ಗುಲ್ಷನ್‌ ದೇವಯ್ಯ ಮೂಲತಃ ಕನ್ನಡದವರೇ. ಬೆಂಗಳೂರಿನವರು. ಬಾಲಿವುಡ್‌ನಲ್ಲಿ ತನ್ನ ನಟನೆಯಿಂದಲೇ ಗುರುತಿಸಿಕೊಂಡವರು. ಇವರ ‘ದಿ ಗಲ್‌ರ್‍ ಇನ್‌ ಯೆಲ್ಲೋ ಬೂಟ್ಸ್‌’, ‘ಹಂಟರ್‌’ ಇತ್ಯಾದಿ ಚಿತ್ರಗಳು ಭಾರಿ ಜನಪ್ರಿಯವಾಗಿದೆ. ಇಂಥಾ ನಟನನ್ನು ಮತ್ತೆ ಕನ್ನಡದ ಚಿತ್ರದಲ್ಲಿ ನಟಿಸುವಂತೆ ಮಾಡಲು ರಿಷಬ್‌ ಶೆಟ್ಟಿಯಶಸ್ವಿಯಾಗಿದ್ದಾರೆ.

ರಿಷಬ್ ಶೆಟ್ಟಿಗೆ ಕಿಚಾಯಿಸಿ ಹರಿಪ್ರಿಯಾ ಟ್ವೀಟ್!

ರಿಷಬ್‌ ಶೆಟ್ಟಿನಿರ್ಮಾಣದ ‘ಕಥಾ ಸಂಗಮ’ ಚಿತ್ರದ ಒಂದು ಕತೆಯನ್ನು ನಿರ್ದೇಶಿಸಿದವರು ಕರಣ್‌ ಅನಂತ್‌. ಇವರು ಸ್ವತಂತ್ರವಾಗಿ ನಿರ್ದೇಶಿಸುವ ಚಿತ್ರಕ್ಕೆ ಗುಲ್ಷನ್‌ ದೇವಯ್ಯರನ್ನು ಕರೆತರುವ ಕನಸು ಚಿತ್ರತಂಡದ್ದಾಗಿತ್ತು. ಈ ಕುರಿತು ಮಾತನಾಡಲು ಗುಲ್ಷನ್‌ ದೇವಯ್ಯರನ್ನು ಸಂಪರ್ಕಿಸಿದರೆ ಅವರು ವೈಯಕ್ತಿಕ ಕಾರಣಕ್ಕೆ ಬೆಂಗಳೂರಿನಲ್ಲೇ ಇದ್ದರು. ರಿಷಬ್‌ ಶೆಟ್ಟಿ, ಕರಣ್‌ ಅನಂತ್‌, ಪಿಡಿ ಸತೀಶ್‌ಚಂದ್ರ ಟೀಮು ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಗುಲ್ಷನ್‌ ದೇವಯ್ಯರನ್ನು ಭೇಟಿ ಮಾಡಿ ಹೊಸ ಸಿನಿಮಾದ ಐಡಿಯಾ ಹೇಳಿದೆ. ಗುಲ್ಷನ್‌ ದೇವಯ್ಯ ಐಡಿಯಾ ಕೇಳಿ ಖುಷಿಯಾಗಿದ್ದಾರೆ. ಅಲ್ಲಿಗೆ ಮಾತುಕತೆ ಯಶಸ್ವಿಯಾಗಿದೆ. ಚಿತ್ರಕತೆ ಇನ್ನಷ್ಟೇ ಪೂರ್ತಿಯಾಗಬೇಕಾದುದರಿಂದ ಎಲ್ಲವೂ ಅಂದುಕೊಂಡಂತೆ ನಡೆದರೆ ಡಿಸೆಂಬರ್‌ ಹೊತ್ತಿನಲ್ಲಿ ಸಿನಿಮಾ ಶುರುವಾಗಲಿದೆ ಎನ್ನುತ್ತಾರೆ ರಿಷಬ್‌ ಶೆಟ್ಟಿ.

ಕರ್ನಾಟಕದವನಾಗಿದ್ದರೂ ನಾನು ಇದುವರೆಗೆ ಕನ್ನಡ ಸಿನಿಮಾಗಳಲ್ಲಿ ನಟಿಸಿಲ್ಲ. ಯಾಕೆಂದರೆ ಬಾಲ್ಯದಿಂದಲೂ ನಾನು ಬಾಲಿವುಡ್‌ ಕನಸು ಕಂಡವನು. ಬಾಲಿವುಡ್‌ನಲ್ಲಿ ನಾನು ಹ್ಯಾಪಿಯಾಗಿದ್ದೇನೆ. ಈಗ ರಿಷಬ್‌ ಮತ್ತು ಕರಣ್‌ ಬಂದು ಐಡಿಯಾ ಹೇಳಿದ್ದಾರೆ. ಅದನ್ನು ಕೇಳಿ ನನಗೆ ಖುಷಿಯಾಗಿದೆ. ನನಗೆ ಅವರ ಹೊಸ ಸಿನಿಮಾದಲ್ಲಿ ನಟಿಸಲು ಒಪ್ಪಿಗೆ ಇದೆ.- ಗುಲ್ಷನ್‌ ದೇವಯ್ಯ

ಇಂಟರೆಸ್ಟಿಂಗ್‌ ಅಂದ್ರೆ ರಿಷಬ್‌ ಶೆಟ್ಟಿತಂಡದ ಕುರಿತು ಈಗಾಗಲೇ ಬಾಲಿವುಡ್‌ಗೆ ಸುದ್ದಿ ತಲುಪಿದೆ. ರಿಷಬ್‌ ಭೇಟಿಯಾದ ತಕ್ಷಣ ಗುಲ್ಷನ್‌ ನನಗೆ ನಿಮ್ಮ ಬಗ್ಗೆ ಗೊತ್ತು ಎಂದಿದ್ದಾರೆ. ಈ ಕುರಿತು ಗುಲ್ಷನ್‌ ದೇವಯ್ಯ, ‘ಕನ್ನಡ ಚಿತ್ರರಂಗ ಬದಲಾವಣೆಯ ಪರ್ವದಲ್ಲಿದೆ. ಹೊಸತನದ ಸಿನಿಮಾಗಳು ಬರುತ್ತಿವೆ. ಹೊಸ ಅಲೆಯ ನಿರ್ದೇಶಕರಲ್ಲಿ ರಿಷಬ್‌ ಶೆಟ್ಟಿಕೂಡ ಒಬ್ಬರು. ಬೆಂಗಳೂರಿಗೆ ಬಂದಿದ್ದಾಗೆ ದೋಸೆ ಭೇಟಿಯಲ್ಲಿ ಮಾತುಕತೆ ನಡೆಯಿತು. ರಿಷಬ್‌ ಹೇಳಿದ ಐಡಿಯಾ ನನಗೆ ಭಾರಿ ಇಷ್ಟವಾಯಿತು’ ಎಂದಿದ್ದಾರೆ.

ಗುಲ್ಷನ್‌ ದೇವಯ್ಯ ಪ್ರತಿಭಾವಂತ ಕಲಾವಿದ. ನಮ್ಮ ಒಂದು ಪಾತ್ರಕ್ಕೆ ಅವರೇ ಸೂಕ್ತ ಅನ್ನಿಸಿದ ಕಾರಣಕ್ಕೆ ಅವರನ್ನು ಭೇಟಿಯಾಗಿ ಐಡಿಯಾ ಹೇಳಿದ್ದೇವೆ. ಅವರು ಒಪ್ಪಿಕೊಂಡಿದ್ದಾರೆ. ನನ್ನ ಮತ್ತು ಅವರ ಕಾಂಬಿನೇಷನ್‌ನ ಸಿನಿಮಾ ಬರಲಿದೆ.- ರಿಷಬ್‌ ಶೆಟ್ಟಿ