• ನಾನು ಕೂಡ ಎಲ್ಲರಂತೆಯೇ ಟ್ರೈಲರ್‌ಗಾಗಿ ಎದುರು ನೋಡುತ್ತಿದ್ದೇನೆ. ನ.೯ರಂದುದೊಡ್ಡ ಮಟ್ಟದಲ್ಲಿ ಪ್ಲಾನ್ ಮಾಡಿಕೊಂಡು ಬಿಡುಗಡೆ ಮಾಡುತ್ತಿದ್ದಾರೆ. ತುಂಬಾ ಎಕ್ಸೈಟ್ ಆಗಿದ್ದೇನೆ.
  • ನನಗೆ ಚಿತ್ರದ ಕತೆ ಗೊತ್ತಿದೆ. ತುಂಬಾ ಚೆನ್ನಾಗಿದೆ. ಬೇರೆ ರೀತಿಯ ಕತೆ ಎಂಬುದರಲ್ಲಿ ಎರಡು ಮಾತು ಇಲ್ಲ. ತಾಂತ್ರಿಕತೆ, ದೊಡ್ಡ ಬಜೆಟ್ ಎನ್ನುವ ಕಾರಣಕ್ಕೆ ಬೇರೆ ಭಾಷೆಗೆ ತೆಗೆದುಕೊಂಡು ಹೋಗುತ್ತಿಲ್ಲ. ಕತೆ ಮುಖ್ಯ ಪಾತ್ರ ವಹಿಸುತ್ತಿದೆ. ಈ ಸಿನಿಮಾ ಬಂದ ಮೇಲೆ ಸೌತ್ ಇಂಡಿಯಾದ ಚಿತ್ರರಂಗದಲ್ಲಿ ಕನ್ನಡ ಸಿನಿಮಾ ಇಂಥದ್ದೊಂದು ಕತೆ ಸಿನಿಮಾ ಮಾಡಲು ಸಾಧ್ಯವಾಯಿತೇ ಎಂದು ಅಚ್ಚರಿ ವ್ಯಕ್ತಪಡಿಸುತ್ತಾರೆ ಎಂಬುದರಲ್ಲಿ ಅನುಮಾನವಿಲ್ಲ.
  • ಬಾಹುಬಲಿ ಮೂಲಕ ತೆಲುಗು, ರೋಬೋ ಹಾಗೂ ೨.೦ ಮೂಲಕ ತಮಿಳು ಸಿನಿಮಾ ಮಂದಿ ಹೇಗೆ ತಾವು ಯಾರಿಗೂ ಕಡಿಮೆ ಇಲ್ಲ ಎಂದು ತೋರಿಸಿಕೊಂಡರೋ ಅದೇ ರೀತಿ ನಾವು ‘ಕೆಜಿಎಫ್’ ಚಿತ್ರದ ಮೂಲಕ ಕನ್ನಡಿಗರೂ ಕೂಡ ಯಾವುದರಲ್ಲೂ ಕಮ್ಮಿ ಇಲ್ಲ ಅಂತ ತೋರಿಸುವ ಪ್ರಯತ್ನ ಇದು. ನನ್ನ ಮನೆಯವರು ನಾಯಕನಾಗಿ ನಟಿಸಿರುವ ಸಿನಿಮಾ ಎನ್ನುವ ಕಾರಣಕ್ಕೆ ಈ ಮಾತು ಹೇಳುತ್ತಿಲ್ಲ. ಕನ್ನಡ ಚಿತ್ರರಂಗದ ಒಬ್ಬ ನಟಿಯಾಗಿಯೂ ನಾನು ‘ಕೆಜಿಎಫ್ ’ನಂತಹ ದೊಡ್ಡ ಸಿನಿಮಾ ಗೆಲ್ಲಬೇಕು ಎನ್ನುತ್ತೇನೆ.
  • ‘ಕೆಜಿಎಫ್’ ಚಿತ್ರದಲ್ಲಿ ನೀವು ರಾಕಿಂಗ್ ಸ್ಟಾರ್ ಯಶ್ ಅವರನ್ನು ನೋಡಲ್ಲ. ಆ ಕತೆಯ ಒಂದು ಕ್ಯಾರೆಕ್ಟರ್ ಆಗಿ ನೋಡುತ್ತೀರಿ. ಅಷ್ಟರ ಮಟ್ಟಿಗೆ ಅವರು ಕೆಲಸ ಮಾಡಿದ್ದಾರೆ. ನಾನೂ ಆರಂಭದಲ್ಲಿ ಯಶ್ ಗಡ್ಡ ಬಿಟ್ಟಿರುವುದಕ್ಕೆ ಕಾಮೆಂಟ್ ಮಾಡಿದ್ದೆ. ಅದು ನಾನು ತಮಾಷೆಯಾಗಿ ಕಾಲೆಳೆದಿದ್ದು ಮಾತ್ರ. ಆದರೆ, ಯಾವಾಗ ನಾನು ಚಿತ್ರದ ಫಸ್ಟ್ ಲುಕ್ ನೋಡಿದ್ನೋ ಆಗಲೇ ಅಚ್ಚರಿ ಆಯಿತು. ತುಂಬಾ ಪವರ್‌ಫುಲ್ಲಾಗಿ ಕಾಣುತ್ತಿದ್ದಾರೆ. ಆಗ ನನಗೆ ಈ ಪಾತ್ರ ಗಡ್ಡ ಅವಶ್ಯಕತೆ ಇದೆ ಅನಿಸಿತು. 
  • ಇಂಡಿಯನ್ ಸಿನಿಮಾದಲ್ಲಿ ‘ಕೆಜಿಎಫ್’ ಸದ್ದು ಮಾಡುತ್ತಿದೆ, ಬೇರೆ ಬೇರೆ ಭಾಷೆಯವರನ್ನು ಗಮನ ಸೆಳೆಯುತ್ತಿದೆ ಎಂದರೆ ಮುಂದೆ ಬರುವ ಕನ್ನಡ ಚಿತ್ರಗಳಿಗೂ ಇದೊಂದು ಹೆಬ್ಬಾಗಿಲು ಎಂಬುದು ನನ್ನ ಅಭಿಪ್ರಾಯ. ಒಂದು ‘ಕೆಜಿಎಫ್’ ಸಿನಿಮಾ ಗೆದ್ದರೆ ಕನ್ನಡದ್ದೇ ಬೇರೆ ಚಿತ್ರಗಳು ಹೊರಗಿನವರಿಗೆ ಮಹತ್ವದ್ದಾಗಿ ಕಾಣುತ್ತವೆ.
  • ಚಿತ್ರದಲ್ಲಿ ನಟಿಸಿರುವ ಬಹುತೇಕರು ಹೊಸಬರು. ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಅವರಿಗೆ ಇದು ಮೊದಲ ಸಿನಿಮಾ. ಎಲ್ಲರು ತುಂಬಾ ವರ್ಕ್ ಮಾಡುತ್ತಿದ್ದಾರೆ. ಈ ಚಿತ್ರದಿಂದ ಎಲ್ಲರಿಗೂ ಒಳ್ಳೆಯದಾಗಬೇಕು ಎಂಬುದು ನನ್ನ ಹಾರೈಕೆ.
  • ಡಿಸೆಂಬರ್ ಮೊದಲ ವಾರದಲ್ಲಿ ನಾನು ತಾಯಿ ಆಗುತ್ತಿದ್ದೇನೆ. ಈ ಸಂಭ್ರಮದಲ್ಲೇ ನಮ್ಮ ಕನ್ನಡ ಚಿತ್ರರಂಗದ ಬಹು ನಿರೀಕ್ಷೆಯ ‘ಕೆಜಿಎಫ್’ ಸಿನಿಮಾ ತೆರೆಗೆ ಬರುತ್ತಿದೆ. ಹೀಗಾಗಿ ನನಗ  ಡಿಸೆಂಬರ್ ಡಬಲ್ ಖುಷಿ ತಂದುಕೊಡುತ್ತಿದೆ ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್’ ಚಿತ್ರದ ಟ್ರೈಲರ್ ನವೆಂಬರ್ ೯ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಐದು ಚಿತ್ರರಂಗದ ಪ್ರಮುಖರು ಆ ಕ್ಷಣಗಳಿಗೆ ಸಾಕ್ಷಿಯಾಗಲಿದ್ದಾರೆ. ಈ ಅಪರೂಪದ ಸಂದರ್ಭದಲ್ಲಿ ಯಶ್ ಪತ್ನಿ ರಾಧಿಕಾ ಪಂಡಿತ್ ಕೆಜಿಎಫ್ ಚಿತ್ರದ ಕುರಿತು ಮಾತನಾಡಿದ್ದಾರೆ.