ಬೆಂಗಳೂರು (ಏ. 08): ಖ್ಯಾತ ನಿರ್ದೇಶಕ ರಿಷಬ್ ಶೆಟ್ಟಿ  ತಂದೆಯಾದ ಸಂಭ್ರಮದಲ್ಲಿದ್ದಾರೆ. ಪತ್ನಿ ಪ್ರಗತಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ದಂಪತಿಗಳಿಗೆ ಚಿತ್ರರಂಗದ ಅನೇಕರು ಶುಭಾಶಯ ತಿಳಿಸಿದ್ದಾರೆ.  ಬೆಲ್ ಬಾಟಂ ಚಿತ್ರದಲ್ಲಿ ರಿಷಬ್ ಜೊತೆ ನಟಿಸಿದ್ದ ಹರಿಪ್ರಿಯಾ ಸ್ವಲ್ಪ ಡಿಫರೆಂಟಾಗಿ ವಿಶ್ ಮಾಡಿದ್ದಾರೆ. 

ಕಿಚ್ಚ ಪತ್ನಿ ಪ್ರಿಯಾ ಕೊಟ್ಟ ಯುಗಾದಿ ಉಡುಗೊರೆ ಇದು!

"ರಿಷಬ್-ಪ್ರಗತಿಗೆ ಅಭಿನಂದನೆಗಳು. ಮನೆಗೆ ಹೀರೋ ಆಗಮಿಸಿದ್ದಾನೆ. ಇನ್ನಾದರೂ ಕ್ಯಾಂಡಿ, ಚಾಕಲೇಟ್ ಕದಿಯುವುದನ್ನು ನಿಲ್ಲಿಸಿ. ಇಲ್ಲದಿದ್ದರೆ ಅವನಿಗೆ ವಿಲನ್ ಆಗ್ತೀಯಾ" ಎಂದು ಕಿಚಾಯಿಸಿದ್ದಾರೆ.  

ರಿಷಬ್ ಹಾಗೂ ಹರಿಪ್ರಿಯಾ ರಿಕ್ಕಿ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ನಂತರ ಬೆಲ್ ಬಾಟಂನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಇಬ್ಬರು ಆತ್ಮೀಯ ಸ್ನೇಹಿತರು. 

ರಕ್ಷಿತ್ ಶೆಟ್ಟಿ ಲೀಕ್ ಮಾಡಿದ್ರು ರಿಷಬ್ ಶೆಟ್ಟಿ ಹೀರೋ ಫೋಟೋ!

ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಆತ್ಮೀಯ ಸ್ನೇಹಿತರು. ಇಬ್ಬರೂ ಒಟ್ಟಿಗೆ ಸಿನಿಮಾಗಳನ್ನು ಮಾಡಿದವರು. ರಿಷಬ್ ಮಗುವಿನ ಫೋಟೋವನ್ನು ರಕ್ಷಿತ್ ಲೀಕ್ ಮಾಡಿದ್ದಾರೆ.