ಡಾ ರಾಜ್‌ಕುಮಾರ್ ಕನ್ನಡದ ಮೇರುನಟ ಮಾತ್ರವಲ್ಲ, ಅವರನ್ನು ಕನ್ನಡದ ಆಸ್ತಿ ಎಂಬಂತೆ ನೋಡಲಾಗುತ್ತದೆ. ಅತೀ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ ದಾಖಲೆ ಕೂಡ ಅವರ ಹೆಸರಲ್ಲಿದೆ. ಡಾ ರಾಜ್‌ಕುಮಾರ್ ಹಾಗೂ ಡಾ ವಿಷ್ಣುವರ್ಧನ್ ಮಾತ್ರ 200+ ಸಿನಮಾಗಳಲ್ಲಿ ನಟಿಸಿದ್ದಾರೆ.
ಕರ್ನಾಟಕ ರತ್ನ, ಕನ್ನಡದ ಮೇರು ನಟ ಡಾ ರಾಜ್‌ಕುಮಾರ್ (Dr Rajkumar) ಅವರು ಅದೆಷ್ಟೋ ಸಾಹಸ ದೃಶ್ಯಗಳನ್ನು ಡ್ಯೂಪ್ ಇಲ್ಲದೇ ಸ್ವತಃ ಮಾಡುತ್ತಿದ್ದರು. ಅಷ್ಟೇ ಅಲ್ಲ, ಅವರಿಗೆ ಕ್ರೂರ ಪ್ರಾಣಿಗಳು ಹಾಗೂ ವಿಷ ಜಂತುಗಳು ಎಂದರೆ ಅಷ್ಟೇನೂ ಭಯ ಇರಲಿಲ್ಲ. ಒಮ್ಮೆ ಚಿತ್ರೀಕರಣ ನಡೆಯುತ್ತಿದ್ದಾಗ ಒಂದು ಚೇಳು ಬಂದು ಅಣ್ಣಾವ್ರ ಮೈಮೇಲೆ ಕುಳಿತುಕೊಳ್ಳುತ್ತದೆ. ಅದನ್ನು ನೋಡಿ ಅಲ್ಲಿದ್ದವರ ಎದೆಯಲ್ಲಿ ನಡುಕ ಶುರುವಾಗಿತ್ತು. ಆದರೆ, ಅದಕ್ಕೆ ಅಂಜದ ಡಾ ರಾಜ್ ಅವರು ಅದನ್ನು ತಮ್ಮ ಕೈಯಿಂದಲೇ ತೆಗೆದು ನೆಲಕ್ಕೆ ಬಿಟ್ಟುಬಿಡುತ್ತಾರೆ.
ಇಂತಹ ಅದೆಷ್ಟೋ ಘಟನೆಗಳು ಅಣ್ಣಾವ್ರ ಜೀವನದಲ್ಲಿ ನಡೆದುಹೋಗಿವೆ. ಎಂಪಿ ಶಂಕರ್ ನಿರ್ಮಾಣದ 'ಗಂಧದ ಗುಡಿ' ಚಿತ್ರದ ಶೂಟಿಂಗ್ ಸಮಯದಲ್ಲಂತೂ ಹಲವಾರು ನಿಜವಾದ ಕಾಡುಪ್ರಾಣಿಗಳನ್ನು ಶೂಟಿಂಗ್ ಜಾಗದಲ್ಲೇ ನೋಡಿದೆ ಇಡೀ ಚಿತ್ರತಂಡ. ಆಗೆಲ್ಲಾ ಹುಲಿ-ಸಿಂಹಗಳಂತಹ ಕಾಡು ಪ್ರಾಣಿಗಳನ್ನು, ಹಾಗೂ ಕಾಡು ಆನೆಯಂತಹ ಪ್ರಾಣಿಗಳನ್ನೂ ಪಳಗಿಸಿ ಚಿತ್ರೀಕರಣ ಮಾಡಲಾಗುತ್ತಿತ್ತು. ಈಗಿನಂತೆ ಆಗ ಗ್ರಾಫಿಕ್ಸ್ ಬಳಕೆ ಇರಲಿಲ್ಲ. ಪಳಗಿಸಿದ ಕಾಡು ಪ್ರಾಣಿಗಳ ಜೊತೆ ನಾಯಕ-ನಾಯಕಿ ಹಾಗೂ ಸಹಕಲಾವಿದರು ಹೆದರದೇ ಶೂಟಿಂಗ್‌ನಲ್ಲಿ ಕಾಣಿಸಿಕೊಳ್ಳಬೇಕಿತ್ತು.
ಈಗ ಅಂತಹ ಸಮಸ್ಯೆ ಇಲ್ಲವೇ ಇಲ್ಲ. ಪ್ರಾಣಿಪಕ್ಷಕಗಳು, ಅಷ್ಟೇ ಏಕೆ, ಜಾತ್ರೆ-ಮಾರ್ಕೆಟ್‌ನಂತಹ ಜನಜಂಗುಳಿಯನ್ನೂ ಸಹ ಗ್ರಾಫಿಕ್ಸ್ ಮೂಲಕ ಸೃಷ್ಟಿ ಮಾಡಲಾಗುತ್ತಿದೆ. ನಿಜವಾದ ಪ್ರಾಣಿ-ಪಕ್ಷಿಗಳು ಹಾಗೂ ಮನುಷ್ಯರ ಅಗತ್ಯವೂ ಸಹ ಈಗಿಲ್ಲ. ಇನ್ಮುಂದೆ ಗ್ರಾಫಿಕ್ಸ್ ನಟನಟಿಯರೇ ಚಿತ್ರರಂಗವನ್ನು ಆಳಿದರೂ ಅಚ್ಚರಿಯೇನಿಲ್ಲ. ಈಗಾಗಲೇ ಎಐ (AI) ಶಾಟ್ಸ್‌ಗಳು ಗ್ರಾಫಿಕ್ಸ್ ಮೂಲಕ ನಾಯಕ-ನಾಯಕಿಯನ್ನು ಚಿತ್ರಿಸತೊಡಗಿವೆ. ಮುಂದೆ ಅದು ಸೀರಿಯಲ್ ಹಾಗೂ ಸಿನಿಮಾಗಳಿಗೂ ಬರುವ ದಿನಗಳು ದೂರವೇನಿಲ್ಲ ಎನ್ನಬಹುದು.
ಆದರೆ, ಅಣ್ಣಾವ್ರು ಸೇರಿದಂತೆ ವಿಷ್ಣುವರ್ಧನ್, ಅಂಬರೀಷ್, ಶಂಖರ್ ನಾಗ್, ಅನಂತ್ ನಾಗ್ ಅಭಿನಯಿಸುವ ಸಮಯದಲ್ಲಿ ಅಂತಹ ಗ್ರಾಫಿಕ್ಸ್ ಪ್ರಾಣಿಗಳು, ವಿಷಕಾರಿ ಜಂತುಗಳು ಇರಲಿಲ್ಲ. ಆಗೇನಿದ್ದರೂ ನಿಜವಾದ ಪ್ರಾಣಿ-ಪಕ್ಷಿಗಳೇ ಚಿತ್ರೀಕರಣಕ್ಕೆ ಬಳಕೆ ಆಗುತ್ತಿದ್ದವು. ಆಗ ಡಾ ರಾಜ್‌ಕುಮಾರ್ ಸೇರಿದಂತೆ ಹಲವು ನಟರು ಅದಕ್ಕೆ ಹೆದರದೇ ಶೂಟಿಂಗ್‌ನಲ್ಲಿ ಭಾಗಿಯಾಗುತ್ತಿದ್ದರೆ ಕೆಲವರು ಹೆದರಿ ಹೆದರಿ ಶೂಟಿಂಗ್‌ನಲ್ಲಿ ಭಾಗವಹಿಸುತ್ತಿದ್ದರು. ಅದೊಂದು ದಿನ ಚೇಳು ಅಣ್ಣಾವ್ರ ಮೈಮೇಲೆ ಹತ್ತಿ ಕುಳಿತಾಗ ಅದೇನಾಯ್ತು ಅಂತ ಈಗಾಗ್ಲೇ ನಿಮ್ಗೆ ಗೊತ್ತಾಗಿದೆ.
ಇನ್ನು, ಅಣ್ಣಾವ್ರು ಖ್ಯಾತಿಯ ಡಾ ರಾಜ್‌ಕುಮಾರ್ ಬಗ್ಗೆಯಂತೂ ಯಾರೂ ಯಾರಿಗೂ ಹೇಳಬೇಕಾಗಿಲ್ಲ. ಅವರು ಕನ್ನಡದ ಮೇರುನಟ ಮಾತ್ರವಲ್ಲ, ಅವರನ್ನು ಕನ್ನಡದ ಆಸ್ತಿ ಎಂಬಂತೆ ನೋಡಲಾಗುತ್ತದೆ. ಅತೀ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ ದಾಖಲೆ ಕೂಡ ಅವರ ಹೆಸರಲ್ಲಿದೆ. ಡಾ ರಾಜ್‌ಕುಮಾರ್ ಹಾಗೂ ಡಾ ವಿಷ್ಣುವರ್ಧನ್ ಮಾತ್ರ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಕಲಾವಿದರು. ವಿಷ್ಣುವರ್ಧನ್ ಅವರಿಗಿಂತ ಡಾ ರಾಜ್‌ಕುಮಾರ್ ಅವರು 4-5 ಹೆಚ್ಚು ಸಿನಿಮಾಗಳಲ್ಲಿ ನಟಸಿದ್ದಾರೆ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ಹೇಳಬೇಕು ಎಂದರೆ, ಆಕ್ಟರ್ ಆಗಿ ಮಾತ್ರವಲ್ಲ, ರಿಯಲ್ ಅಗಿ ಕೂಡ ಡಾ ರಾಜ್‌ಕುಮಾರ್ ಅವರು ಯಾವುದಕ್ಕೂ ಅಂಜಿಕೆ ಪಟ್ಟವರಲ್ಲ. ನಿಜವಾದ ಪ್ರಾಣಿಪಕ್ಷಿಗಳ ಜೊತೆಗೆ ಶೂಟಿಂಗ್ ಇರಲಿ, ಸಾಹಸ ದೃಶ್ಯಗಳಿರಲೀ ಅವರು ಹೆದರದೇ ಅದೆಷ್ಟೋ ಬಾರಿ ಭಾಗವಹಿಸಿದ್ದಾರೆ. ನಟ ವಿಷ್ಣುವರ್ಧನ್ ಕೂಡ ಅಷ್ಟೇ, ಡ್ಯೂಪ್ ಬಳಸುತ್ತಿದ್ದುದು ಅತೀ ಕಡಿಮೆ ಎನ್ನಲಾಗಿದೆ. ಕೆಲವೊಮ್ಮೆ ಮಾತ್ರ ಈ ಇಬ್ಬರೂ ನಟರೂ ಡ್ಯೂಪ್ ಬಳಿಸಿದ್ದಿದೆ. ಈಗೆಲ್ಲಾ ಅದರ ಅಗತ್ಯವೇ ಇಲ್ಲ ಬಿಡಿ, ಎಲ್ಲಾ ಗ್ರಾಫಿಕ್ಸ್‌ಮಯವಾಗಿದೆ.
