ಮುಂಬೈ(ಅ.26): ಬಾಲಿವುಡ್ ಬೆಡಗಿ ಬಿಪಾಷಾ ಬಸು ದಾಂಪತ್ಯದಲ್ಲಿ ಅಪಸ್ವರ ಕೇಳಿ ಬರುತ್ತಿದೆ..

ಮೂರನೇ ಮದುವೆಯಾಗಿರುವ ಕರಣ್ ಸಿಂಗ್ ಗ್ರೋವರ್ ಜೊತೆ ಬಿಪಾಷಾ,ಇದೇ ವರ್ಷ ಏಪ್ರಿಲ್ ನಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನಂತರ ಕೆಲ ತಿಂಗಳು ಹನಿಮೂನ್ ಅಂತಾ ತಿರುಗಾಡಿದ್ದಾರೆ. ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಅಪ್ ಲೋಡ್ ಕೂಡ ಮಾಡಿದ್ದಾರೆ.

ಆದರೆ ಕರವಾಚೌತ್ ಬಳಿಕ ಇಬ್ಬರ ನಡುವೆ ಮನಸ್ತಾಪ ಮೂಡಿದ್ದು, ಜಗಳ ಕೂಡಾ ನಡೆದಿದೆ ಎನ್ನಲಾಗುತ್ತಿದೆ. ಬಿಪಾಷಾ ನಡೆ ಬಗ್ಗೆ ಕರಣ್ ಕೂಡ ಅಸಮಾಧಾನಗೊಂಡಿದ್ದಾನಂತೆ.