ವೈಷ್ಣವಿ ಗೌಡ ಮದುವೆ ದಿನ RCB ನಟಿಯ ತಲೆಗೆ ಏರಿಸಿದ್ದರು ಸ್ಯಾಂಡಲ್​ವುಡ್​ ಬ್ಯೂಟಿ ಅಮೂಲ್ಯ. ಈ ಇಬ್ಬರ ವಿರುದ್ಧ ಕೇಸ್​ ಆಗತ್ತಾ? ಜೈಲಿಗೆ ಹೋಗ್ತಾರಾ? ಆರ್​ಸಿಬಿ ಅಭಿಮಾನಿಗಳಿಂದ ಇದೆಂಥ ಆಕ್ರೋಶ ನೋಡಿ!

ಸೀತಾರಾಮ ಸೀತಾ ಅರ್ಥಾತ್​ ನಟಿ ವೈಷ್ಣವಿ ಗೌಡ ಅವರ ಮದುವೆ ವಿಜೃಂಭಣೆಯಿಂದ ನೆರವೇರಿದೆ. ಬೆಂಗಳೂರಿನ ಹೊರವಲಯದಲ್ಲಿರೋ ರೆಸಾರ್ಟ್‌ನಲ್ಲಿ ವೈಷ್ಣವಿ ಗೌಡ ಮದುವೆ ನಡೆದಿದ್ದು, ಇದೀಗ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಅಷ್ಟಕ್ಕೂ ವೈಷ್ಣವಿ ಗೌಡ ಅವರು ತಮ್ಮ ನಿಶ್ಚಿತಾರ್ಥವಾಗಿರುವ ಬಗ್ಗೆ ರಾತ್ರೋರಾತ್ರಿ ಅಭಿಮಾನಿಗಳಿಗೆ ಅತಿದೊಡ್ಡ ಸರ್‌ಪ್ರೈಸ್‌ ನೀಡಿದ್ದರು. ಅದರಂತೆಯೇ ಮದುವೆಯ ದಿನವನ್ನೂ ಪಬ್ಲಿಕ್​ ಮಾಡಿರಲಿಲ್ಲ. ಮದುವೆ ಶಾಸ್ತ್ರಗಳನ್ನೂ ದಿಢೀರ್​ ಎಂದು ಆರಂಭಿಸಿದ್ದ ನಟಿ, ಮದುವೆಯ ದಿನಾಂಕವನ್ನೂ ಎಲ್ಲಿಯೂ ಪ್ರಕಟಿಸದೇ ಕುಟುಂಬಸ್ಥರು ಹಾಗೂ ಅತ್ಯಂತ ಸಮೀಪವರ್ತಿಗಳ ಸನ್ನಿಧಿಯಲ್ಲಿ ಮದುವೆಯಾಗಿದ್ದಾರೆ. ಇವರ ಮದುವೆಯ ವಿಡಿಯೋಗಳು ಒಂದೊಂದಾಗಿ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. ಸಹಜವಾಗಿ ಈಕೆ ನಟಿಯಾಗಿರುವ ಕಾರಣ, ಸೀರಿಯಲ್​ ಹಾಗೂ ಚಿತ್ರರಂಗದ ನಟ-ನಟಿಯರ ದಂಡು ಮದುವೆಗೆ ಆಗಮಿಸಿತ್ತು. ಅವುಗಳ ಬಗ್ಗೆಯೂ ಇದಾಗಲೇ ಸಾಕಷ್ಟು ವಿಡಿಯೋಗಳು ಬಂದಿವೆ.

ಇದೀಗ ಕುತೂಹಲದ ಬೆಳವಣಿಗೆಯೊಂದರಲ್ಲಿ ವೈಷ್ಣವಿ ಗೌಡ ಅವರ ಮದುವೆಗೆ ಆರ್​ಸಿಬಿ ಗಲಾಟೆ ಥಳಕು ಹಾಕಿಕೊಂಡಿದೆ. RCB ಗೆಲುವಿನ ಸಂಭ್ರಮಾಚರಣದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುರಂತ ಎಲ್ಲರಿಗೂ ಗೊತ್ತಿದೆ. 11 ಅಭಿಮಾನಿಗಳನ್ನು ಬಲಿಪಡೆದ ಪ್ರಕರಣದ ಬಗ್ಗೆ ಇನ್ನೂ ಸಾಕಷ್ಟು ಸುದ್ದಿ ಬರುತ್ತಲೇ ಇವೆ. ಘಟನೆಗೆ ಸಂಬಂಧಿಸಿದಂತೆ ಇದಾಗಲೇ ಪೊಲೀಸ್‌ ಅಧಿಕಾರಿಗಳನ್ನು ಅಮಾನತು ಮಾಡಿ, ಕೆಲವರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ. ಇದರಿಂದಾಗಿ ಸರ್ಕಾರದ ವಿರುದ್ಧ ಇದಾಗಲೇ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಸರ್ಕಾರದ ಕ್ರಮದ ವಿರುದ್ಧ ಹೈಕೋರ್ಟ್‌ಗೂ ಮೊರೆ ಹೋಗಲಾಗಿದೆ. ತಮ್ಮ ವಿರುದ್ಧ ಸಲ್ಲಿಕೆಯಾಗಿರುವ ದೂರಿನ ರದ್ದತಿಗೆ ಕೋರಲಾಗಿದೆ. ಎಲ್ಲರ ವಾದವೂ ಒಂದೇ ಅದು ಸರ್ಕಾರ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಇಂಥದ್ದೊಂದು ಕ್ರಮ ತೆಗೆದುಕೊಂಡಿದೆ ಎನ್ನುವುದು.

ಇದೇ ಕಾರಣಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಮೀಮ್ಸ್‌ಗಳು ಹರಿದಾಡುತ್ತಿವೆ, ಆರ್‌ಸಿಬಿ ಆಟಗಾರರನ್ನು ಕರೆತಂದ ವಾಹನದ ಚಾಲಕನ ವಿರುದ್ಧವೂ ಎಫ್‌ಐಆರ್‌ ಹಾಕುವುದು ಬಾಕಿ ಎಂಬಿತ್ಯಾದಿಯಾಗಿ ಆಕ್ರೋಶವೂ ವ್ಯಕ್ತವಾಗುತ್ತಿದೆ. ಅದರ ನಡುವೆಯೇ ಸೀತಾರಾಮ ಸೀತಾ ಉರ್ಫ್ ನಟಿ ವೈಷ್ಣವಿ ಗೌಡ ಅವರ ಮದುವೆಯಲ್ಲಿಯೂ ಆರ್‌ಸಿಬಿ ಸೌಂಡ್‌ ಮಾಡಿರುವ ಕಾರಣ ಈಗ ಇವರನ್ನೂ ಜೈಲಿಗೆ ತಳ್ತೀರಾ ಎಂದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಅಸಲಿಗೆ ವೈಷ್ಣವಿ ಅವರು ಮದುವೆಪೂರ್ವ ಅರಿಶಿಣ ಕಾರ್ಯಕ್ರಮದಲ್ಲಿ ಆರ್‌ಸಿಬಿ ಆಟವನ್ನು ವೀಕ್ಷಿಸುತ್ತಲೇ ಮದುವೆ ಕಾರ್ಯಕ್ರಮವನ್ನು ಎಂಜಾಯ್‌ ಮಾಡುತ್ತಿದ್ದರು.

ಇದರ ನಡುವೆಯೇ ನಟಿ ಅಮೂಲ್ಯ, ವೈಷ್ಣವಿ ತಲೆಗೆ RCB ಎಂದು ಬರೆದಿರುವ ಫಲಕವನ್ನು ಮುಡಿಸಿ ಹೇರ್​ಸ್ಟೈಲ್​ ಮಾಡಿದ್ದಾರೆ. ಈ ಮೂಲಕ ಆರ್​ಸಿಬಿ ಅಭಿಮಾನವನ್ನು ಮೆರೆದಿದ್ದಾರೆ. ಆ ಸಮಯದಲ್ಲಿ ಇದು ಸಾಕಷ್ಟು ಶ್ಲಾಘನೆಗೆ ಒಳಗಾಗಿತ್ತು. ಆದರೆ ಯಾವಾಗ ಸಿಕ್ಕಸಿಕ್ಕವರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳಲು ಮುಂದಾಯ್ತೋ, ಆಗಿನಿಂದ ಆರ್​ಸಿಬಿ ಫ್ಯಾನ್ಸ್​ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗ ಈ ಇಬ್ಬರು ನಟಿಯರನ್ನೂ ಜೈಲಿಗೆ ತಳ್ಳುತ್ತೀರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಈ ಮೂಲಕ ಅಮಾಯಕರನ್ನು ಟಾರ್ಗೆಟ್‌ ಮಾಡುತ್ತಿರುವ ಸರ್ಕಾರದ ಕ್ರಮವನ್ನು ತಮಾಷೆಯ ರೂಪದಲ್ಲಿ ಟೀಕಿಸಲಾಗುತ್ತಿದೆ. ನಟಿ ವೈಷ್ಣವಿ ಮತ್ತು ಅಮೂಲ್ಯ ಅವರನ್ನು ಯಾವುದೇ ಕ್ಷಣದಲ್ಲಿ ಪೊಲೀಸರು ಅರೆಸ್ಟ್​ ಮಾಡಬಹುದು, ಬೀ ಕೇರ್​ಫುಲ್​ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ನ್ಯೂಸ್​ಬಜ್​ಕನ್ನಡದಲ್ಲಿ ಶೇರ್​ ಮಾಡಲಾಗಿದೆ. 

 

View post on Instagram