ಮುಂಬೈ(ಮಾ.30): ಬಾಲಿವುಡ್'ನ ಒಂದು ಕಾಲದ ಖಳನಾಯಕ  ನಟ  ಶಕ್ತಿ ಕಪೂರ್ ಪುತ್ರಿ ಶೃದ್ಧಾ ಕಪೂರ್ ಮತ್ತು ಪುತ್ರ ಸಿದ್ಧಾಂತ್ ಕಪೂರ್ ಒಂದೇ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಹಸೀನಾ ಎಂಬ ಸಿನಿಮಾದಲ್ಲಿ ನಟಿಸಿರುವ ಇವರು ಸಿನಿಮಾದಲ್ಲೂ ರಿಯಲ್ ರಿಲೇಷನ್ ಪಾತ್ರದಲ್ಲೇ ನಟಿಸಿರುವುದು ವಿಶೇಷ. ಸೋದರಿ ಶೃದ್ಧಾ ಈ ಚಿತ್ರದಲ್ಲಿ ಹಸೀನಾ ಪಾತ್ರ ಮಾಡಿದ್ದಾರೆ. ಸೋದರ ಸಿದ್ಧಾಂತ್ ಇದರಲ್ಲಿ ದಾವೂದ್ ರೋಲನ್ನ ನಿಭಾಯಿಸಿದ್ದಾರೆ. ನೈಜ ಕಥೆ ಆಧಾರಿತ ಚಿತ್ರದಲ್ಲಿ ನೈಜ ಸೋದರ-ಸೋದರಿಯನ್ನ ಹಾಕಿಕೊಂಡು ನಿರ್ದೇಶಕ ಅಪೂರ್ವ ಲಾಖೀಯಾ ಡೈರೆಕ್ಟ್ ಮಾಡಿದ್ದಾರೆ. ಜುಲೈ 14 ರಂದು ಚಿತ್ರ ತೆರೆಗೆ ಬರಲಿದೆ.