ಸಿನಿಮಾ ಇಂಡಸ್ಟ್ರಿಯಲ್ಲಿ ಒಬ್ಬರನ್ನೇ ಹೋಲುವ ಇನ್ನೊಬ್ಬ ನಟರಿರುವುದು ಸಾಮಾನ್ಯ. ತಮಿಳು ನಟ ಸೂರ್ಯ ಮತ್ತು ಕನ್ನಡದ ಅಭಿಷೇಕ್ ಶ್ರೀಕಾಂತ್, ಶ್ರೀಮುರಳಿ ಮತ್ತು ರಾಣವ್ ಗೌಡ ಸೇರಿದಂತೆ ಹಲವು ನಟರ ಮುಖ ಹೋಲಿಕೆಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. 

ಜಗತ್ತಿನಲ್ಲಿ ಒಂದೇ ರೀತಿಯ ಏಳು ಮಂದಿ ಇರುತ್ತಾರೆ ಎನ್ನುವ ಮಾತಿದೆ. ಅದು ಎಷ್ಟು ಸತ್ಯವೋ ಗೊತ್ತಿಲ್ಲ. ಆದರೆ ಕೆಲವೊಮ್ಮೆ ಯಾವುದೋ ವ್ಯಕ್ತಿಯನ್ನು ನೋಡಿದಾಕ್ಷಣ, ನಮಗೆ ಎಲ್ಲೋ ನೋಡಿದ ಹಾಗೆ ಅನ್ನಿಸುತ್ತದೆ. ಆದರೆ ಆ ವ್ಯಕ್ತಿ ಇನ್ನೊಬ್ಬರಂತೆ ಇರುವ ಕಾರಣ ಹಾಗೆ ಅನ್ನಿಸುವುದು ಉಂಟು. ಇನ್ನು ಸಿನಿಮಾ ಸೆಲೆಬ್ರಿಟಿಗಳ ಮಟ್ಟಿಗೆ ಹೇಳುವುದಾದರೆ,, ಯಾವುದಾದರೂ ಸಾಮಾನ್ಯ ವ್ಯಕ್ತಿಗಳ ದೇಹದ ಯಾವುದಾದರೂ ಒಂದೆರಡು ಭಾಗಗಳು, ಅದರಲ್ಲಿಯೂ ಹೆಚ್ಚಾಗಿ ಕಣ್ಣುಗಳು ಒಂದೇ ರೀತಿ ಇದ್ದರೆ, ಅದೇ ನಟ ಅಥವಾ ನಟಿಯ ರೀತಿಯಲ್ಲಿಯೇ ಫುಲ್​ ರೆಡಿಯಾಗಿ, ಅವರನ್ನು ಅನುಸರಿಸಿದರೆ ಒಂದೇ ರೀತಿ ಕಾಣುವುದು ಸಹಜ.

ಮೇಕಪ್​ ಮೂಲಕ ಬದಲು

ಇದಾಗಲೇ ಕೆಲವು ಜ್ಯೂನಿಯರ್​ ಆರ್ಟಿಸ್ಟ್​ಗಳು ವೇದಿಕೆಯ ಮೇಲೆ ಕಾಣಬಹುದು. ಡಾ.ರಾಜ್​ಕುಮಾರ್​, ರಜಿನೀಕಾಂತ್​, ವಿಷ್ಣುವರ್ಧನ್​, ಅಂಬರೀಷ್​ ಅವರಿಂದ ಹಿಡಿದು ಪುನೀತ್​ ರಾಜ್​ಕುಮಾರ್​ ಸೇರಿದಂತೆ ಹಲವು ರೀತಿಯ ನಟರನ್ನೇ ಹೋಲುವಂತೆ ಡ್ರೆಸ್​ ಮಾಡಿಕೊಂಡು ಬರುವುದು ಇದೆ. ಆದರೆ ಇದು ಜನಸಾಮಾನ್ಯರು ಮತ್ತು ಸ್ಟಾರ್​ ನಡುವಿನ ಕಥೆಯಾಯ್ತು. ಅದರೆ ನಮ್ಮ ಸಿನಿಮಾ ಇಂಡಸ್ಟ್ರಿಯಲ್ಲಿಯೇ ಒಬ್ಬರನ್ನೇ ಹೋಲುವ ಇನ್ನೊಬ್ಬ ನಟರು ಇರುವ ಬಗ್ಗೆ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಒಂದು ವೈರಲ್​ ಆಗ್ತಿದೆ.

ಸೇಮ್​ ಟು ಸೇಮ್​ ನಟರು

ಇದರಲ್ಲಿ ಕೆಲವು ಭಾಷೆಗಳ ಸ್ಟಾರ್​ ನಟರು, ಇನ್ನೊಂದು ಭಾಷೆಯ ಅಥವಾ ಅದೇ ಭಾಷೆಯ ನಟರಂತೆಯೇ ಕಾಣುವುದುನ್ನು ನೋಡಬಹುದಾಗಿದೆ. ಈಗ ವೈರಲ್​ ಆಗಿರೋ ಫೋಟೋದಲ್ಲಿ ಇರುವ ಕೆಲವು ನಟರ ವಿವರಗಳನ್ನು ಇಲ್ಲಿ ನೀಡಲಾಗಿದೆ.

  • ತಮಿಳು ನಟ ಸೂರ್ಯ ಮತ್ತು ಕನ್ನಡದ ಕಿರುತೆರೆ-ಹಿರಿತೆರೆ ನಟ ಅಭಿಷೇಕ್​ ಶ್ರೀಕಾಂತ್​
  • ಸ್ಯಾಂಡಲ್​ವುಡ್​ ನಟ ಶ್ರೀಮುರಳಿ ಮತ್ತು ಕನ್ನಡ ಕಿರುತೆರೆ-ಹಿರಿತೆರೆ ನಟ ರಾಣವ್​ ಗೌಡ
  • ಬಿಗ್​ಬಾಸ್​ ಖ್ಯಾತಿಯ ಅರವಿಂದ ಕೆ.ಪಿ ಮತ್ತು ನಟ ಸುನೀಲ್​ ರಾವ್​
  • ಹಾಸ್ಯ ನಟರಾದ ಸಾಧು ಕೋಕಿಲ ಮತ್ತು ಜಾನಿ ಲಿವರ್​
  • ನಟರಾದ ವಸಿಷ್ಠ ಸಿಂಹ ಮತ್ತು ಅರುಣ್​ ಹೆಗ್ಡೆ
  • ಗಾಯಕರಾದ ಶಾನ್​ ಮತ್ತು ವಿಜಯ್​ ಪ್ರಕಾಶ್​