ಕೆಜಿಫ್ ನೋಡಿದ ರಶ್ಮಿಕಾ ಮಂದಣ್ಣ | ಕೆಜಿಎಫ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ | ಎಕ್ಸೈಟ್ ಆಗಿ ಆಗಾಗ ಜಂಪ್ ಮಾಡುತ್ತಿದ್ದರಂತೆ ರಶ್ಮಿಕಾ
ಬೆಂಗಳೂರು (ಡಿ. 25): ಕೆಜಿಎಫ್ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಗ್ತಾ ಇದೆ. ಕೇವನ ಜನಸಾಮಾನ್ಯರು ಮಾತ್ರವಲ್ಲ, ಸಿನಿಮಾ ಸೆಲಬ್ರಿಟಿಗಳೂ ಕೂಡಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಕೊಡಗಿನ ಕುವರಿ, ಸ್ಯಾಂಡಲ್ ವುಡ್ ಬೆಡಗಿ ರಶ್ಮಿಕಾ ಮಂದಣ್ಣ ಕೆಜಿಎಫ್ ನೋಡಿದ್ದಾರೆ. ಯಶ್ ಸರ್, ಪ್ರಶಾಂತ್ ಸರ್, ಭುವನ್ ಸರ್ ಎಲ್ಲಾ ಸೇರಿ ಅಧ್ಭುತವಾದ ಸಿನಿಮಾ ಮಾಡಿ ಕನ್ನಡಿಗರಿಗೆ ಗಿಫ್ಟ್ ಕೊಟ್ಟಿದ್ದಾರೆ. ಚಿತ್ರದ ಕೆಲವೊಂದು ಸೀನ್ ನೋಡುವಾಗ ಎಕ್ಸೈಟ್ ಆಗಿ ಜಂಪ್ ಮಾಡುತ್ತಿದ್ದೆ. ಅದ್ಭುತವಾದ ಸಿನಿಮಾ! ಚಿತ್ರ ಮೇಕಿಂಗ್ ಕೂಡಾ ಅಷ್ಟೇ ಬ್ರಿಲಿಯಂಟಾಗಿದೆ. ಇಂಥದ್ದೊಂದು ಸೂಪರ್ ಹಿಟ್ ಚಿತ್ರ ಮಾಡಿದ್ದಕ್ಕಾಗಿ ಹೊಂಬಾಳೆ ಫಿಲ್ಮ್ ನವರಿಗೆ ಧನ್ಯವಾದಗಳು. ಮುಂದೆಯೂ ಕೂಡಾ ಇಂತಹ ಸಿನಿಮಾಗಳನ್ನು ಹೆಚ್ಚು ಹೆಚ್ಚು ಮಾಡಿ ಎಂದು ಶುಭ ಕೋರಿದ್ದಾರೆ.
ಉಪ ಮುಖ್ಯಮಂತ್ರಿ ಪರಮೇಶ್ವರ್ ಕೂಡಾ ಕೆಜಿಎಫ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಮೇಘನಾ ಗಾಂವ್ಕರ್, ಉಪೇಂದ್ರ, ಸುಮಲತಾ ಅಂಬರೀಶ್, ರಿಷಬ್ ಶೆಟ್ಟಿ ಯಶ್‌ಗೆ ವಿಶ್ ಮಾಡಿದ್ದಾರೆ.
