'ಕಿರಿಕ್ ಪಾರ್ಟಿ' ಮೂಲಕ ಸಿನಿ ಜರ್ನಿ ಶುರುಮಾಡಿದ ರಶ್ಮಿಕಾ 'ಸಾನ್ವಿ' ಎಂದೇ ಫೇಮಸ್ ಆದವರು. ಅಂದಿನಿಂದ ಇಂದಿನವರೆಗೂ ರಶ್ಮಿಕಾ ಫ್ಯಾನ್ ಕ್ಲಬ್‌ಗಳು ವಿಸ್ತರಿಸುತ್ತಿವೆ.

ಇದೀಗ ರಶ್ಮಿಕಾ ಫ್ಯಾನ್‌ಗಳಲ್ಲಿ ಎಂಟು ವರ್ಷದ ಪೋರನೊಬ್ಬ ಸೇರಿಕೊಂಡಿದ್ದಾನೆ. ಫ್ಯಾನ್ ಪೇಜ್ ವೊಂದರಲ್ಲಿ ಪೋರ ರೋಹಿತ್ ದೇವ ಬರೆದ ಪತ್ರವನ್ನು ಪೋಸ್ಟ್ ಮಾಡಿದ್ದು, ವೈರಲ್ ಆಗುತ್ತಿದೆ. ಪತ್ರದಲ್ಲೊಂದು ಹಾರ್ಟ್, ಸ್ಟಾರ್ ಹಾಗೂ ಸ್ಮೈಲಿ ಚಿತ್ರ ಬಿಡಿಸಿ ರೋಹಿತ್ ಏನು ಬರೆದಿದ್ದಾನೆ?

ಪುಟ್ಟ ತಂಗಿಯೊಂದಿಗೆ ರಶ್ಮಿಕಾ ಡ್ಯಾನ್ಸ್ ! #16YearsChallenge

'ಡಿಯರ್ ರಶ್ಮಿಕಾ/ ಗೀತಾ,

ನೀನು ಬ್ಯೂಟಿಫುಲ್ ವುಮೆನ್. ನೀನು ನೀನಾಗಿ ಅಭಿನಯಿಸುವ ರೀತಿ ನಂಗಿಷ್ಟ. ನಿನ್ನ ಮುಖ ತುಂಬಾ ಬ್ಯೂಟಿಫುಲ್. ನಿನ್ನ ಸಿನಿಮಾ ಹಾಡುಗಳೂ ನನಗೆ ತುಂಬಾ ಇಷ್ಟ. ಹೆಣ್ಣು ಮಕ್ಕಳನ್ನು ಗೌರವಿಸುವುದನ್ನು ನಿನ್ನ ಸಿನಿಮಾ 'ಗೀತಾ ಗೋವಿಂದಮ್' ನೋಡಿ ಕಲಿತೆ. ಇದು ನನ್ನ ಫೇವರೇಟ್ ಫಿಲ್ಮ್. ಮಾತನಾಡೋ ಸ್ಟೈಲ್, ಆ್ಯಕ್ಟಿಂಗ್ ಎಲ್ಲವೂ ಸೂಪರ್. ನಿನ್ನ ಸಿನಿಮಾ ಹಾಡುಗಳೂ ಕೇಳಲು ಮುದ ನೀಡುತ್ತವೆ. ತುಂಬಾ ಚಿತ್ರಗಳಲ್ಲಿ ಬ್ಯುಸಿಯಾಗಿರುವ ನಿನ್ನಿಂದ ನನಗೊಂದು ಹಗ್ ಬೇಕು,' ಲವ್, ರೋಹಿತ್ ದೇವ್' ಎಂದು ಪ್ರೀತಿಯನ್ನು ವ್ಯಕ್ತಪಡಿಸಿದ್ದಾನೆ.

ಒಟ್ಟಿನಲ್ಲಿ ರಶ್ಮಿಕಾರನ್ನು ಎಲ್ಲರೂ ಇಷ್ಟ ಪಡುವವರೇ.