'ಹೆವನ್ ಕರ್ನಾಟಕ': ತೀರ್ಥಹಳ್ಳಿ ಕಂಡು ರೀಚಾ ಉದ್ಘಾರ!

First Published 27, Jul 2018, 4:29 PM IST
Richa Chadha to play adult star Shakeela in biopic, shares first look
Highlights

ಶಕೀಲಾ ಜೀವನಾಧಾರಿತ ಚಿತ್ರದಲ್ಲಿ ರೀಚಾ ಛಡ್ಡಾ

ಶಕೀಲಾ ಪಾತ್ರ ಮಾಡಲಿರುವ ನಟಿ ರೀಚಾ ಛಡ್ಡಾ

ಕರ್ನಾಟಕದ ತೀರ್ಥಹಳ್ಳಿಯಲ್ಲಿ ಚಿತ್ರೀಕರಣ

ಇನ್‌ಸ್ಟಾಗ್ರಾಮ್ ನಲ್ಲಿ ಮೊ್ದಲ ಫೋಟೋ ಶೇರ್

ಬೆಂಗಳೂರು(ಜು.27): ದಕ್ಷಿಣದ ಬಿ ಗ್ರೇಡ್ ಸಿನಿಮಾಗಳ ಮಹಾರಾಣಿ ಶಕೀಲಾ ಅವರ ಬಯೋಪಿಕ್ ಸಿದ್ಧವಾಗುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಅದರಲ್ಲೂ ಶಕೀಲಾ ಪಾತ್ರದಲ್ಲಿ ಬಾಲಿವುಡ್ ನಟಿ ರೀಚಾ ಛಡ್ಡಾ ನಟಿಸುತ್ತಿರುವುದು ಚಿತ್ರದ ಕುರಿತು ಕುತೂಹಲ ಹೆಚ್ಚಲು ಕಾರಣವಾಗಿದೆ.

ರೀಚಾ ಛಡ್ಡಾ ಶಕೀಲಾ ಪಾತ್ರದಲ್ಲಿರುವ ತಮ್ಮ ಮೊದಲ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಕರ್ನಾಟಕದ ತೀರ್ಥಹಳ್ಳಿಯಲ್ಲಿ ಶಕೀಲಾ ಜೀವನಾಧಾರಿತ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಕೇರಳದ ಸಾಂಸ್ಕೃತಿಕ ಉಡುಗೆಯಾದ ಕಸುವು ಪಟ್ಟು ಸೀರೆಯಲ್ಲಿ ಕಂಗೊಳಿಸುತ್ತಿರುವ ರೀಚಾ ಛಡ್ಡಾ, ಚಿತ್ರೀಕರಣವನ್ನು ಎಂಜಾಯ್ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

 

Shakeela

A post shared by Richa Chadha (@therichachadha) on

ಇದೇ ವೇಳೆ ರೀಚಾ ತೀರ್ಥಹಳ್ಳಿಯ ಸೊಬಗನ್ನು ವಿಡಿಯೋದಲ್ಲಿ ಸೆರೆ ಹಿಡಿದಿದ್ದು, 'ಹೆವನ್ ಕರ್ನಾಟಕ' ಎಂದು ಟ್ಯಾಗ್‌ಲೈನ್ ನೀಡಿದ್ದಾರೆ. ಕರ್ನಾಟಕದ ಮಲೆನಾಡಿನ ಸುಂದರ ಸೊಬಗನ್ನು ವರ್ಣಿಸಲು ಪದಗಳೇ ಇಲ್ಲ ಎಂಬುದು ರೀಚಾ ಅಂಬೋಣ.

 

Heaven ! . . . . . . . Karnataka

A post shared by Richa Chadha (@therichachadha) on

ಸ್ಯಾಂಡಲ್ ವುಡ್ ನಿರ್ದೇಶಕ ಇಂದ್ರಜೀತ್ ಲಂಕೇಶ್ ನಿರ್ದೇಶಿಸುತ್ತಿರುವ ಈ ಚಿತ್ರ, ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿಯಲ್ಲಿ ತಯಾರಾಗಲಿದೆ. ರೀಚಾ ಕೇವಲ ಹಿಂದಿ ಅವತರಣಿಕೆಯಲ್ಲಿ ಮಾತ್ರ ನಟಿಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ-ಈ ಬಾಲಿವುಡ್ ಬ್ಯೂಟಿ ಶಕೀಲಾ ಭೇಟಿ ಮಾಡಿದ್ದೇಕೆ?

loader