Asianet Suvarna News Asianet Suvarna News

ಯಶ್ ತಂದೆಯನ್ನು ಸೂಪರ್‌ಸ್ಟಾರ್ ಎಂದ ಬಾಹುಬಲಿ ನಿರ್ದೇಶಕ

ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್’ ಚಿತ್ರ ಇದೀಗ ಬಾಲಿವುಡ್‌ನಲ್ಲಿ ಭಾರಿ ಹೆಸರು ಮಾಡುತ್ತಿದೆ. ಅಷ್ಟೇ ಅಲ್ಲ, ತೆಲುಗು, ತಮಿಳು, ಮಲಯಾಳಂ ಎಲ್ಲಾ ಕಡೆ ಕೆಜಿಎಫ್ ಹವಾ. ಇಷ್ಟೆಲ್ಲಾ ಆಗಲು ಒಬ್ಬ ದೊಡ್ಡ ನಿರ್ದೇಶಕ ‘ಕೆಜಿಎಫ್’ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಅದು ರಾಜಮೌಳಿ.

 

Rajamouli supports Yash to make KGF in Hindi
Author
Bengaluru, First Published Dec 11, 2018, 9:03 AM IST

ಹೈದರಾಬಾದ್‌ನಲ್ಲಿ ನಡೆದ ಚಿತ್ರದ ಪ್ರೀ ರಿಲೀಸ್ ಈವೆಂಟ್ನಲ್ಲಿ ಈ ಸತ್ಯವನ್ನು ರಾಜಮೌಳಿ ಅವರೇ ಬಹಿರಂಗ ಪಡಿಸಿದ್ದಾರೆ. ಬೆಂಗಳೂರಿಗೆ ಬಂದಾಗ ಯಶ್ ನನಗೆ ಕೆಜಿಎಫ್ ವಿಶುವಲ್ಸ್ ತೋರಿಸಿದ್ದರು. ನಾನೇ ಬಾಲಿವುಡ್‌ನ ಅನಿಲ್ ತಡಾನಿಗೆ ಈ ಸಿನಿಮಾ ನೋಡಿ ಅಂತ ಹೇಳಿದ್ದೆ ಎಂದಿದ್ದಾರೆ. ಅಲ್ಲದೇ ಯಶ್ ಮತ್ತು ಅವರ ತಂದೆಯನ್ನು ಭಾರಿ ಹೊಗಳಿದ್ದಾರೆ. ರಾಜಮೌಳಿ ಹೃದಯ ವೈಶಾಲ್ಯತೆಯನ್ನು ಯಶ್ ಕೊಂಡಿದ್ದಾರೆ.

ರಾಜಮೌಳಿ ಹೇಳಿದ ಮಾತುಗಳು

* ಯಶ್ ಒಬ್ಬರು ಡ್ರೈವರ್ ಮಗ ಎಂದು ಕೇಳಿ ತಿಳಿದಿದ್ದೇನೆ. ಅಂಥಾ ಹಿನ್ನೆಲೆ ಇರುವ ಯಶ್ ಈಗ ಸೂಪರ್‌ಸ್ಟಾರ್. ಈಗಲೂ ಅವರ ತಂದೆ ಡ್ರೈವರ್ ಕೆಲಸ ಮಾಡುತ್ತಿದ್ದಾರೆ ಅಂತ ಯಾರೋ ಹೇಳಿದರು. ಅವರಿಗೆ ಯಶ್ ಕೆಲಸ ಮಾಡಿದ್ದು ಸಾಕು ಎಂದು ಹೇಳಿದಾಗ ನಿನ್ನ ಕೆಲಸ ನೀನು ಮಾಡು, ನನ್ನ ಕೆಲಸ ನಾನು ಮಾಡುತ್ತೇನೆ ಎಂದು ಹೇಳಿದ್ದಾರಂತೆ. ಅವರು ನಿಜವಾದ ಸೂಪರ್‌ಸ್ಟಾರ್.

* ನಾಲ್ಕೈದು ತಿಂಗಳುಗಳ ಹಿಂದಿನ ಮಾತು. ನಾನು ಆರ್‌ಆರ್ ಆರ್ ಚಿತ್ರದ ಕತೆಯ ಚರ್ಚೆಗಾಗಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದೆ. ಅದೇ ಹೋಟೆಲ್‌ನಲ್ಲಿ ಯಶ್ ಕೂಡ ಇದ್ದರು. ಅವರು ನನ್ನ ಬಳಿ ಬಂದು ‘ಕೆಜಿಎಫ್’ ಚಿತ್ರದ ಐದು ನಿಮಿಷದ ವಿಷ್ಯುವಲ್ಸ್ ತೋರಿಸಿದರು. ನಾನು ದೃಶ್ಯಗಳನ್ನು ನೋಡಿ ಅಚ್ಚರಿಗೊಂಡೆ. ಯಾವುದೇ ಚಿತ್ರದಿಂದ ನಕಲು ಮಾಡಿಲ್ಲ. ಫ್ರೆಶ್ ವಿಶ್ಯುವೆಲ್ಸ್. ನೇಟಿವಿಟಿಗೆ ಹತ್ತಿರವಾದ ಸಿನಿಮಾ ಅನಿಸಿತು. ಇದು ಚಿತ್ರತಂಡದ ಮೂರು ವರ್ಷಗಳ ಶ್ರಮ ಎಂದು ತಿಳಿದೆ.

* ಆಗಲೇ ನನಗೆ ಇದು ಕನ್ನಡ ಸಿನಿಮಾ ಅಲ್ಲ, ಪ್ಯಾನ್ ಇಂಡಿಯಾ ಸಿನಿಮಾ ಅನಿಸಿತು. ಕೂಡಲೇ ಬಾಲಿವುಡ್‌ನ ಅನಿಲ್ ತದಾನಿಗೆ ಫೋನ್ ಮಾಡಿ ‘ಕೆಜಿಎಫ್’ ಕುರಿತು ಹೇಳಿದೆ. ಹಾಗೆ ಯಶ್ ಹಿಂದಿಗೆ ಹೋದರು. ಜತೆಗೆ ತೆಲುಗಿನ ನಿರ್ಮಾಪಕರಾದ ಶೋಭು ಯಾರ್ಲಗಡ್ಡ ಹಾಗೂ ಸಾಯಿ ಅವರಿಗೂ ಕೆಜಿಎಫ್ ಕುರಿತು ಹೇಳಿದೆ. ಹೀಗೆ ಕನ್ನಡ ಸಿನಿಮಾ ತೆಲುಗಿಗೂ ಬಂತು. 

 

Follow Us:
Download App:
  • android
  • ios