ಡಬ್ಬಿಂಗ್ ಬಗ್ಗೆ ಸ್ಪಷ್ಟ ಅಭಿಪ್ರಾಯ ಹೊರಹಾಕಿದ ಅನಂತ್ ನಾಗ್
ಡಬ್ಬಿಂಗ್ ಬೇಕೋ? ಬೇಡವೋ? ಎಂಬ ವಿಚಾರ ತುಂಬಾ ವರ್ಷಗಳಿಂದ ಕನ್ನಡ ಚಿತ್ರರಂಗದ ಮಟ್ಟಿಗೆ ನಡೆಯುತ್ತಲೆ ಬಂದಿದೆ. ಡಬ್ಬಿಂಗ್ ವಿಚಾರವಾಗಿ ಹಿರಿಯ ನಟರೊಬ್ಬರು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.
ಬೆಂಗಳೂರು[ಜ.14] ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 25 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಈ ಸಂದರ್ಭದಲ್ಲಿ ಹಿರಿಯ ನಟ ಅನಂತ್ ನಾಗ್ ಮಾತನಾಡಿದ್ದಾರೆ.
ಕೆಜಿಎಫ್ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಡಬ್ಬಿಂಗ್ ಬಗ್ಗೆ ಮಾತನಾಡಿದ ಅನಂತ್ ನಾಗ್, ಕೆಜಿಎಫ್ ಎಲ್ಲಾ ಭಾಷೆಯಲ್ಲಿ ಡಬ್ಬಿಂಗ್ ಆಗಿ ರಿಲೀಸ್ ಆಗಿದೆ. ಆದ್ದರಿಂದ ಬೇರೆ ಸಿನಿಮಾಗಳು ಇಲ್ಲಿಗೆ ಡಬ್ಬಿಂಗ್ ಮೂಲಕ ಬರಲಿ. ಈಗಾಗಲೇ ಜನರು ಡಬ್ಬಿಂಗ್ ಬಗ್ಗೆ ಓಪನಪ್ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಇಲ್ಲಿಯೂ ಡಬ್ಬಿಂಗ್ ಚಿತ್ರಗಳು ಬರಲಿ ಎಂದರು.
ಕೆಜಿಎಫ್ ಚಿತ್ರತಂಡ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಪ್ರೆಸ್ ಮೀಟ್ ನಲ್ಲಿ ಯಶ್ .ಅನಂತ್ ನಾಗ್ . ಶ್ರೀನಿಧಿ ಶೆಟ್ಟಿ ಹಾಗೂ ನಿರ್ಮಾಪಕ ವಿಜಯ ಕಿರಗಂದೂರು ಭಾಗಿಯಾಗಿದ್ದರು.