ಅನಂತ್ ನಾಗ್ ಬಗ್ಗೆ ನೀವು ತಿಳಿಯಬೇಕಾದ ಇಂಟರೆಸ್ಟಿಂಗ್ ವಿಚಾರಗಳಿವು!

ಹೀಗೊಂದು ಸುದ್ದಿ ಪತ್ರಿಕೆಯಲ್ಲಿ ಆಗಾಗ ಬರುತ್ತಿತ್ತು. ಆಗೆಲ್ಲ ವೈಯನ್ಕೆ ‘ಅದು ತೀರಾ ಸಹಜ. ಒಳ್ಳೆಯ ಕಲಾವಿದ ಸದಾ ಪ್ರಕ್ಷುಬ್ಧನಾಗಿಯೇ ಇರುತ್ತಾನೆ’ ಅನ್ನುತ್ತಿದ್ದರು. ಸುದ್ದಿ ಕಾಶ್ಮೀರ ಕಣಿವೆಯಲ್ಲಿರುವ ಅನಂತ್‌ನಾಗ್‌ಗೆ ಸಂಬಂಧಿಸಿದ್ದಾಗಿತ್ತು. ವೈಯನ್ಕೆ ಹೇಳುತ್ತಿದ್ದದ್ದು ನಟ ಅನಂತ್‌ನಾಗ್‌ ಕುರಿತಾಗಿತ್ತು.

Reasons why Veteran actor Anant Nag is still loveable in Sandalwood

ಜೋಗಿ

ಆಗೆಲ್ಲ ಕಾಶ್ಮೀರ ಕಣಿವೆಯಲ್ಲಿ ಶ್ರೀನಗರದಿಂದ 53 ಕಿಲೋಮೀಟರ್‌ ದೂರದಲ್ಲಿರುವ ಅನಂತ್‌ನಾಗ್‌ ಎಂಬ ಊರಿಗೂ, ಶಿರಸಿ ಸಮೀಪದ ನಾಗರಕಟ್ಟೆಯಿಂದ ಬಂದ ಅನಂತ್‌ ನಾಗರಕಟ್ಟೆಎಂಬ ನಟರಿಗೂ ಏನಕೇನ ಸಂಬಂಧವೂ ಇಲ್ಲವೆಂದು ಚಿತ್ರರಂಗ ನಂಬಿತ್ತು. ಅನಂತ್‌ ನಾಗರಕಟ್ಟೆಹೆಸರಿನಲ್ಲಿರುವ ನಾಗರಕಟ್ಟೆಯನ್ನು ಮೊಟಕುಗೊಳಿಸಿದ್ದರಿಂದ ಅವರು ಅನಂತ ನಾಗ್‌ ಆದರು ಅನ್ನುವುದನ್ನು ಬಿಟ್ಟರೆ ಆ ಊರಿಗೂ ಇವರಿಗೂ ಸಂಬಂಧವೇ ಇಲ್ಲ ಅಂತ ಇಲ್ಲಿಯ ತನಕ ಎಲ್ಲರೂ ಅಂದುಕೊಂಡಿದ್ದರು.

ಆದರೆ ಅನಂತ್‌ನಾಗ್‌ ಹೆಸರಿಗೂ ಅನಂತ್‌ನಾಗ್‌ ಎಂಬ ಊರಿಗೂ ಹತ್ತಿರದ ಸಂಬಂಧವಿದೆ ಅನ್ನುವುದನ್ನು ಅನಂತ್‌ನಾಗ್‌ ಅವರೇ ಹೇಳಿಕೊಂಡಿದ್ದಾರೆ. ಆ ಸಂಬಂಧವೂ ವಿಶಿಷ್ಟವಾಗಿದೆ. ಅದನ್ನು ಬಾದರಾಯಣ ಸಂಬಂಧ ಅಂತ ಹೇಳುವ ಹಾಗಿಲ್ಲ. ಯಾಕೆಂದರೆ ಅನಂತ್‌ನಾಗ್‌ ಹೇಳುವ ಕತೆ, ವಾಸ್ತವಿಕತೆ! ಚರಿತ್ರೆಯ ಪುಟಗಳಿಂದ ಹೆಕ್ಕಿ ತಂದ ಕತೆ.

Reasons why Veteran actor Anant Nag is still loveable in Sandalwood

ಅನಂತ್‌ನಾಗ್‌ ಸಾರಸ್ವತಿ ಋುಗ್ವೇದಿ ಬ್ರಾಹ್ಮಣರು. ಮೂಲತಃ ಅವರು ಕಾಶ್ಮೀರವಾಸಿಗಳು. ಮುಸ್ಲಿಂ ಧರ್ಮಕ್ಕೆ ಮತಾಂತರ ಆಗುವುದರಿಂದ ತಪ್ಪಿಸಿಕೊಳ್ಳಲು ಅನಂತ್‌ನಾಗ್‌ ಅವರ ವಂಶದ ಪುರಾತನ ಹಿರಿಯರಾದ ಲೋಮ ಶರ್ಮರು ಸುಮಾರು 200 ಮಂದಿಯ ಗುಂಪಿನೊಂದಿಗೆ ಕಾಶ್ಮೀರ ಬಿಟ್ಟು ಬರುತ್ತಾರೆ. ಅವರು ಬರುವಾಗ ತಮ್ಮ ತಮ್ಮ ಆರಾಧ್ಯದೈವರಾದ ಭವಾನಿ, ಶಂಕರ, ಲಕ್ಷ್ಮಿನಾರಾಯಣ, ಸರಸ್ವತಿ, ಗಣೇಶ , ದತ್ತಾತ್ರೇಯರ ಮೂರ್ತಿಗಳನ್ನು ತಮ್ಮೊಂದಿಗೆ ತರುತ್ತಾರೆ. ಹಾಗೆ ಬಂದವರು ಗೋವಾದಲ್ಲಿ ಬೀಡು ಬಿಡುತ್ತಾರೆ. ಅಲ್ಲಿ ಅವರನ್ನು ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರ ಹೊಂದುವಂತೆ ಒತ್ತಾಯ ಬರುತ್ತದೆ. ಅಲ್ಲಿಂದ ಹೊರಟ ಅವರು ಕರ್ನಾಟಕಕ್ಕೆ ಬಂದು ಶೃಂಗೇರಿಗೆ ಬರುತ್ತಾರೆ. ಅವರು ಶೃಂಗೇರಿಯ ಮಠಾಧಿಪತಿಗಳು ಪುರಸ್ಕರಿಸಿ ಕೆಳದಿ ಸಂಸ್ಥಾನದ ಮಹಾರಾಜರ ಹತ್ತಿರ ಹೋಗಲು ಹೇಳುತ್ತಾರೆ. ಕೆಳದಿಯ ಅರಸರು ಅವರಿಗೆ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಪ್ರಾಂತ್ಯಗಳಲ್ಲಿ ಒಂದಷ್ಟುಜಾಗಗಳನ್ನು ಉಂಬಳಿಯಾಗಿ ಕೊಡುತ್ತಾರೆ.

ಆಗ ಅವರವರಿಗೆ ಉಂಬಳಿಯಾಗಿ ಸಿಕ್ಕ ಊರುಗಳ ಹೆಸರುಗಳೇ ಅವರ ಕುಲನಾಮಗಳೂ ಆಗುತ್ತವೆ. ಆಯಾ ಹಳ್ಳಿಗಳ ಹೆಸರನ್ನೇ ತಮ್ಮ ಮುಂದಿಟ್ಟುಕೊಂಡು ಅವರು ಕರ್ನಾಟಕದ ನಿವಾಸಿಗಳಾಗುತ್ತಾರೆ. ಹೀಗಾಗಿಯೇ ಕಾರ್ನಾಡ, ಬೆನಗಲ್‌, ಕಂಬದಕೋಣೆ, ಪಡುಕೋಣೆ, ಹೊಸಂಗಡಿ, ಹಟ್ಟಿಯಂಗಡಿ ಮಂತಾದ ಹೆಸರುಗಳು ಚಾಲ್ತಿಗೆ ಬರುತ್ತವೆ. ಅನಂತ್‌ನಾಗ್‌ ಕುಟುಂಬ ನಾಗರಕಟ್ಟೆಯಲ್ಲಿ ನೆಲೆಸಿದ್ದರಿಂದ ನಾಗರಕಟ್ಟೆಎಂಬ ಹೆಸರು ಅವರಿಗೆ ಅಂಟಿಕೊಳ್ಳುತ್ತದೆ.

ಮುಂದೆ, ಶಾಮ್‌ ಬೆನಗಲ್‌ ಅಂಕುರ್‌ ಚಿತ್ರ ಮಾಡುವ ಹೊತ್ತಿನಲ್ಲಿ, ಈ ಎಲ್ಲಾ ಚರಿತ್ರೆಯೂ ಅವರಿಗೆ ಗೊತ್ತಿದ್ದರಿಂದ, ಕಾಶ್ಮೀರ ನೆನಪೂ ಇರಲಿ ಎಂಬ ಕಾರಣಕ್ಕೆ ಅನಂತ್‌ ನಾಗರಕಟ್ಟೆಎಂಬ ಹೆಸರನ್ನು ಅನಂತ್‌ನಾಗ್‌ ಎಂದು ಬದಲಾಯಿಸುತ್ತಾರೆ. ಕಾಶ್ಮೀರದ ಮೂಲ ಊರಿನ ಹೆಸರು, ನಾಗರಕಟ್ಟೆಯ ಹೆಸರೂ ಸೇರಿಕೊಂಡು ಅವರು ಅನಂತ್‌ನಾಗ್‌ ಆಗುತ್ತಾರೆ. ಹೀಗೆ ಅನಂತ್‌ನಾಗ್‌ ಹೆಸರಲ್ಲಿ ಕರ್ನಾಟಕವೂ ಇದೆ, ಕಾಶ್ಮೀರವೂ ಇದೆ.

ಇದನ್ನು ಪ್ರಸ್ತಾಪಿಸಲು ಕಾರಣ ಅವರ ಹೊಸ ಚಿತ್ರ ಕವಲುದಾರಿ. ಆ ಚಿತ್ರದಲ್ಲಿ ರಾಜಕಾರಣದ ಅಪರಾಧೀಕರಣದ ಕುರಿತ ಮಹತ್ವದ ಚರ್ಚೆಗಳಿವೆ ಅನ್ನುತ್ತಾರೆ ಅನಂತ್‌ನಾಗ್‌. ಇಂಥದ್ದೊಂದು ಸಮಸ್ಯೆಯನ್ನು ಇದೇ ಮೊದಲ ಬಾರಿಗೆ ಭಾರತೀಯ ಚಿತ್ರವೊಂದರಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈ ಸಮಸ್ಯೆಯ ಕುರಿತು ಟಿಜೆಎಸ್‌ ಜಾಜ್‌ರ್‍ ತಮ್ಮ ಅಂಕಣದಲ್ಲೂ ಬರೆದಿದ್ದಾರೆ. ಇವತ್ತು ಸುಮಾರ 1500 ಮಂದಿ ಅರೋಪಪಟ್ಟಿಯಲ್ಲಿರುವ ಮಂದಿ ಭಾರತೀಯ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ, ವಿವಿಧ ಹುದ್ದೆಗಳಲ್ಲಿದ್ದಾರೆ, ವಿಧಾನಸಭೆ, ವಿಧಾನಪರಿಷತ್ತು ಮತ್ತು ಲೋಕಸಭೆಗಳಲ್ಲಿ ಆರಿಸಿ ಬಂದವರಿದ್ದಾರೆ.

ಡಬ್ಬಿಂಗ್‌ ಬಗ್ಗೆ ಸ್ಪಷ್ಟ ಅಭಿಪ್ರಾಯ ಹೊರಹಾಕಿದ ಅನಂತ್‌ ನಾಗ್

ಇದನ್ನು ಕವಲುದಾರಿಯ ಕತೆ ಸ್ಪರ್ಶಿಸುತ್ತಾ ಹೋಗುತ್ತದೆ. ‘ಈ ಚಿತ್ರದಲ್ಲಿ ನಾನೊಬ್ಬ ನಿವೃತ್ತ ಪೊಲೀಸ್‌ ಇನ್ಸ್‌ಪೆಕ್ಟರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನನ್ನ ಮುಖಾಮುಖಿಯೆಲ್ಲ ಪಾತ್ರದ ನಾಯಕ ರಿಷಿಯ ಜೊತೆಗಿರುತ್ತದೆ. ಮಿಕ್ಕಂತೆ ಪತ್ರಕರ್ತನಾಗಿ ಅಚ್ಯುತ್‌, ಅವನ ಮಗಳಾಗಿ ರೋಶಿಣಿ, ಮತ್ತೊಂದು ಪಾತ್ರದಲ್ಲಿ ಅವಿನಾಶ್‌ ಇದ್ದಾರೆ. ನನ್ನ ಮಟ್ಟಿಗೆ ಇದೊಂದು ಬಹುಮುಖ್ಯಚಿತ್ರ’ ಅನ್ನುತ್ತಾರೆ ಅನಂತ್‌ ನಾಗ್‌.

Latest Videos
Follow Us:
Download App:
  • android
  • ios