ಅಭಿಮಾನಿಗಳ ಜತೆ ರಿಷಬ್ ಶೆಟ್ಟಿ ಹುಟ್ಟುಹಬ್ಬ: ಹೊಸಕೆರೆಹಳ್ಳಿಯ ನಂದಿ ಮೈದಾನದಲ್ಲಿ ಬೃಹತ್ ಕಾರ‍್ಯಕ್ರಮ
ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಿಷಬ್ ಶೆಟ್ಟಿಅವರು ಅಭಿಮಾನಿಗಳ ಜತೆಗೆ ಶುಕ್ರವಾರ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು. ಬೆಂಗಳೂರಿನ ಹೊಸಕೆರೆಹಳ್ಳಿ ಬಳಿ ಇರುವ ನಂದಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಅಭಿಮಾನಿಗಳು ಸೇರಿದ್ದರು.
ಬೆಂಗಳೂರು (ಜು.08): ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಿಷಬ್ ಶೆಟ್ಟಿ ಅವರು ಅಭಿಮಾನಿಗಳ ಜತೆಗೆ ಶುಕ್ರವಾರ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು. ಬೆಂಗಳೂರಿನ ಹೊಸಕೆರೆಹಳ್ಳಿ ಬಳಿ ಇರುವ ನಂದಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಅಭಿಮಾನಿಗಳು ಸೇರಿದ್ದರು. ಡೊಳ್ಳು ಕುಣಿತ, ನೃತ್ಯ ಕಾರ್ಯಕ್ರಮ ಸೇರಿದಂತೆ ಹಲವು ಮನರಂಜನೆ ಕಾರ್ಯಕ್ರಮಗಳ ಜತೆಗೆ ಅಭಿಮಾನಿಗಳು ತಂದಿದ್ದ ಕೇಕ್ ಕತ್ತರಿಸಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡ ‘ಕಾಂತಾರ’ ಚಿತ್ರದ ನಂತರ ರಿಷಬ್ ಶೆಟ್ಟಿ ಅವರನ್ನು ಅಭಿಮಾನಿಸುವವರ ಸಂಖ್ಯೆ ದೊಡ್ಡದಾಗಿದೆ. ಹೀಗಾಗಿ ಅಭಿಮಾನಿಗಳನ್ನು ಭೇಟಿ ಮಾಡುವುದಕ್ಕಾಗಿಯೇ ತಮ್ಮ ಹುಟ್ಟುಹಬ್ಬವನ್ನು ಹೀಗೆ ಮೈದಾನದಲ್ಲಿ ಸಾರ್ವಜನಿಕವಾಗಿ ಆಚರಿಸಿಕೊಂಡಿದ್ದಾರೆ. ಕಾರ್ಯಕ್ರಮಕ್ಕೆ ದಾವಣಗೆರೆ, ಹುಬ್ಬಳ್ಳಿ, ಮಂಗಳೂರು ಹಾಗೂ ಆಂಧ್ರಪ್ರದೇಶ ವೈಜಾಕ್‌ನಿಂದ ಅಭಿಮಾನಿಗಳು ಆಗಮಿಸಿದ್ದರು.
ಜೋಯಿಡಾದಲ್ಲಿ ಕೊಂಕಣಿ ಕಲಿತ ರಿಷಬ್ ಶೆಟ್ಟಿ: ಕುಣಬಿ ಜನರ ಜತೆ ಭಾಷಾಭ್ಯಾಸ
ಈ ಸಂದರ್ಭದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ರಿಷಬ್ ಶೆಟ್ಟಿ, ‘ಇಷ್ಟು ವರ್ಷಗಳ ನನ್ನ ನಿಜವಾದ ಸಂಪಾದನೆ ಎಂದರೆ ಅದು ಅಭಿಮಾನಿಗಳ ಪ್ರೀತಿ. ಮಳೆ ನಡುವೆಯೂ ನೀವು ನನ್ನ ಹುಟ್ಟುಹಬ್ಬಕ್ಕೆ ಬಂದಿದ್ದೀರಿ ಎಂದರೆ ಇದಕ್ಕಿಂತ ದೊಡ್ಡ ಪ್ರೀತಿ ಮತ್ತು ಅಭಿಮಾನ ಇನ್ನೇನಿದೆ. ನನ್ನಂಥ ಒಬ್ಬ ಮಧ್ಯಮ ವರ್ಗದ ಹುಡುಗ, ಚಿತ್ರರಂಗಕ್ಕೆ ಬಂದು ಸಿನಿಮಾ ಮಾಡುವ ಕನಸು ಕಾಣಬಹುದು. ಆ ಕನಸು ನನಸು ಕೂಡ ಮಾಡಿಕೊಳ್ಳಬಹುದು ಎಂಬುದನ್ನು ಸಾಬೀತು ಮಾಡಿದ್ದೇ ನೀವು ಎಂದು ಹೇಳಿದರು.
ಪ್ರಕೃತಿ ನಡುವಿನ ಸಂಘರ್ಷದಲ್ಲಿ ನಾವು ಸೋತರೆ ಬದುಕುತ್ತೇವೆ: ರಿಷಬ್ ಶೆಟ್ಟಿ
‘ನನ್ನ ಸಿನಿಮಾ ಪ್ಯಾನ್ ಇಂಡಿಯಾ ಆಗಲು ಜನರ ಪ್ರೀತಿ ಕಾರಣವಾಯಿತು. ನಿಮ್ಮಿಂದಲೇ ನಾನು ಬೇರೆ ಭಾಷೆಗಳಿಗೆ ಹೋಗುವಂತಾಯಿತು. ನಿಮ್ಮಿಂದಲೇ ನಾನು ಕನ್ನಡದ ಆಚೆಗೂ ಗುರುತಿಸಿಕೊಂಡೆ. ಕನ್ನಡ ಹಾಗೂ ಕನ್ನಡ ಸಿನಿಮಾಗಳ ಮೇಲಿನ ಜನರ ಪ್ರೀತಿ- ಅಭಿಮಾನ ನೋಡಿಯೇ ಡಾ ರಾಜ್‌ಕುಮಾರ್ ಅವರು ‘ಅಭಿಮಾನಿಗಳೇ ದೇವರು’ ಎಂದಿದ್ದು. ಆ ಮಾತು ನಿಜ. ನಿಮ್ಮ ಈ ಋುಣವನ್ನು ನಾನು ಜೀವನ ಪರ್ಯಾಂತ ತೀರಿಸುತ್ತೇವೆ. ಜೀವನ ಪರ್ಯಾಂತ ನಿಮ್ಮ ಪ್ರೀತಿಯನ್ನು ಹೊತ್ತು ಸಾಗುತ್ತೇನೆ’ ಎಂದು ತಿಳಿಸಿದರು. ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಹಾಗೂ ನಟ ಪ್ರಮೋದ್ ಶೆಟ್ಟಿ ಹಾಜರಿದ್ದರು.