ಕೆಜಿಎಫ್ ಬಗ್ಗೆ ಫುಲ್ ಎಕ್ಸೈಟ್ ಆಗಿರುವ ಯಶ್ | ಕೆಜಿಎಫ್ ಬಿಡುಗಡೆಗೆ ದಿನಗಣನೆ | ಬಹುನಿರೀಕ್ಷಿತ ಚಿತ್ರ ತೆರೆಗೆ ಅಪ್ಪಳಿಸಲು ಸಿದ್ಧ  | ರಾಜಮೌಳಿಗೆ ಥ್ಯಾಂಕ್ಸ್ ಎಂದ ಯಶ್ 

ಬೆಂಗಳೂರು (ಡಿ. 18): ರಾಕಿಂಗ್ ಸ್ಡಾರ್ ಯಶ್ ಕನಸಿನ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಯಶ್ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಏಕಕಾಲದಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ರಿಲೀಸಾಗುತ್ತಿದೆ. ಇದೊಂದು ವಿಭಿನ್ನ ಕಾನ್ಸೆಪ್ಟ್ ಹೊಂದಿರುವ ಸಿನಿಮಾವಾಗಿದ್ದು ಜನ ಖಂಡಿತಾ ಇಷ್ಟಪಡುತ್ತಾರೆಂದು ಯಶ್ ಹೇಳಿದ್ದಾರೆ. 

ಕೆಜಿಎಫ್ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭ

ಯಶ್ ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಕೆಜಿಎಫ್ ಬಗ್ಗೆ ಮಾತನಾಡಿದ್ದಾರೆ. 

ಯಶ್ ತಂದೆಯನ್ನು ಸೂಪರ್‌ಸ್ಟಾರ್ ಎಂದ ಬಾಹುಬಲಿ ನಿರ್ದೇಶಕ

70-80 ರ ದಶಕದಲ್ಲಿ ಕೋಲಾರ ಚಿನ್ನದ ಗಣಿಯ ಸುತ್ತಮುತ್ತ ಈ ಕಥೆ ಹೆಣೆದುಕೊಂಡಿದೆ. ಮಾನವನ ಹಸಿವು ಹಾಗೂ ಚಿನ್ನದ ಸುತ್ತ ಕಥೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಗ್ಯಾಂಗ್‌ಸ್ಟರ್‌ವೊಬ್ಬ ಹೇಗೆ ನಾಯಕನಾಗಿ ಬೆಳೆಯುತ್ತಾನೆ ಎಂಬುದನ್ನು ಈ ಚಿತ್ರ ಹೇಳುತ್ತದೆ ಎಂದು ಯಶ್ ಹೇಳಿದ್ದಾರೆ. 

ಕಂಡಕ್ಟರ್ ಮಗ ಯಶ್ ಸಾಧನೆ ಕೊಂಡಾಡಿದ ರಾಜಮೌಳಿ

ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದು ಬೇರೆ ಬೇರೆ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಉತ್ತಮವಾದ ಕಥೆಯಿದ್ದರೆ ಪ್ರೇಕ್ಷಕರು ಖಂಡಿತಾ ಇಷ್ಟಪಟ್ಟೇಪಡುತ್ತಾರೆ. ಇದಕ್ಕೆ ಬಾಹುಬಲಿಯೇ ಸಾಕ್ಷಿ. ರಾಜಮೌಳಿ ಇದನ್ನು ಸಾಬೀತುಪಡಿಸಿದ್ದಾರೆ. ಇಡೀ ಚಿತ್ರರಂಗ ತೆಲುಗು ಸಿನಿಮಾದತ್ತ ಹಿಂತಿರುಗುವಂತೆ ಮಾಡಿದ್ದಾರೆ. ಹಾಗಾಗಿ ನಾವು ಸಬ್ ಟೈಟಲ್ ಜೊತೆ ಚಿತ್ರ ಬಿಡುಗಡೆ ಮಾಡಲಿದ್ದೇವೆ. ನಮ್ಮ ಕನಸನ್ನು ಇನ್ನಷ್ಟು ಹೆಚ್ಚಿಸಿದ್ದಕ್ಕಾಗಿ ರಾಜಮೌಳಿಯವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ ಯಶ್.