ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಟನೆಯ ಹೊಸ ಸಿನಿಮಾ 'ಮೈಸಾ'. ಈ ಚಿತ್ರದ ಶೂಟಿಂಗ್ ಸದ್ಯ ಕೇರಳದಲ್ಲಿ ನಡೆಯುತ್ತಿದ್ದು, ರಶ್ಮಿಕಾ ಹಿಂದೆಂದೂ ಮಾಡದಂತಹ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬಹಳ ಕಡಿಮೆ ಸಮಯದಲ್ಲಿ ಸೌತ್ ಇಂಡಿಯನ್ ಸಿನಿಮಾದಲ್ಲಿ ದೊಡ್ಡ ಹೆಸರು ಮಾಡಿದ ನಟಿ ರಶ್ಮಿಕಾ ಮಂದಣ್ಣ. ಅಭಿಮಾನಿಗಳು 'ನ್ಯಾಷನಲ್ ಕ್ರಶ್' ಅಂತಾನೇ ಕರೆಯೋ ರಶ್ಮಿಕಾ, ಈಗ ತಮ್ಮ ಕೆರಿಯರ್‌ನಲ್ಲೇ ಹಿಂದೆಂದೂ ಮಾಡದ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಈ ಚಿತ್ರಕ್ಕೆ 'ಮೈಸಾ' ಅಂತ ಹೆಸರಿಡಲಾಗಿದೆ. ಸದ್ಯ ರಶ್ಮಿಕಾ ಮಂದಣ್ಣ ಅವರ 'ಮೈಸಾ' ಸಿನಿಮಾದ ಶೂಟಿಂಗ್ ಕೇರಳದಲ್ಲಿ ನಡೀತಿದೆ. ಚಿತ್ರತಂಡ ಕೇರಳದಲ್ಲಿ 15 ದಿನಗಳ ಶೂಟಿಂಗ್ ಶೆಡ್ಯೂಲ್ ಹಾಕಿಕೊಂಡಿದೆ.

Add Asianetnews Kannada as a Preferred SourcegooglePreferred

ಇಲ್ಲಿ ಸಖತ್ ಥ್ರಿಲ್ಲಿಂಗ್ ಎನಿಸುವ ಆ್ಯಕ್ಷನ್ ಸೀನ್‌ಗಳನ್ನು ಚಿತ್ರೀಕರಿಸಲಾಗುತ್ತಿದೆ. ಈ ಸಿನಿಮಾದಲ್ಲಿ ರಶ್ಮಿಕಾ ತುಂಬಾನೇ ಬೋಲ್ಡ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಅನ್ನೋದಕ್ಕೆ ಈ ಹಿಂದೆ ರಿಲೀಸ್ ಆಗಿದ್ದ ಫಸ್ಟ್ ಲುಕ್ ಪೋಸ್ಟರ್ ಸುಳಿವು ನೀಡಿತ್ತು. ಈ ಫಸ್ಟ್ ಲುಕ್ ಸಿಕ್ಕಾಪಟ್ಟೆ ಟ್ರೆಂಡಿಂಗ್ ಆಗಿತ್ತು. ಈ ಸಿನಿಮಾ ಕನ್ನಡ, ಮಲಯಾಳಂ, ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ರವೀಂದ್ರ ಪುಲ್ಲೆ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಅಜಯ್ ಮತ್ತು ಅನಿಲ್ ಸಯ್ಯಾಪುರೆಡ್ಡಿ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.

ಸಾಯಿ ಗೋಪ ಸಹ ನಿರ್ಮಾಪಕರಾಗಿದ್ದಾರೆ. ಅನ್‌ಫಾರ್ಮುಲಾ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. "ಹಂಟೆಡ್, ವೂಂಡೆಡ್, ಅನ್‌ಬ್ರೋಕನ್" ಅನ್ನೋದು ಈ ಚಿತ್ರದ ಟ್ಯಾಗ್‌ಲೈನ್. ವೈಶಾಖ್ ಮತ್ತು ಜಿನು ಅನಿಲ್‌ಕುಮಾರ್ ಇದರ ಪಿಆರ್‌ಒ ಆಗಿದ್ದಾರೆ. 'ಪುಷ್ಪ 2: ದಿ ರೂಲ್', 'ಛಾವಾ', 'ಸಿಕಂದರ್' ಮತ್ತು 'ಕುಬೇರ' ದಂತಹ ದೊಡ್ಡ ಸಿನಿಮಾಗಳ ಸಕ್ಸಸ್ ನಂತರ ರಶ್ಮಿಕಾ ನಟಿಸುತ್ತಿರುವ ಬಹುನಿರೀಕ್ಷಿತ ಚಿತ್ರವೇ 'ಮೈಸಾ'. ಈ ಪಾತ್ರದ ಬಗ್ಗೆ ಮಾತನಾಡಿದ್ದ ರಶ್ಮಿಕಾ, ಇದು ತಾನು ಹಿಂದೆಂದೂ ಮಾಡದ ಪಾತ್ರ ಎಂದು ಹೇಳಿಕೊಂಡಿದ್ದರು.

ಬಹಳ ಕುತೂಹಲವಿದೆ

'ನಾನು ಯಾವಾಗಲೂ ನಿಮಗೆ ಹೊಸತನ್ನು, ವಿಭಿನ್ನವಾದದ್ದನ್ನು, ಮತ್ತು ರೋಮಾಂಚನಕಾರಿಯಾದದ್ದನ್ನು ನೀಡಲು ಪ್ರಯತ್ನಿಸುತ್ತೇನೆ. ಈ ಸಿನಿಮಾ ಕೂಡಾ ಅದೇ ರೀತಿ ಇದೆ. ನಾನು ಇಲ್ಲಿಯವರೆಗೆ ನಟಿಸದ ಒಂದು ಪಾತ್ರವಿದು. ನಾನೆಂದೂ ಪ್ರವೇಶಿಸದ ಒಂದು ಹೊಸ ಜಗತ್ತು. ನನ್ನದೇ ಒಂದು ಹೊಸ ಆವೃತ್ತಿಯನ್ನು ನಾನಿಲ್ಲಿ ನೋಡುತ್ತಿದ್ದೇನೆ. ಇದು ತುಂಬಾ ಕಠಿಣವಾಗಿದೆ. ತೀವ್ರವಾಗಿದೆ ಮತ್ತು ತುಂಬಾನೇ ರಗಡ್ ಆಗಿದೆ. ನನಗೆ ಬಹಳ ಕುತೂಹಲವಿದೆ. ನಾವೇನು ಹೊಸದನ್ನು ಸೃಷ್ಟಿಸಲಿದ್ದೇವೆ ಎಂದು ನೋಡಲು ನಾನು ನಿಜವಾಗಿಯೂ ಕಾಯುತ್ತಿದ್ದೇನೆ. ಇದು ಕೇವಲ ಆರಂಭವಷ್ಟೇ' ಎಂದು ರಶ್ಮಿಕಾ ಬರೆದುಕೊಂಡಿದ್ದರು.