ಬಾಲಿವುಡ್ ತಾರೆ ರೇಖಾ ಅವರ ವೈಯಕ್ತಿಕ ಜೀವನದಲ್ಲಿ ಅನೇಕ ಏರಿಳಿತಗಳಿದ್ದವು. ಪಾಕಿಸ್ತಾನಿ ಕ್ರಿಕೆಟರ್ ಒಬ್ಬರೊಂದಿಗೆ ಆಕೆ ಡೇಟಿಂಗ್ ಮಾಡಿದ್ದಾರೆ ಎಂಬ ವದಂತಿಗಳು ಹರಡಿತ್ತು. ಮದುವೆಯಾಗುವವರೆಗೂ ಹೋಗಿದ್ದ ಸಂಬಂಧ ಕೊನೆಗೆ ಮುರಿದುಬಿತ್ತು.
ರೇಖಾ, ಬಾಲಿವುಡ್‌ನ ಅತ್ಯಂತ ಪ್ರಸಿದ್ಧ ನಟಿಯರಲ್ಲಿ ಒಬ್ಬರು. ದಶಕಗಳ ಕಾಲ ಬೆಳ್ಳಿ ತೆರೆಯನ್ನು ಈಕೆ ಆಳಿದಳು. ಏರುಹರೆಯ ಸಂದ ಬಳಿಕವೂ ಪೋಷಕ - ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಳು. ರೇಖಾಳ ವೃತ್ತಿಪರ ಜೀವನ ಸಾಕಷ್ಟು ಯಶಸ್ವಿಯಾಗಿದ್ದರೂ, ಅವಳ ವೈಯಕ್ತಿಕ ಜೀವನ ಅನೇಕ ಏರಿಳಿತಗಳನ್ನು ಕಂಡಿದೆ. ಅಮಿತಾಭ್ ಬಚ್ಚನ್ ಅವರೊಂದಿಗಿನ ಇವರ ಪ್ರೀತಿ ಪ್ರೇಮ ಪ್ರಣಯದ ವದಂತಿ ಬಹಳ ಕಾಲ ಇತ್ತು. ರೇಖಾಳ ಪತಿ ಮುಖೇಶ್ ಅಗರ್ವಾಲ್ ಕೂಡ ರೇಖಾಳ ಜಾಜ್ವಲ್ಯಮಾನ ಹಾಟ್‌ನೆಸ್ ಅನ್ನು ಹಿಡಿದಿಡಲಾಗಲಿಲ್ಲ.
ಇದರ ನಡುವೆ ರೇಖಾ, ಪಾಕಿಸ್ತಾನಿ ಕ್ರಿಕೆಟರ್ ಒಬ್ಬನೊಂದಿಗೆ ಡೇಟಿಂಗ್ ಮಾಡಿದ ಕುರಿತು ಕೂಡ ಸುಮಾರು ಕಾಲ ಗಾಸಿಪ್‌ಗಳು ಹರಡಿದ್ದವು. 1980ರ ದಶಕದಲ್ಲಿ ನಡೆದದ್ದು ಇದು. ಆ ಕ್ರಿಕೆಟರ್ ಬೇರೆ ಯಾರೂ ಅಲ್ಲ, ಇಮ್ರಾನ್ ಖಾನ್. ರೇಖಾ ಮತ್ತು ಇಮ್ರಾನ್ ಖಾನ್ ಅವರ ಆತ್ಮೀಯಯ ಬಗ್ಗೆ ವದಂತಿಗಳು ಹರಡಿದ್ದವು. ಇಬ್ಬರೂ ವಿವಿಧ ಕಾರ್ಯಕ್ರಮಗಳಲ್ಲಿ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಅವರ ಸಂಬಂಧ ಸ್ನೇಹವನ್ನೂ ಮೀರಿ ಹೋಗಿದೆ ಎಂಬ ಊಹಾಪೋಹಗಳು ಕೂಡ ಹರಡಿದವು. ಅವರ ಸಾರ್ವಜನಿಕ ಕಾಣುವಿಕೆಗಳು ಮಾಧ್ಯಮಗಳಲ್ಲಿ ಕೋಲಾಹಲವನ್ನು ಸೃಷ್ಟಿಸಿದವು. ಅವರು ವಿಶೇಷ ಸಂಬಂಧವನ್ನು ಹಂಚಿಕೊಂಡಿದ್ದಾರೆಂದು ಬಹಳಮಂದಿ ನಂಬಿದರು.
ಸಿನೆಮಾ ಮ್ಯಾಗಜಿನ್ ಒಂದರ ಪ್ರಕಾರ ಇಬ್ಬರೂ ಮದುವೆಯಾಗಲು ಕೂಡ ಯೋಜಿಸಿದ್ದರಂತೆ. ಇಬ್ಬರೂ ಒಟ್ಟಿಗೆ ಹಲವು ಬಾರಿ ಕಾಣಿಸಿಕೊಂಡಿದ್ದರಿಂದ ಅದು ಪಕ್ಕಾ ನ್ಯೂಸ್ ಅನಿಸಿತು. ಆ ಸಮಯದಲ್ಲಿ ಇಮ್ರಾನ್ ಖಾನ್ ಕೂಡ ಭಾರತದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದರು. ರೇಖಾ ಅವರೊಂದಿಗಿನ ಅವರ ಸಂಬಂಧ ಈ ಫ್ಯಾನ್‌ಗಳಿಂದಾಗಿ ಸುದ್ದಿಯ ಬೆಂಕಿಗೆ ತುಪ್ಪ ಸುರಿಯಿತು.
ರೇಖಾ ಅವರ ತಾಯಿ ಪುಷ್ಪವಲ್ಲಿ ಅವರು ಇಮ್ರಾನ್ ಖಾನ್ ಅವರನ್ನು ತುಂಬಾ ಇಷ್ಟಪಡುತ್ತಿದ್ದರು ಮತ್ತು ಅವರು ತಮ್ಮ ಮಗಳಿಗೆ ಪರಿಪೂರ್ಣ ಜೋಡಿಯಾಗುತ್ತಾರೆ ಎಂದು ನಂಬಿದ್ದರು ಎಂದು ವರದಿಗಳು ಸೂಚಿಸಿದವು. ಗುಸುಗುಸು ಜೋರಾಯಿತು. ಇಮ್ರಾನ್ ತನ್ನ ಮಗಳಿಗೆ ಸೂಕ್ತ ಜೋಡಿಯಾಗಬಹುದೇ ಎಂದು ರೇಖಾ ತಾಯಿ ದೆಹಲಿಗೆ ಹೋಗಿ ನಜೂಮಿ ಎಂಬ ಜ್ಯೋತಿಷಿಯನ್ನು ಸಂಪರ್ಕಿಸಿದರು. ನಜೂಮಿ ಏನು ಹೇಳಿದಳೆಂದು ಯಾರಿಗೂ ತಿಳಿಯಲಿಲ್ಲ. ಆದರೆ ಇಮ್ರಾನ್ ಅವರ ಕುಟುಂಬಕ್ಕೆ ರೇಖಾ ಸ್ವಾಗತಾರ್ಹ ಸೇರ್ಪಡೆಯಾಗಬಹುದೆಂದು ರೇಖಾ ಅವರ ತಾಯಿಗೆ ಮನವರಿಕೆಯಾಯಿತು ಎಂದು ಒಂದು ಗಾಸಿಪ್ ವರದಿ ಹೇಳಿತು.
ಅದರೆ ಇಮ್ರಾನ್ ಖಾನ್ ಅವರೊಂದಿಗಿನ ರೇಖಾ ಅವರ ಮದುವೆ ವದಂತಿಯಾಗಿಯೇ ಉಳಿಯಿತು. ಎಂದಿಗೂ ವಾಸ್ತವವಾಗಲಿಲ್ಲ. ಸಾಕಷ್ಟು ಸುದ್ದಿಗದ್ದಲ, ಅವರಿಬ್ಬರ ಹಲವು ಆಕರ್ಷಕ ಪ್ರವಾಸಗಳ ಹೊರತಾಗಿಯೂ, ಮದುವೆ ಎಂದಿಗೂ ನಡೆಯಲಿಲ್ಲ. ರೇಖಾ ಮತ್ತು ಇಮ್ರಾನ್ ಕೊನೆಗೆ ಬೇರೆಯಾದರು. ಇದು ಬಹಳ ಮಂದಿಯನ್ನು ನಿರಾಶೆಗೊಳಿಸಿರಬಹುದು.
ರೇಖಾ ಜೀವನದಲ್ಲಿ ಹಲವು ಪುರುಷರು ಬಂದು ಹೋಗಿದ್ದಾರೆ. ಅಮಿತಾಭ್ ಮಾತ್ರವಲ್ಲದೆ ನಟರಾದ ವಿನೋದ್ ಮೆಹ್ರಾ ಮತ್ತು ಕಿರಣ್ ಕುಮಾರ್ ಜೊತೆಗೂ ಆಕೆ ಡೇಟಿಂಗ್ ಮಾಡುತ್ತಿದ್ದರು ಎಂಬ ವದಂತಿಗಳಿದ್ದವು. ವಿನೋದ್ ಮೆಹ್ರಾರನ್ನು ರಹಸ್ಯವಾಗಿ ವಿವಾಹವಾದರು ಎಂದೂ ಸುದ್ದಿಯಿತ್ತು. ಇಮ್ರಾನ್ ಖಾನ್ ಗಿಂತ ಮೊದಲು ರೇಖಾ ಪ್ರಸಿದ್ಧ ಭಾರತೀಯ ಕ್ರಿಕೆಟಿಗ ಕಪಿಲ್ ದೇವ್‌ಗೆ ಹತ್ತಿರವಾಗಿದ್ದರು ಎಂಬ ಗಾಸಿಪ್ ಕೂಡ ಇತ್ತು. ಇಂಗ್ಲಿಷ್ ನಿಯತಕಾಲಿಕೆಯೊಂದು ಹಾಗೆ ಬರೆದಿತ್ತು. ರೇಖಾ ಅಥವಾ ಕಪಿಲ್ ಈ ಸುದ್ದಿಯನ್ನು ನಿರಾಕರಿಸಲೂ ಇಲ್ಲ, ದೃಢೀಕರಿಸಲೂ ಇಲ್ಲ. ನಂತರ, ಕಪಿಲ್ ತನ್ನ ಗೆಳತಿ ರೋಮಿ ಭಾಟಿಯಾಳನ್ನು ವಿವಾಹವಾದರು. ಮುಂದೆ ರೇಖಾ ಉದ್ಯಮಿ ಮುಖೇಶ್ ಅಗರ್ವಾಲ್ ಅವರನ್ನು ವಿವಾಹವಾದರು. ಮದುವೆಯಾದ ಸ್ವಲ್ಪ ಸಮಯದ ನಂತರ ಮುಖೇಶ್ ಅವರು ಆತ್ಮಹತ್ಯೆ ಮಾಡಿಕೊಂಡರು.
