ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್‌ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಸೆಲೆಬ್ರಿಟಿಗಳ ತಂಡದಲ್ಲಿ ಸೇರಿಸಲ್ಪಡದ ಬಗ್ಗೆ ನಟಿ ಬಿಜೆಪಿ ಸಂಸದೆ ರೂಪಾ ಗಂಗುಲಿ ಪ್ರಶ್ನಿಸಿದ್ದಾರೆ.

2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸುಶಾಂತ್ ಸಿಂಗ್ ರಜಪೂತ್‌ನನ್ನು ಆಹ್ವಾನಿಸಲಾಗಿತ್ತು. ಆಗ ಆಹ್ವಾನಿತರ ಲಿಸ್ಟ್‌ನ್ನು ಪ್ರಧಾನಿ ಕಚೇರಿಯಿಂದಲೇ ತಯಾರಿಸಲಾಗಿತ್ತು.

ದೀಪವು ನಿನ್ನದೆ..ಗಾಳಿಯೂ ನಿನ್ನದೆ.. ಸುಶಾಂತ್ ಸಾವಿನ ನಂತರ ಅಂಕಿತಾ ಮೊದಲ ಪೋಸ್ಟ್

ಆದರೆ 2018ರ ಡಿಸೆಂಬರ್‌ನಿಂದ 2019ರ ನಡುವೆ ಪ್ರಧಾನಿಯವರನ್ನು ಹಲವು ಬಾರಿ ಸಿನಿ ತಾರೆಯರು ಭೇಟಿ ಮಾಡಿದ್ದು, ಆ ಸಂದರ್ಭಗಳಲ್ಲಿ ಸುಶಾಂತ್‌ನನ್ನು ಆಹ್ವಾನಿಸಿರಲಿಲ್ಲ.

ಪ್ರಧಾನಿ ಯಾವುತ್ತೂ ಬ್ರಿಲಿಯೆಂಟ್ ಜನರನ್ನು ಭೇಟಿಯಾಗುವುದರಲ್ಲಿ ಆಸಕ್ತರು. ಆದರೆ ಸುಶಾಂತ್‌ನನ್ನು ಬಿಟ್ಟು ಪ್ರಧಾನಿ ಭೇಟಿಗೆ ಲಿಸ್ಟ್ ತಯಾರಿಸಿದವರು ಯಾರು ಎಂಬುದು ಗೊತ್ತಿಲ್ಲ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಸುಶಾಂತ್ ಇದ್ದರು. ಆದರೆ 2018 ಡಿಸೆಂಬರ್ ಸಂದರ್ಭ ಪ್ರಧಾನಿಯವರನ್ನು ಭೇಟಿ ಮಾಡಿದ ಸಿನಿ ತಾರೆಗಳ ಮಧ್ಯೆ ಸುಶಾಂತ್ ಇರಲಿಲ್ಲ. ಈ ಸಭೆಗಳಲ್ಲಿ ಸುಶಾಂತ್ ಇದ್ದರೇ..? ಈ ಲಿಸ್ಟ್ ತಯಾರಿಸಿದವರು ಯಾರು..? ಎಂದು ಅಮಿತ್ ಶಾ ಅವರಿಗೆ ಟ್ಯಾಗ್ ಮಾಡಿದ್ದಾರೆ.

1 ತಿಂಗಳ ನಂತರ ಸುಶಾಂತ್‌ ಸಿಂಗ್‌ ಬಗ್ಗೆ ಮಾತನಾಡಿದ ಪ್ರೇಯಸಿ ರಿಯಾ!

ಪ್ರಮಾಣ ವಷನ ಸ್ವೀಕಾರ ಕಾರ್ಯಕ್ರಮದಲ್ಲಿ ಮೋದಿ ಇದ್ದರು. ಆ ಸಂದರ್ಭ ಸುಶಾಂತ್‌ ಸಿಂಗ್‌ನ್ನು ಆಹ್ವಾನಿಸಿದ್ದಕ್ಕೆ ಧನ್ಯವಾದಗಳು ಎಂದು ಅಮಿತ್‌ ಶಾ, ನರೇಂದ್ರ ಮೋದಿ ಅವರಿಗೂ ಟ್ಯಾಗ್ ಮಾಡಿದ್ದಾರೆ.