Asianet Suvarna News Asianet Suvarna News

ಕನ್ನಡಿಗರ ಬಗ್ಗೆ ಒಂದೇ ಪದದಲ್ಲಿ ವರ್ಣಿಸಿ; ರಶ್ಮಿಕಾ ಉತ್ತರಕ್ಕೆ ಫ್ಯಾನ್ಸ್ ಬೋಲ್ಡ್!

ಕನ್ನಡ ಅಭಿಮಾನಿಗಳ ಬಗ್ಗೆ ಮನಬಿಚ್ಚಿ ಮಾತನಾಡಿದ ರಶ್ಮಿಕಾ ಮಂದಣ್ಣ | ಕನ್ನಡಿಗರ ಬಗ್ಗೆ ರಶ್ಮಿಕಾ ಹೇಳಿಕೆ ಆಯ್ತು ವೈರಲ್ | ಅಷ್ಟಕ್ಕೂ ರಶ್ಮಿಕಾ ಹೇಳಿದ್ದೇನು? ಇಲ್ಲಿದೆ ನೋಡಿ. 

I love them regardless of anything says Rashmika mandanna about kannada fans
Author
Bengaluru, First Published Aug 27, 2019, 12:18 PM IST
  • Facebook
  • Twitter
  • Whatsapp

ರಶ್ಮಿಕಾ ಮಂದಣ್ಣ ಸದ್ಯ ಟಾಪಿಕ್ ಆಫ್ ದಿ ಸ್ಯಾಂಡಲ್ ವುಡ್. ಏನೇ ಮಾಡಿದರೂ ಸುದ್ದಿಯಲ್ಲಿರುತ್ತಾರೆ. ಇವರ ಹೇಳಿಕೆಗಳು ಬಹುಬೇಗ ಟ್ರೋಲ್ ಆಗುತ್ತವೆ. ಡಿಯರ್ ಕಾಮ್ರೆಡ್ ಪ್ರಮೋಶನ್ ವೇಳೆ ಕನ್ನಡ ನನಗೆ ಕಷ್ಟ ಎಂದಿದ್ದೇ ತಡ ಅದು ಸಿಕ್ಕಾಪಟ್ಟೆ ಸುದ್ದಿಯಾಗಿದ್ದು ಗೊತ್ತೇ ಇದೆ. ಈ ಒಂದು ಹೇಳಿಕೆಯಿಂದ ಕನ್ನಡಿಗರು ರಶ್ಮಿಕಾ ವಿರುದ್ಧ ತಿರುಗಿ ಬಿದ್ದರು. 

ರಶ್ಮಿಕಾ ಮಂದಣ್ಣ ನಾಯಿಗೆ ಇಟ್ಟ ಹೆಸರು ಕೇಳಿದರೆ ಶಾಕ್ ಆಗ್ತೀರ!

ಈ ವಿವಾದ ತಣ್ಣಗಾಗುತ್ತಿದ್ದಂತೆ ರಶ್ಮಿಕಾ ಮನಬಿಚ್ಚಿ ಮಾತನಾಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಸಕ್ರಿಯರಾಗಿರುವ ಇವರು ಅಭಿಮಾನಿಗಳಿಗೆ ಏನಾದರೂ ಪ್ರಶ್ನೆಗಳಿದ್ದರೆ ಕೇಳುವಂತೆ ಸ್ಟೋರಿಯಲ್ಲಿ ಹಾಕಿಕೊಂಡಿದ್ದರು. ಇದಕ್ಕೆ ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ವಿಜಯ್ ದೇವರಕೊಂಡ ಜೊತೆಗಿನ ಸ್ನೇಹದ ಬಗ್ಗೆ ಪ್ರಶ್ನಿಸಿದ್ದಾರೆ. ಬಾಲಿವುಡ್ ಎಂಟ್ರಿಯ ಬಗ್ಗೆ ಕೇಳಿದ್ದಾರೆ. ಎಲ್ಲದಕ್ಕೂ ರಶ್ಮಿಕಾ ಕೂಲ್ ಕೂಲ್ ಆಗಿ ಉತ್ತರಿಸಿದ್ದಾರೆ.

I love them regardless of anything says Rashmika mandanna about kannada fans

ನಂತರ ಅಭಿಮಾನಿಯೊಬ್ಬರು ಕನ್ನಡ ಅಭಿಮಾನಿಗಳನ್ನು ಒಂದೇ ಪದದಲ್ಲಿ ಬಣ್ಣಿಸಿ ಎಂದು ಕೇಳಿದ್ದಕ್ಕೆ, ’ಯಾರು ಏನೇ ಹೇಳಿದರೂ ನಾನು ಅವರನ್ನು ಪ್ರೀತಿಸುತ್ತೇನೆ’ ಎಂದಿದ್ದಾರೆ. ರಶ್ಮಿಕಾ ಉತ್ತರ ಅಭಿಮಾನಿಗಳಲ್ಲಿ ಖುಷಿ ತಂದಿದೆ. 

 

Follow Us:
Download App:
  • android
  • ios