯೋ ಹಕ್ಕನ್ನು ಟಿ-ಸಿರೀಸ್ ಸಂಸ್ಥೆಗೆ ನೀಡಿದೆ. ಅದು 75-100 ಕೋಟಿಗೆ ಮಾರಾಟವಾಗಿದೆ ಎಂದು ಹೇಳಲಾಗಿದೆ. ಈ ಎಲ್ಲಾ ಮತ್ತೊವನ್ನೂ ಸೇರಿಸಿದರೂ ಸಿನಿಮಾ ತಂಡದ ಮೊದಲ ಭಾಗದ ಬಜೆಟ್ಗೆ ಸರಿದೂಗಿಸಲಿ ಇನ್ನೂ 600-7000 ಕೋಟಿ ರೂಪಾಯಿ ಕೊರತೆ ಇದೆ.
ಸವಾಲು ಮೂರು: ರಾಮಾಯಣ ಸಿನಿಮಾ ಗಳಿಕೆಗೆ ಇರುವ ಅವಕಾಶ ಇದೊಂದೇ ತಿಂಗಳು ಮಾತ್ರ. ನವೆಂಬರ್ 27 ವರೆಗೆ ಯಾವುದೇ ಬಿಗ್ ಬಜೆಟ್ ಸಿನಿಮಾಗಳು ತೆರೆಗೆ ಬರುತ್ತಿಲ್ಲ. ಹೀಗಾಗಿ ಕಲೆಕ್ಷನ್ ಮಾಡಲು ರಾಮಾಯಣಕ್ಕೆ ಮುಕ್ತ ಅವಕಾಶ ಸಿಕ್ಕಿದೆ. ಆದರೆ ನವೆಂಬರ್ 27 ರಂದು ಇಮ್ರಾನ್ ಹಶ್ಮಿಯ 'ಗನ್ ಮಾಸ್ಟರ್ ಜಿ9' ಸಿನಿಮಾ ತೆರೆಗೆ ಬರುತ್ತಿದೆ. ಅದರ ಜೊತೆಗೆ ಆಯುಷ್ಮಾನ್ ಖುರಾನಾರ 'ಯೇ ಪ್ರೇಮ್ ಮೋಲ್ ಲಿಯಾ' ಸಿನಿಮಾ ಬಿಡುಗಡೆ ಆಗಲಿದೆ. ನಂತರ ಈ ಎರಡು ಚಿತ್ರಗಳ ಜೊತೆ ರಾಮಾಯಣ ಸಿನಿಮಾ ಸ್ಪರ್ಧೆ ಮಾಡಬೇಕಾಗುತ್ತದೆ.
ಸವಾಲು ನಾಲ್ಕು: ಮೊದಲ ಭಾಗದ ಕಲೆಕ್ಷನ್ ನಿರೀಕ್ಷೆಯ ಮೊಟ್ಟದಲ್ಲಿ ದಾಟದಿದ್ದರೆ.. ಅದು ಎರಡನೇ ಭಾಗದ ಕಲೆಕ್ಷನ್ ಮೇಲೆ ಹೊಡೆತ ಬೀಳುವ ಸಾಧ್ಯತೆ. ಸಿನಿಮಾ ತಂಡವು ಈಗಾಗಲೇ ಮೊದಲ ಭಾಗದ ರಿಲೀಸ್ಗೆ ಸಾಕಷ್ಟು ಶ್ರಮ ಪಡುತ್ತಿದೆ. ತಾವು ಹಾಕಿದ ಎಫರ್ಟ್ಗೆ ತಕ್ಕಂತ ಗಳಿಕೆ ಆಗಲಿಲ್ಲ ಅಂದರೆ ಸಹಜವಾಗಿಯೇ ಎರಡನೇ ಭಾಗದ ಕೆಲಸಗಳ ಮೇಲೆ ಆಸಕ್ತಿ ಕಡಿಮೆ ಆಗುತ್ತದೆ. ಹಾಗಾಗಿ ಸಿನಿಮಾ ತಂಡವು 2028ರಲ್ಲಿ ರಿಲೀಸ್ ಆಗುವ ಸಿನಿಮಾ ಮೇಲೆ ಹೇಗೆ ಕೆಲಸ ಮಾಡಲಿದೆ ಅನ್ನೋದು ಕೂಡ ಮುಖ್ಯವಾಗುತ್ತದೆ.
ಕುಗ್ಗಿಲ್ಲ ಆತ್ಮವಿಶ್ವಾಸ:
ಭಾರೀ ಹೆಸರು ಮಾಡಿರುವ ರಾಮಾಯಣ ಸಿನಿಮಾವು ಆರ್ಥಿಕ ಸವಾಲುಗಳನ್ನ ಎದುರಿಸುತ್ತಿರೋದಂತೂ ನಿಜ. ಆದರೆ ಅದರ ನಿರ್ಮಾಪಕರಿಗೆ ಆತ್ಮವಿಶ್ವಾಸ ಇನ್ನೂ ಇದೆ. ಸಿನಿಮಾಗೆ ಹಾಕಿರುವ 4700 ಕೋಟಿ ರೂಪಾಯಿ ಹಣ ಅಷ್ಟೂ ನಂದೆ. ಒಂದು ವೇಳೆ ನಷ್ಟವಾದರೆ.. 'ರಾಮಾಯಣ ಥೀಮ್ ಪಾರ್ಕ್', ಮರ್ಷಂಡೈಸ್ ಮಾರಾಟದ ಮೂಲಕ ಹಣವನ್ನು ವಾಪಸ್ ಪಡೆಯೋದಾಗಿ ತಿಳಿಸಿದ್ದಾರೆ. ಮೊದಲ ಭಾಗದ ಗಳಿಕೆ ನೋಡಿಕೊಂಡೇ ಮೂರನೇ ಭಾಗದ ಬಗ್ಗೆ ನಾವು ಯೋಚನೆ ಮಾಡುತ್ತೇವೆ ಎಂದಿದ್ದಾರೆ.
ಹೋಲಿಕೆ
ಆದಿತ್ಯ ಧರ್ ಆಕ್ಷನ್ ಕಟ್ ಹೇಳಿರುವ 'ದುರಂಧರ್' ಸಿನಿಮಾಗೆ ಹೋಲಿಸಿದರೆ ರಾಮಾಯಣ ಸಿನಿಮಾದ ಹಾದಿ ದುರ್ಗಮ ಆಗಿದೆ. ಕೇವಲ 225 ಕೋಟಿ ರೂಪಾಯಿ ಬಜೆಟ್ನ ಧುರಂಧರ್ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆ ಆಗಿತ್ತು. ಅದು ವಿಶ್ವದಾದ್ಯಂತ ಬರೋಬ್ಬರಿ 3280 ಕೋಟಿ ಕಲೆಕ್ಷನ್ ಮಾಡಿದೆ. ಅಂದರೆ ಅದು ಬಜೆಟ್ಗಿಂತ 10 ಪಟ್ಟು ಹೆಚ್ಚು ಹಣ ಗಳಿಸಿದೆ.
ಕಲೆಕ್ಷನ್ ಹೇಗಿದೆ?
- ಮೊದಲ ದಿನ ದೇಶೀಯ ಬಾಕ್ಸ್ ಆಫೀಸ್ನಲ್ಲಿ 64.85 ಕೋಟಿ ರೂ
- ಎರಡು ದಿನಗಳಲ್ಲಿ 100 ಕೋಟಿ
- ವಾರಾಂತ್ಯಕ್ಕೆ 200 ಕೋಟಿ
- ರಿಲೀಸ್ ಆದ ಐದು ದಿನದಲ್ಲಿ ಒಟ್ಟು 300 ಕೋಟಿ ರೂ
- ರಿಲೀಸ್ ಆದ 8 ದಿನಕ್ಕೆ 1,033.55 (ವಿಶ್ವದಾದ್ಯಂತ)
- ಶೀಘ್ರದಲ್ಲೇ ಚೀನಾದಲ್ಲೂ ಸಿನಿಮಾ ಬಿಡುಗಡೆ ಆಗಲಿದ














