ಬೆಂಗಳೂರು (ನ. 06): ಇದೇ 09 ರಂದು ಬಹುನಿರೀಕ್ಷಿತ ಕೆಜಿಎಫ್ ಸಿನಿಮಾ ರಿಲೀಸಾಗಲಿದ್ದು, ಚಿತ್ರದ ಯಶಸ್ಸಿಗಾಗಿ ರಾಕಿಂಗ್ ಸ್ಟಾರ್ ಯಶ್ , ನಿರ್ಮಾಪಕ ವಿಜಯ್ ಕಿರ್ಗಂದೂರು ಹಾಗೂ ಸ್ನೇಹಿತರು ಶಿರಡಿಗೆ ಭೇಟಿ ನೀಡಿದ್ದಾರೆ. 

ಯಾರಿಗೂ ಕಡಿಮೆ ಇಲ್ಲ ಅಂತ ತೋರಿಸಿಕೊಡಲಿದೆ ಕೆಜಿಎಫ್: ರಾಧಿಕಾ ಪಂಡಿತ್

ಶಿರಡಿಗೆ ಭೇಟಿ ನೀಡುವುದು ಯಶ್ ಬಹುಕಾಲದ ಆಸೆಯಾಗಿದೆ. ಅದು ಈಡೇರಿದೆ. ಜೊತೆ ಅಲ್ಲಿಯೇ ಸಮೀಪದಲ್ಲಿದ್ದ ಮಹಾಲಕ್ಷ್ಮೀ ದೇವಸ್ಥಾನಕ್ಕೂ ಭೇಟಿ ನೀಡಿ ದರ್ಶನ ಪಡೆದಿದ್ದಾರೆ.

ಯಶ್-ರಾಧಿಕಾ ಮನೆಯಲ್ಲಿ ದೀಪಾವಳಿ ಆಚರಣೆ ಹೇಗಿದೆ ಗೊತ್ತಾ?

ನವೆಂಬರ್ 09 ರಂದು ಕೆಜಿಎಫ್ ಬಿಡುಗಡೆಯಾಗಲಿದ್ದು 5 ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಯಶ್ ಡಿಫರೆಂಟಾಗಿ ಕಾಣಿಸಿಕೊಂಡಿದ್ದಾರೆ.