ನಾಡಿನೆಲ್ಲೆಡೆ ಗೌರಿ- ಗಣೇಶ ಹಬ್ಬದ ಸಂಭ್ರಮ. ಎಲ್ಲರ ಮನೆ ಮನಗಳಲ್ಲೂ ವಿಘ್ನ ನಿವಾರಕ ಇದ್ದಾನೆ. ಸಡಗರ- ಸಂಭ್ರಮ ಮನೆ ಮಾಡಿದೆ. 

ರಾಕಿಂಗ್ ಸ್ಟಾರ್ ಯಶ್ ದಂಪತಿ ಪುಟ್ಟ ಗೌರಿ ಜೊತೆ ಗಣೇಶ ಹಬ್ಬವನ್ನು ಆಚರಿಸಿದ್ದಾರೆ. ಹಬ್ಬದ ಸಂಭ್ರಮದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅಭಿಮಾನಿಗಳಿಗೆ ವಿಶ್ ಮಾಡಿದ್ದಾರೆ. 

ಪ್ರತಿ ಹಬ್ಬಕ್ಕೂ ವಿಭಿನ್ನವಾಗಿ, ವಿಶೇಷವಾಗಿ ಮಗಳಿಂದ ವಿಶ್ ಮಾಡಿಸುವ ಮೂಲಕ ಗಮನ ಸೆಳೆಯುತ್ತಾರೆ ಯಶ್- ರಾಧಿಕಾ. 

 

ನಮ್ಮಪ್ಪ ತಿನ್ನೋ ಮುಂಚೆ ಮೋದಕ ಎಲ್ಲಾ ನಾನೇ ತಿಂದ್ ಬಿಡೋಣ ಅಂತ ಯೋಚ್ನೆ ಮಾಡ್ತಾ ಇದ್ದೀನಿ .. 

ನಿಮ್ಮ ಈ ಪುಟ್ಟ ಗೌರಿಯಿಂದ ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯಗಳು ಎಂದು ಮಗಳ ಕೈಯಿಂದ ವಿಶ್ ಮಾಡಿಸಿದ್ದಾರೆ.