ಕೆಲ ದಿನಗಳ ಹಿಂದೆ ದಾದೂ ರತ್ನಾನಿ 2019 ಕ್ಯಾಲೆಂಡರ್ ಆಫ್ ದಿ ಇಯರ್ ಲಾಂಚ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿತ್ತು. ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಭಾಗಿಯಾಗಿ ಮಿಂಚಿದರು, ಅದರಲ್ಲೂ ಎಲ್ಲರ ಗಮನ ಸೆಳೆದಿದ್ದು ರೇಖಾ ಜೀ.

ಮಾಧ್ಯಮಗಳ ಮುಂದೆ ನಿಂತು ಪೋಸ್ ಕೊಡಿ ಎಂದು ಫೋಟೋಗ್ರಾಫರ್ ಗಳು ಕೇಳಿದಾಗ ಸುಮ್ಮನೆ ನಿಂತ ರೇಖಾ ಹಿಂದೆ ತಿರುಗಿ ನೋಡಿದಾಕ್ಷಣ ಬಾಲಿವುಡ್ ಬಾದ್ ಶಾ ಅಮಿತಾಬ್ ಬಚ್ಚನ್ ಫೋಟೋ ಇತ್ತು. ಅದನ್ನು ನೋಡಿ ಅಲ್ಲಿಂದ ಪಕ್ಕೆಕ್ಕೆ ತಕ್ಷಣ ಓಡಿ ಹೋದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

 

ಕಾರ್ಯಕ್ರಮವೆಂದಾಕ್ಷಣ ರೇಶ್ಮೆ ಸೀರೆ ತೊಟ್ಟು ಗ್ರ್ಯಾಂಡ್‌ ಸರ ಮಾಲೇ ಧರಿಸುವ ರೇಖಾ ಲಾಂಚ್ ಗೆ ಕೊಂಚ ವಿಭ್ನಿನವಾಗಿ ಬಂದಿದ್ದರೂ....ಕ್ಯಾಟ್ ಐ ಗ್ಲಾಸ್ ಬ್ಲ್ಯಾಕ್ ಸೂಟ್ ಧರಿಸಿ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದರು.